HEALTH TIPS

No title

ಅಥರ್ಾಂತರಂಗ 4 ಸಮಾರೋಪ ಮುಳ್ಳೇರಿಯ: ಗಡಿನಾಡು ಕಾಸರಗೋಡಿನ ಸಂಸ್ಕೃತಿ ಸಂವರ್ಧನೆಯಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದುದು. ಇಂದಿನ ಆಧುನಿಕ ಕಾಲಘಟ್ಟದಲ್ಲಿ ಪರಂಪರೆಯ ಉಳಿಸುವಿಕೆಯೊಂದಿಗೆ ಹೊಸ ತಲೆಮಾರಿಗೆ ಆಕರ್ಷಣೀಯವಾಗಿ ಯಕ್ಷಗಾನವನ್ನು ಪರಿಚಯಿಸುವಿಕೆಯಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಹನರ್ಿಶಿ ಚಟುವಟಿಕೆಗಳು ಶ್ಲಾಘನೀಯವೆಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಕ್ಷೇತ್ರಪರಿಸರದಲ್ಲಿ ಶನಿವಾರ ಮುಳಿಯಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಹಕಾರದೊಂದಿಗೆ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆ ಅರ್ಥಗಾರಿಕಾ ಶಿಬಿರ ರಂಗಪ್ರಸಂಗ "ಅಥರ್ಾಂತರಂಗ 4"= ಪೋಷಕ ಪಾತ್ರಗಳ ಪಾತ್ರ ಚಿತ್ರಣದ ಬಗೆಗಿನ ಒಂದು ದಿನದ ಪುನಶ್ಚೇತನಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ತೆಂಕುತಿಟ್ಟಿನ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಮತ್ತು ದಶಾವತಾರಿ ಸೂರಿಕುಮೇರಿ ಗೋವಿಂದ ಭಟ್ ರವರಿಗೆ ವಿಶೇಷ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಲಿಪ ನಾರಾಯಣ ಭಾಗವತರು ಪರಂಪರೆಯ ಅರಿವನ್ನು ಮೂಡಿಸುವ ಭಾಗವಾಗಿ ಪ್ರತಿಷ್ಠಾನ ಹಮ್ಮಿಕೊಳ್ಳುತ್ತಿರುವ ಸರಣಿ ಕಾರ್ಯಕ್ರಮಗಳು ಅತ್ಯಪೂರ್ವ ದಾಖಲೀಕರಣ ಪ್ರಕ್ರಿಯೆಯಾಗಿ ವಿಶಿಷ್ಟವಾಗಿ ಮೂಡಿಬರುವಲ್ಲಿ ಯಶಸ್ವಿಯಾಗುತ್ತಿದೆ ಎಂದು ತಿಳಿಸಿದರು. ಎಷ್ಟೇ ಮಾನ-ಸನ್ಮಾನಗಳು ತನ್ನನ್ನು ಗುರುತಿಸಿ ನೀಡಲ್ಪಟ್ಟಿದ್ದರೂ, ಹುಟ್ಟೂರಿನಲ್ಲಿ ಕೊಡಮಾಡುವ ಮಾನ ಸನ್ಮಾನ ಎಲ್ಲಕ್ಕಿಂತ ಮಿಗಿಲು ಮತ್ತು ಹೃದಯವನ್ನು ಪುಳಕಗೊಳಿಸುವಂತದ್ದು ಎಂದು ಅವರು ನುಡಿದರು. ದಶಾವತಾರಿ ಸೂರಿಕುಮೇರಿ ಗೋವಿಂದ ಭಟ್ ಮಾತನಾಡಿ ಮಹಾನ್ ಕಲೆಯಾದ ಯಕ್ಷಗಾನಕ್ಕೆ ಕಾಸರಗೊಡಿನ ಕೊಡುಗೆ ಅಂದೂ-ಇಂದೂ ಅಪಾರ ಪ್ರಮಾಣದಲ್ಲಿ ದಾಖಲೀಕರಣಗೊಳ್ಳುವಷ್ಟು ವಿಶಾಲವಾಗಿದ್ದು, ಈ ಮಣ್ಣಿನ ಮೂಲ ಸತ್ವವಾಗಿ ಎಂದಿಗೂ ಗುರುತಿಸಿಕೊಳ್ಳುವಂತದ್ದು. ಹಿರಿಯ ತಲೆಮಾರಿನ ಸಾಲುಸಾಲು ಕಲಾವಿದರ ನೆನಪಿನಲ್ಲಿ ಅವರು ತೊರಿಸಿಕೊಟ್ಟ ಮಾರ್ಗದರ್ಶನ, ಸತ್ವಪೂರ್ಣ ಶ್ರೀಮಂತಿಕೆಯನ್ನು ಗಮನದಲ್ಲಿಟ್ಟು ಅವನ್ನು ಉಳಿಸಿ ಬೆಳೆಸುವ ನಿಟ್ಟಿನ ಪ್ರಯತ್ನಗಳು ನಿತ್ಯ ನಡೆಯುತ್ತಿರಲಿ ಎಂದು ತಿಳಿಸಿದರು. ಧರ್ಮದಶರ್ಿ ಹರಿಕೃಷ್ಣ ಪುನರೂರು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಉದ್ಯಮಿ ಶಶಿಧರ ಶೆಟ್ಟಿ ನಿಟ್ಟೆ, ಸಾಹಿತಿ, ಪೆಣರ್ೆ ಮುಚ್ಚಿಲೋಟು ಭಗವತಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀಕೃಷ್ಣಯ್ಯ ಅನಂತಪುರ, ಉದ್ಯಮಿ ವೇಣುಗೋಪಾಲ ತತ್ವಮಸಿ ಉಪಸ್ಥಿತರಿದ್ದು ಮಾತನಾಡಿದರು. ಶಂಕರನಾರಾಯಣ ಹೊಳ್ಳ ಮುಳಿಯಾರು, ಬೆಳ್ಳಿಗೆ ನಾರಾಯಣ ಮಣಿಯಾಣಿ, ಸಂಕಬೈಲು ಸತೀಶ ಅಡಪ, ರಘುರಾಮ ಗೋಳಿಯಡ್ಕ ಉಪಸ್ಥಿತರಿದ್ದರು. ಸೀತಾರಾಮ ಬಳ್ಳುಳ್ಳಾಯ ಸ್ವಾಗತಿಸಿ, ಸಿರಿಬಾಗಿಲು ರಾಮಕೃಷ್ಣ ಮಯ್ಯ ವಂದಿಸಿದರು. ಸಂಕಬೈಲು ಸತೀಶ ಅಡಪ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ ರಾವ್ ಚಿಗುರುಪಾದೆ ಅಭಿನಂದನಾ ಭಾಷಣ ಮಾಡಿದರು. ಸಮಾರೋಪ ಕಾರ್ಯಕ್ರಮದ ಮೊದಲು ಸಮಾರೋಪ ತಾಳಮದ್ದಳೆ ಫ್ರೌಂಡ್ರಕ ವಧೆ ನಡೆಯಿತು. ಹಿಮ್ಮೇಳದಲ್ಲಿ ಬಲಿಪ ನಾರಾಯಣ ಭಾಗವತರು,ರಾಮಕೃಷ್ಣ ಮಯ್ಯ ಸಿರಿಬಾಗಿಲು, ಕೃಷ್ಣಪ್ರಕಾಶ್ ಉಳಿಯತ್ತಾಯ, ಮಧೂರು ಗೋಪಾಲಕೃಷ್ಣ ನಾವಡ ಹಾಗು ಮುಮ್ಮೇಳದಲ್ಲಿ ರಾಧಾಕೃಷ್ಣ ಕಲ್ಚಾರ್, ಜಬ್ಬಾರ್ ಸಮೋ ಸಂಪಾಜೆ, ಬಂಟ್ವಾಳ ಜಯರಾಮ ಆಚಾರ್ಯ ಭಾಗವಹಿಸಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries