ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
ವಿಶ್ವ ಆರೋಗ್ಯ ಸಂಸ್ಥೆ ಸೌಹಾರ್ದ ರಾಯಭಾರಿಯಾಗಿ ಜಿಂಬಾಬ್ವೆ ಅಧ್ಯಕ್ಷ ರಾಬಟರ್್ ಮುಗಾಬೆ ನೇಮಕ
ವಾಶಿಂಗ್ಟನ್: ಆಫ್ರಿಕಾದ ದೀರ್ಘಕಾಲದ ನಾಯಕ, ಜಿಂಬಾಬ್ವೆ ಅಧ್ಯಕ್ಷ ರಾಬಟರ್್ ಮುಗಾಬೆ(93) ಅವರನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯ ಸೌಹಾರ್ದ ರಾಯಭಾರಿಯಾಗಿ ನೇಮಿಸಲಾಗಿದೆ.
ಉರುಗ್ವೆಯಲ್ಲಿ ನಡೆದ ಸಭೆಯಲ್ಲಿ ಡಬ್ಲುಎಚ್ಒ ಮಹಾನಿದರ್ೇಶಕ ಟೆಡ್ರೋಸ್ ಗೆಬ್ರೆಯೇಸಸ್ ಮುಗಾಬೆ ಅವರ ನೇಮಕಾತಿಯನ್ನು ಪ್ರಕಟಿಸಿದ್ದಾರೆ. ಇಥಿಯೋಪಿಯಾದ ಟೆಡ್ರೋಸ್ ಡಬ್ಲುಎಚ್ಒ ಆಫ್ರಿಕಾ ಮೂಲದ ಮೊದಲ ಮಹಾನಿದರ್ೇಶಕರಾಗಿದ್ದಾರೆ.
ಮುಗಾಬೆ ಅವರ ನೀತಿಗಳಿಂದ ಜಿಂಬಾಬ್ವೆಯಲ್ಲಿ ಆರೋಗ್ಯ ವ್ಯವಸ್ಥೆ, ಆಥರ್ಿಕತೆ ಸೇರಿ ಹಲವು ರೀತಿಯ ಬಿಕ್ಕಟ್ಟಿಗೆ ಕಾರಣವಾಗಿದೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ಹಲವು ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸೌಹಾರ್ದ ರಾಯಬಾರಿ ಸ್ಥಾನಕ್ಕೆ ಮುಗಾಬೆ ಆಯ್ಕೆಯನ್ನು ಜಾಗತಿಕ ಮಟ್ಟದ ಅನೇಕ ಸಂಸ್ಥೆಗಳು ವಿರೋಧ ಮತ್ತು ಕಳವಳ ವ್ಯಕ್ತಪಡಿಸಿವೆ





