HEALTH TIPS

No title

ಬಹುತ್ವ ಮತ್ತು ವೈವಿಧ್ಯ ಸಮಾಜದ ಶಕ್ತಿ : ಡಾ.ವಸಂತ ಕುಮಾರ ಪೆರ್ಲ ಮಂಜೇಶ್ವರ: ಜಾತಿ ಮತ ಧರ್ಮ ಪಂಥ ಪಂಗಡ ಪಕ್ಷ ಪ್ರದೇಶ ಭಾಷೆ ಮುಂತಾದ ಹತ್ತಾರು ಪ್ರಭೇದಗಳು, ವ್ಯತ್ಯಾಸಗಳು ನಮ್ಮ ಸಮಾಜದಲ್ಲಿ ಮೇಲ್ನೋಟಕ್ಕೆ ಕಂಡು ಬಂದರೂ ಅವೆಲ್ಲ ಸಮುದ್ರದ ಮೇಲಿನ ತೆರೆಗಳ ಹಾಗೆ ಸಮಾಜವನ್ನು ಚಲನಶೀಲವಾಗಿ ಇಡುವುದಕ್ಕೆ ನೆರವಾಗುವಂಥವು. ಆದರೆ ಒಳಗೆ ಅವೆಲ್ಲ ಒಂದೇ ಆಗಿವೆ. ನಮ್ಮ ಸಮಾಜದಲ್ಲಿ ಎಲ್ಲೆಡೆ ಇಂತಹ ಬಹುತ್ವ ಕಂಡು ಬರುತ್ತದಾದರೂ ಸಮಾಜವನ್ನು ಬೇರೆ ಬೇರೆ ಮಗ್ಗಲುಗಳಲ್ಲಿ ಬಲಪಡಿಸುವುದಕ್ಕೆ ಅವು ನೆರವಾಗುತ್ತದೆ. ಈ ಬಹುತ್ವವೇ ನಮ್ಮ ಶಕ್ತಿಯೂ ಆಗಿದೆ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿದರ್ೇಶಕ ಡಾ.ವಸಂತ ಕುಮಾರ ಪೆರ್ಲ ಅವರು ಹೇಳಿದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಜರಗಿದ ಸಮಾರಂಭದಲ್ಲಿ ವಾಷರ್ಿಕ ಸಂಚಿಕೆ `ಒರಮ್' ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ಬಹುತ್ವ ಮತ್ತು ವೈವಿಧ್ಯವನ್ನು ನಾವು ಬೇರೆ ದೇಶಗಳಲ್ಲಿ ಕಾಣಲಾರೆವು. ಈ ಬಹುತ್ವದಿಂದಾಗಿ ನಮ್ಮ ದೇಶ ಜಾನಪದ ಮತ್ತು ಕೌಟುಂಬಿಕ ಬದುಕು ಅತ್ಯಂತ ಶ್ರೀಮಂತವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೆ ಇಂತಹ ನೂರಾರು ಜಾನಪದ ಬದುಕುಗಳನ್ನು ಕಾಣಬಹುದಾಗಿದೆ. ಇದು ನಮ್ಮ ದೊಡ್ಡ ಶಕ್ತಿ ಎಂದು ಅವರು ಹೇಳಿದರು. `ಒರಮ್' ಎಂದರೆ ಒರೆಗಲ್ಲು ಎಂದರ್ಥ. ಇದರಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾಥರ್ಿಗಳ ವೈವಿಧ್ಯಮಯವಾದ ಬರಹಗಳಿವೆ. ಬಹುಭಾಷೆಗಳ ಮೂಲಕ ತಮ್ಮ ತಮ್ಮ ಬದುಕಿನ ಸೂಕ್ಷ್ಮ ಅಭಿವ್ಯಕ್ತಿ ಸಾಧ್ಯವಾಗಿರುವುದು ಇಂತಹ ಬಹುತ್ವದಿಂದ ಎಂದು ಡಾ.ಪೆರ್ಲ ಅವರು ಶ್ಲಾಘಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಜಾಜರ್್ ಮ್ಯಾಥ್ಯೂ ವಹಿಸಿದ್ದರು. ಕಾಲೇಜು ಮ್ಯಾಗಸಿನ್ಗಳ ಮೂಲಕ ವಿದ್ಯಾಥರ್ಿಗಳು ಪ್ರಾರಂಭಿಕ ಅಭಿವ್ಯಕ್ತಿಯನ್ನು ಗಳಿಸಿಕೊಂಡು ಮುಂದೆ ಬೇರೆ ಬೇರೆ ರೀತಿಯ ಬರವಣಿಗೆಗಳನ್ನು ಮಾಡುತ್ತಾ ಜೀವನದಲ್ಲಿ ಮುಂದೆ ಬರಬೇಕು ಎಂದು ಅವರು ಹೇಳಿದರು. ಕಾಲೇಜಿನ ಉಪಪ್ರಾಂಶುಪಾಲೆ ಅಮಿತ ಅಧ್ಯಾಪಕರ ಮತ್ತು ವಿದ್ಯಾಥರ್ಿಗಳ ಸಂಘಟಿತ ಪ್ರಯತ್ನದಿಂದಾಗಿ ಸರಕಾರಿ ಕಾಲೇಜಿನಲ್ಲಿ ಇಂತಹ ಯಶಸ್ವೀ ಮ್ಯಾಗಸಿನ್ ಒಂದನ್ನು ತರಲು ಸಾಧ್ಯವಾಗಿದೆ ಎಂದರು. ಪ್ರಾಧ್ಯಾಪಕ ಸಂಪಾದಕ ಶಿವಶಂಕರ್ ಅವರು ಕನ್ನಡ, ಮಲಯಾಳ, ಹಿಂದಿ, ಇಂಗ್ಲೀಷ್ ಮುಂತಾದ ಭಾಷೆಗಳ ಬರವಣಿಗೆಗಳ ಮೂಲಕ ಮ್ಯಾಗಸಿನ್ ಶ್ರೀಮಂತವಾಗಿ ಮೂಡಿ ಬಂದಿದೆ ಎಂದರು. ಪ್ರಾಧ್ಯಾಪಕ ಗಣೇಶ್, ಸಜಿತ್, ವಿದ್ಯಾಥರ್ಿ ಮುಖಂಡ ಅಜಿತ್ ಮುಂತಾದವರು ಸಂದಭರ್ೋಚಿತವಾಗಿ ಮಾತನಾಡಿದರು. ವಿದ್ಯಾಥರ್ಿನಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಥರ್ಿ ಸಂಪಾದಕ ವಿವೇಕ್ ವಂದಿಸಿದರು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries