HEALTH TIPS

No title

ಸಂಸ್ಕೃತ ಶಿಕ್ಷಕರ ರಾಜ್ಯ ಸಮ್ಮೇಳನ=ಪೂರ್ವಭಾವಿ ಸಭೆ ಕಾಸರಗೋಡು: ಸಮೃದ್ದತೆಯ ಪ್ರತೀಕವಾದ ಸಂಸ್ಕೃತ ಭಾಷೆ, ಸಾಹಿತ್ಯಗಳ ಪ್ರಚುರಪಡಿಸುವಿಕೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು, ಮಕ್ಕಳಲ್ಲಿ ಆ ಬಗ್ಗೆ ಆಸಕ್ತಿ ಮೂಡಿಸುವ ಕಾಯಕನಿರತ ಶಿಕ್ಷಕರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಬೇಕು ಎಂದು ಖ್ಯಾತ ನ್ಯಾಯವಾದಿ ಐ.ವಿ. ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೇರಳ ಸಂಸ್ಕೃತ ಅಧ್ಯಾಪಕ ಫೆಡರೇಶನ್ ನ 40ನೇ ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ಕಾಸರಗೋಡು ಟೌನ್ ಜಿ.ಯು.ಪಿ.ಶಾಲೆಯಲ್ಲಿ ಭಾನುವಾರ ಸಂಜೆ ನಡೆದ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಸ್ಕೃತ ಶಿಕ್ಷಕರ ನಿರಂತರ ಅವಗಣನೆಗೆ ಸಂಘಟಿತರಾಗಿ ಬೇಡಿಕೆಗಳ ಪೂರೈಕೆಗೆ ಆಳುವ ವರ್ಗವನ್ನು ಎಚ್ಚರಿಸಬೇಕಾಗಿದೆ. ಜೊತೆಗೆ ವರ್ತಮಾನದ ವಿವಿಧ ಮಜಲುಗಳ ಸವಾಲುಗಳಿಗೆ ಅಗತ್ಯ ಪರಿಹಾರಗಳನ್ನು ಕಾಣುವಲ್ಲಿ ಸಮ್ಮೇಳನಗಳು ಅಗತ್ಯವಾಗಿದೆ ಎಂದು ಅವರು ತಿಳಿಸಿದರು. ಭಾಷೆಯೊಂದರ ಬೆಳವಣಿಗೆ, ಜನಸ್ನೇಹಿಯಾಗಿಸುವಲ್ಲಿ ಪ್ರತಿಯೊಬ್ಬರ ಚಿಂತನೆಗಳು ಏಕೀಕರಿಸಲ್ಪಟ್ಟು ತಳೆಯುವ ಮಹತ್ವದ ನಿರ್ಣಯಗಳು ಫಲಪ್ರದವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನೀಲಮನ ಶಂಕರನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಮಿತಿ ಕೋಶಾಧಿಕಾರಿ ಗಿರೀಶ್ ಕೆ.ಕೆ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಸಮಸ್ಕೃತ ಶಿಕ್ಷಕರ ಸಮ್ಮೇಳನದ ಯಶಸ್ವಿ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡಿದರು. ನಗರಸಭಾ ಸದಸ್ಯ ರಾಶಿದ್ ಪೂರಣಂ, ಜಿಯುಪಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ್ ಕುಮಾರ್, ಕೆಡಿಎಸ್ಟಿಎಫ್ ಪ್ರಾಂತ್ಯ ಸದಸ್ಯ ಸುನಿಲ್ ಕುಮಾರ್ ಕೆ, ಮಧು ಕಣ್ಣೋಡಿ, ಜಿಲ್ಲಾ ಜೊತೆಕಾರ್ಯದಶರ್ಿ ಕೃಷ್ಣಪ್ರಸಾದ್ ಕೆ, ಜಿಲ್ಲಾ ಸದಸ್ಯ ಅರುಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಜಿಜು ಎಂ.ಟಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಸಂಘಟನೆಯ ರಾಜ್ಯಾಧ್ಯಕ್ಷ ನೀಲಮನ ಶಂಕರನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಹರಿಕೃಷ್ಣನ್ ಕೆ.ಟಿ. ವಂದಿಸಿದರು. ಜಿಲ್ಲಾ ಕಾರ್ಯದಶರ್ಿ ಹರಿಕುಮಾರ್ ಇ.ಎ. ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ರಾಜ್ಯ ಸಮ್ಮೇಳನದ ಅಂಗವಾಗಿ ವಿವಿಧ ಸಮಿತಿಗಳನ್ನು ರೂಪೀಕರಿಸಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries