ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 14, 2017
ವಿಶ್ವ ತುಳುವೆರೆ ಆಯನೊ ಕೂಟದ ಕಾರ್ಯವೈಖರಿ ಅಭಿನಂದನಾರ್ಹ- ಡಾ.ಚಿನ್ನಪ್ಪ ಗೌಡ
ಡಿ.23,24 ಪಿಲಿಕುಳದಲ್ಲಿ ತುಳುನಾಡೋಚ್ಚಯ-2017
ಬದಿಯಡ್ಕ: ತುಳುನಾಡಿನ ಪ್ರಸ್ತುತ ಪರಿಸ್ಥಿತಿಗಳಲ್ಲಿ ವಿಶ್ವ ತುಳುವೆರೆ ಆಯನೊ ಕೂಟದ ಕೆಲಸಕಾರ್ಯಗಳು ಸ್ತುತ್ಯರ್ಹವಾಗಿದೆ. ಮತ್ತು ಆ ಕೆಲಸಗಳನ್ನು ಶ್ರದ್ಧೆಯಿಂದ ಮುಂದುವರಿಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ವಿಶ್ವ ತುಳುವೆರೆ ಆಯನೊ ಕೂಟಕ್ಕೆ ಅಭಿನಂದನೆ ಸಲ್ಲಿಸುತ್ತ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಅಧ್ಯಕ್ಷ ಡಾ.ಚಿನ್ನಪ್ಪ ಗೌಡ ಮಾತನಾಡಿದರು.
ವಿಶ್ವ ತುಳುವೆರೆ ಆಯನೊ ಕೂಟ ಮತ್ತು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿ.23,24 ರಂದು ಪಿಲಿಕುಳದಲ್ಲಿ ತುಳುನಾಡಿನಲ್ಲಿ ಜಾತಿ,ಮತ,ಭಾಷಾ ಸೌಹಾರ್ಧತೆ ಎಂಬ ನೆಲೆಗಟ್ಟಿನಲ್ಲಿ ನಡೆಯುವ ತುಳುನಾಡೋಚ್ಚಯ 2017 ಕಾರ್ಯಕ್ರಮದ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
2016 ಡಿ.9ರಿಂದ 13ರ ವರೆಗೆ ಬದಿಯಡ್ಕದಲ್ಲಿ 5 ದಿನಗಳ ಕಾಲ 5 ವೇದಿಕೆಗಳಲ್ಲಿ ಜರಗಿದ ವಿಶ್ವ ತುಳುವೆರೆ ಆಯನೊದಲ್ಲಿ ಮಂಡಿಸಿದ ಠರಾವಿನಂತೆ ತುಳುನಾಡಿನಾದ್ಯಂತ ಜಾತಿ,ಮತ,ಭಾಷಾ ಸೌಹಾರ್ಧತೆಯನ್ನು ಬೆಳೆಸುವ ಸಲುವಾಗಿ ಪ್ರತಿ ವರ್ಷವೂ ತುಳುನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ತುಳುನಾಡೋಚ್ಚಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ವರ್ಷದ ಕಾರ್ಯಕ್ರಮವನ್ನು ಮಂಗಳೂರಿನ ಪಿಲಿಕುಳದಲ್ಲಿರುವ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ತುಳುಗ್ರಾಮದಲ್ಲಿ ನಡೆಸಲು ತೀಮರ್ಾನಿಸಲಾಗಿದ್ದು ಡಿ.23,24ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕಿ ಮೂಲ್ಕಿ ವಿಜಯಾ ಕಾಲೇಜಿನ ಅಧ್ಯಕ್ಷೆ ಶಮೀನಾ ಆಳ್ವ ಹೇಳಿದರು.
ಸಭೆಯಲ್ಲಿ ಪಿಲಿಕುಳ ನಿಸರ್ಗಧಾಮದ ಕಾರ್ಯನಿವರ್ಾಹಕ ನಿದರ್ೇಶಕ ಪ್ರಸನ್ನ ವಿ, ಆಢಳಿತಾಧಿಕಾರಿ ಬಾಬು ದೇವಾಡಿಗ, ಪಿಲಿಕುಳ ಜೈವಿಕ ಉದ್ಯಾನವನದ ನಿದರ್ೇಶಕ ಜಯಪ್ರಕಾಶ್ ಭಂಡಾರಿ, ಪಿಲಿಕುಳ ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ನಿತಿನ್, ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದಶರ್ಿ ನಿಟ್ಟೆ ಶಶಿಧರ ಶೆಟ್ಟಿ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ತು.ರ.ವೇ. ಪ್ರಧಾನ ಕಾರ್ಯದಶರ್ಿ ಪ್ರಶಾಂತ್ ಭಟ್ ಕಡಬ, ಮೂಲ್ಕಿ ಬಂಟರ ಸಂಘ ಮಹಿಳಾ ಸಮಿತಿ ಅಧ್ಯಕ್ಷೆ ಗೀತ ಜೆ ಹೆಗ್ಡೆ, ಭಾರತಿ ರೈ ಕಿನ್ನಿಗೋಳಿ, ಅಬ್ದುಲ್ ರಶೀದ್, ಶಿವ ಶೆಟ್ಟಿ, ಬೊಳಿಕೆ ಜಾನಪದ ಕಲಾತಂಡದ ಅಧ್ಯಕ್ಷ ಶಂಕರ ಸ್ವಾಮಿಕೃಪ ಮೊದಲಾದವರು ಅಭಿಪ್ರಾಯ ಮಂಡಿಸಿದರು. ವಿಶ್ವ ತುಳುವೆರೆ ಆಯನೊಕೂಟದ ಸಂಚಾಲಕ ಡಾ. ರಾಜೇಶ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ಮತ್ತು ರೂಪುರೇಶೆಗಳ ಬಗ್ಗೆ ವಿವರ ನೀಡಿದರು. ಹರ್ಷ ರೈ ಪುತ್ರಕಳ ಸ್ವಾಗತಿಸಿ, ಶರತ್ ಶೆಟ್ಟಿ ಪಡುಪಳ್ಳಿ ವಂದಿಸಿದರು.





