HEALTH TIPS

No title

ಅರ್ಹ ಕುಟುಂಬಗಳಿಗೆ ಪಡಿತರ ಕಾಡರ್್ ಕಾಸರಗೋಡು: ಲೈಫ್ ಮಿಷನ್ ಯೋಜನೆಯಲ್ಲಿ ಅರ್ಹರಾದ ಪಡಿತರ ಕಾಡರ್್ ಇಲ್ಲದ ಕುಟುಂಬಗಳನ್ನು ಸೇರ್ಪಡೆಗೊಳಿಸಲು ಸರಕಾರದ ಮಟ್ಟದಲ್ಲಿ ಸಮಾಲೋಚನೆ ನಡೆಸಲಾಗುವುದು ಎಂದು ಕಂದಾಯ, ವಸತಿ ನಿಮರ್ಾಣ ಮತ್ತು ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಇ.ಚಂದ್ರಶೇಖರನ್ ಹೇಳಿದ್ದಾರೆ. ಕಾಞಂಗಾಡು ನಗರಸಭಾ ಸಭಾಂಗಣದಲ್ಲಿ ಜರಗಿದ ಲೈಫ್ ಮಿಷನ್ ಕಾಸರಗೋಡು ಜಿಲ್ಲಾ ಮಟ್ಟದ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸ್ಥಳೀಯಾಡಳಿತ ಸಂಸ್ಥೆಗಳು ಲೈಫ್ ಮಿಷನ್ ಯೋಜನೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕು. ಅರ್ಧದಲ್ಲೇ ಕಾಮಗಾರಿ ಸ್ಥಗಿತಗೊಂಡ ಮನೆಗಳನ್ನು 2018ರ ಮಾಚರ್್ 31ರ ಮುಂಚಿತವಾಗಿ ಪೂತರ್ಿಗೊಳಿಸಲು ಸಾಧ್ಯವಾಗಬೇಕು. ಇದಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳು ವಾಷರ್ಿಕ ಯೋಜನೆಯಲ್ಲಿ ಹಣ ಮೀಸಲಿರಿಸಬೇಕು ಎಂದು ಅವರು ತಿಳಿಸಿದರು. ಭೂಮಿ ಮತ್ತು ಮನೆ ಇಲ್ಲದ 12,813 ಕುಟುಂಬಗಳು, ಮನೆಗಳಿಲ್ಲದ 7957 ಕುಟುಂಬಗಳು, ಮನೆ ಪೂತರ್ಿಗೊಳಿಸದ 2072 ಕುಟುಂಬಗಳು ಜಿಲ್ಲೆಯಲ್ಲಿವೆ ಎಂಬುದಾಗಿ ಅಂಕಿ ಅಂಶಗಳು ಹೇಳುತ್ತಿವೆ. ಸ್ಥಳ ಮತ್ತು ಮನೆ ಇಲ್ಲದವರಿಗಾಗಿ ವಸತಿ ಸಮುಚ್ಛಯಗಳನ್ನು ನಿಮರ್ಿಸಲು ಭೂಮಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಉಚಿತವಾಗಿ ಭೂಮಿ ಒದಗಿಸಲು ಸಿದ್ಧರಿರುವವರ ಮಾಹಿತಿಯನ್ನು ಅ.31ರೊಳಗೆ ಸಂಗ್ರಹಿಸಬೇಕು ಎಂದು ಸಚಿವರು ನಿದರ್ೇಶಿಸಿದರು. ಅರ್ಹರಾದವರಿಗೆ ಮನೆ ಲಭಿಸುವುದಾಗಿ ಖಾತರಿಪಡಿಸಬೇಕು. ಸಂಘ ಸಂಸ್ಥೆಗಳು, ವ್ಯಕ್ತಿಗಳು, ಪ್ರವಾಸಿಗಳು, ಬೃಹತ್ ಕಾಪರ್ೋರೇಟರ್ಗಳು ಮುಂತಾದ ಎಲ್ಲರ ಸಹಾಯ ಸಹಕಾರಗಳನ್ನು ಈ ಯೋಜನೆಗೆ ಸರಕಾರವು ಬಯಸುತ್ತಿದೆ. ನಿಷ್ಪಕ್ಷ ಹಾಗೂ ಸುಧಾರಿತ ರೀತಿಯಲ್ಲಿ ಅರ್ಹರಾದ ಫಲಾನುಭವಿಗಳ ಅಂತಿಮ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅವರು ನುಡಿದರು. ನವೆಂಬರ್ 1ರಂದು ರಾಜ್ಯಮಟ್ಟದಲ್ಲಿ ಲೈಫ್ ಸ್ಕೀಮ್ ಯೋಜನೆಯನ್ನು ಘೋಷಿಸಲಾಗುವುದು. ನವೆಂಬರ್ ಮೊದಲ ವಾರ ಜಿಲ್ಲೆಯಲ್ಲೂ ಯೋಜನೆಗೆ ಚಾಲನೆ ಕೊಡಲಾಗುವುದು ಎಂದರು. ಜಿಲ್ಲೆಯಲ್ಲಿ 7.74 ಎಕರೆ ಭೂಮಿ ಮಾತ್ರವೇ ಇದುವರೆಗೆ ದೊರಕಿದೆ. ಎಲ್ಲರಿಗೂ ಮನೆ ಲಭಿಸಲು 240 ಫ್ಲ್ಯಾಟ್ ಅಗತ್ಯವಿರುವುದಾಗಿ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾಕಾರಿ ಕೆ.ಜೀವನ್ಬಾಬು, ಪಂಚಾಯತು ಸಹಾಯಕ ನಿದರ್ೇಶಕ ಕೆ.ವಿನೋದ್ಕುಮಾರ್, ಬಡತನ ಸರಳೀಕರಣ ವಿಭಾಗ ಯೋಜನಾ ನಿದರ್ೇಶಕ ವಿ.ಕೆ.ದಿಲೀಪ್, ಕಾಞಂಗಾಡು ನಗರಸಭಾ ಅಧ್ಯಕ್ಷ ವಿ.ವಿ.ರಮೇಶನ್, ಬ್ಲಾಕ್ ಪಂಚಾಯತು ಅಧ್ಯಕ್ಷ ಓಮನಾ ರಾಮಚಂದ್ರನ್, ಪಿ.ರಾಜನ್, ಗ್ರಾಮ ಪಂಚಾಯತು ಅಧ್ಯಕ್ಷರು, ಕಾರ್ಯದಶರ್ಿಗಳು, ನಿರ್ವಹಣಾ ಅಧಿಕಾರಿಗಳು ಮಾತನಾಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries