HEALTH TIPS

No title

ಕಾಸರಗೋಡಿನ ಕನ್ನಡಿಗರ ಹಕ್ಕುಗಳ ಸಂರಕ್ಷಣೆಗೆ ಬದ್ಧ: ಇ.ಎಂ.ಎಸ್ ಬರೆದ ಪತ್ರ ಪತ್ತೆ ಪೆರ್ಲ: ಕಾಸರಗೋಡಿನ ಭಾಷಾ ಅಲ್ಪಸಂಖ್ಯಾಕ ಕನ್ನಡಿಗರ ಹಿತರಕ್ಷಣೆಯಾಗಬೇಕು ಎಂಬ ನಿಲುವನ್ನು ಹಿಂದಿನಿಂದಲೂ ಕೇರಳದ ಮುಖ್ಯಮಂತ್ರಿಗಳು ಒಪ್ಪಿಕೊಂಡು ಬಂದಿದ್ದರು ಎಂಬುದಕ್ಕೆ ಸಾಕ್ಷಿಯಾಗಿ 1957 ರಲ್ಲಿ ಕೇರಳದ ಮೊದಲ ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್ ನಂಬೂದರಿಪ್ಪಾಡ್ ಅವರು ಪೆರ್ಲ ನಿವಾಸಿಯೊಬ್ಬರಿಗೆ ಬರೆದಿದ್ದ ಪತ್ರ ಪತ್ತೆಯಾಗಿದೆ. ಈಗ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ವ್ಯವಸ್ಥಾಪಕರಾದ ಶ್ರೀಕೃಷ್ಣ ವಿಶ್ವಾಮಿತ್ರ ಅವರು ತಮ್ಮ ವಿದ್ಯಾಥರ್ಿ ಜೀವನದ ಕಾಲದಲ್ಲಿ ಕನ್ನಡಿಗರ ಸಮಸ್ಯೆಗಳ ಬಗ್ಗೆ ಕೇರಳದ ಮುಖ್ಯಮಂತ್ರಿಯವರಿಗೆ ಬರೆದ ಪತ್ರಕ್ಕೆ ಸ್ವಂತ ರುಜುವಿರುವ ಪತ್ರದ ಮೂಲಕ ಉತ್ತರಿಸಿದ್ದ ಇ.ಎಂ.ಎಸ್ ಅವರು ಕನ್ನಡಿಗರ ಸಹಿತ ಕೇರಳದ ಗಡಿಗಳಲ್ಲಿರುವ ಎಲ್ಲ ಭಾಷಾ ಅಲ್ಪಸಂಖ್ಯಾಕರ ಸಾಂವಿಧಾನಿಕ ಹಕ್ಕುಗಳನ್ನು ಮನ್ನಿಸಿ ಅವರೆಲ್ಲರ ಹಿತವನ್ನು ರಕ್ಷಿಸಲಾಗುವುದು ಎಂದಿದ್ದರು. ಆಗ ತಾನೇ ಭಾಷಾವಾರು ಪ್ರಾಂತ್ಯ ರಚನೆಯಾಗಿ ಕೇರಳ ರಾಜ್ಯ ರೂಪುಗೊಂಡು ಇ,ಎಂ.ಎಸ್ ಎಡರಂಗ ಸರಕಾರದ ಪ್ರಥಮ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು. ಕಾಸರಗೋಡು ಕೇರಳದ ಪಾಲಾಗಿತ್ತು. ಇದನ್ನು ವಿರೋಧಿಸಿ ನಡೆದ ಕನ್ನಡ ಚಳುವಳಿಯ ಉತ್ತುಂಗದ ಕಾಲವದು. ಪೆರ್ಲ ಪ್ರೌಢಶಾಲೆಯಲ್ಲಿ ವ್ಯಾಸಂಗ ನಡೆಸುತ್ತಿದ್ದ ಶ್ರೀಕೃಷ್ಣ ವಿಶ್ವಾಮಿತ್ರರು ಕಾಸರಗೋಡಿನ ಕೇರಳ ಸೇರ್ಪಡೆಯನ್ನು ವಿರೋಧಿಸಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು. 25 ಎಪ್ರಿಲ್ 1957ರಂದು ಅದಕ್ಕೆ ತಾವೇ ಸ್ವತಃ ಉತ್ತರಿಸಿದ ಮುಖ್ಯಮಂತ್ರಿ ಇ.ಎಂ.ಎಸ್ ಅವರು ಕಾಸರಗೋಡಿನ ಕನ್ನಡಿಗರ ಹಿತರಕ್ಷಣೆ ಬಗ್ಗೆ ತಮಗಿರುವ ಬದ್ಧತೆ ಹಾಗೂ ಕಾಳಜಿಯನ್ನು ವ್ಯಕ್ತಪಡಿಸಿದ್ದರು. ಕಾಸರಗೋಡು ಕನರ್ಾಟಕಕ್ಕೆ ಸೇರಬೇಕೆನ್ನುವುದರಲ್ಲಿ ತಪ್ಪಿಲ್ಲವೆಂದು ಇ.ಎಂ.ಎಸ್ ಅವರಲ್ಲದೆ ನಂತರದ ಮುಖ್ಯಮಂತ್ರಿಗಳಾದ ಅಚ್ಯುತ ಮೆನನ್ ಕೂಡ ಒಪ್ಪಿಕೊಂಡಿದ್ದರೆಂಬುದು ಇಲ್ಲಿ ಸ್ಮರಣಾರ್ಹ. ಅಂದು ಕನ್ನಡಿಗ ವಿದ್ಯಾಥರ್ಿಯೊಬ್ಬ ಬರೆದ ಪತ್ರಕ್ಕೂ ಪೂರಕವಾಗಿ ಉತ್ತರಿಸುವ ಸೌಜನ್ಯ ಕೇರಳದ ಮುಖ್ಯಮಂತ್ರಿಯವರಿಗಿದ್ದರೆ ಇಂದು ಮಲಯಾಳ ಕಡ್ಡಾಯವನ್ನು ವಿರೋಧಿಸಿ ನಾಲ್ವರು ಶಾಸಕರ ಸಹಿತ ಕನ್ನಡಿಗ ಪ್ರತಿನಿಧಿಗಳ ನಿಯೋಗವೇ ಮುಖ್ಯಮಂತ್ರಿಯವರನ್ನು ಭೇಟಿಯಾದರೂ ಕನ್ನಡಿಗರ ಅಳಲನ್ನು ಕೇಳಿಸಿಕೊಳ್ಳುವ ಕನಿಷ್ಠ ಸೌಜನ್ಯವನ್ನು ಇಂದಿನ ಮುಖ್ಯಮಂತ್ರಿಯವರು ತೋರದಿದ್ದುದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬಹುದು. ಅಂದು ಕೇರಳವನ್ನಾಳುತ್ತಿದ್ದುದು ಎಡರಂಗ ಸರಕಾರ. ಇಂದು ಕೂಡ ಎಡರಂಗವೇ ಕೇರಳವನ್ನು ಆಳುತ್ತಿದೆ. ಆದರೆ ಮುಖ್ಯಮಂತ್ರಿಗಳು ಮಾತ್ರ ಬದಲಾಗಿದ್ದಾರೆ. ಭಾಷಾ ಅಲ್ಪಸಂಖ್ಯಾಕರ ಬಗೆಗಿನ ಸರಕಾರಗಳ ಧೋರಣೆಯಲ್ಲೂ ಅಜಗಜಾಂತರ ವ್ಯತ್ಯಾಸ ಗೋಚರಿಸುತ್ತಿದೆ. ಕಳೆದ ತಿಂಗಳು ಪೆರ್ಲದಲ್ಲಿ ಜರಗಿದ ದಸರಾ ನಾಡಹಬ್ಬ ಸಂದರ್ಭದಲ್ಲಿ ಭಾಷಣಮಾಡುತ್ತ ಶ್ರೀಕೃಷ್ಣ ವಿಶ್ವಾಮಿತ್ರರು ತಮಗೆ ಹಿಂದೆ ಇ.ಎಂ.ಎಸ್ ರಿಂದ ಕನ್ನಡಪರ ಪತ್ರ ಬಂದುದರ ಬಗ್ಗೆ ಪ್ರಸ್ತಾಪಿಸಿದಾಗ ವೇದಿಕೆಯಲ್ಲಿ ಅದನ್ನು ಕೇಳಿಸಿಕೊಂಡ ಕನರ್ಾಟಕ ಗಮಕಕಲಾಪರಿಷತ್ ಕೇರಳಘಟಕದ ಅಧ್ಯಕ್ಷ ತೆಕ್ಕೇಕರೆ ಶಂಕರನಾರಾಯಣ ಭಟ್ ಅವರು ವಿಶ್ವಾಮಿತ್ರರ ಮನೆಗೆ ಹೋಗಿ ಆ ಮಹತ್ವದ ಪತ್ರವನ್ನು ಸಂಗ್ರಹಿಸಿ ಪತ್ರಿಕೆಗಳಿಗೆ ನೀಡುವ ಮೂಲಕ ಪ್ರಮುಖ ದಾಖಲೆಯೊಂದು ಬೆಳಕಿಗೆ ಬರಲು ಕಾರಣರಾಗಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries