ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 17, 2017
ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ದ್ವಿತೀಯ ವಾಷರ್ಿಕೋತ್ಸವ ಆಚರಣೆ
ಯಕ್ಷಗಾನಕ್ಕೆ ಒಳ್ಳೆಯ ದಿನಗಳು ಬರಲಿವೆ: ಉಳಿಯ ತಂತ್ರಿವರ್ಯರು
ಕಾಸರಗೋಡು: ಯಕ್ಷಗಾನಕ್ಕೆ ಒಳ್ಳೆಯ ದಿನಗಳು ಬರಲಿವೆ. ಮುಂದಿನ 15 ವರ್ಷಗಳಲ್ಲಿ ಇಂದಿಗಿಂತ ಹಲವು ಪಟ್ಟು ಈ ಕಲೆಯು ವಿಜೃಂಭಿಸಲಿದೆ. ಅಲ್ಲದೆ ಈ ಶ್ರೇಷ್ಠ ಕಲೆಯು ಮತ್ತಷ್ಟು ಶ್ರೀಮಂತಗೊಳ್ಳಲಿದೆ ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಹೇಳಿದ್ದಾರೆ.
ಕಾಸರಗೋಡು ಶ್ರೀ ವೆಂಕಟರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ದ್ವಿತೀಯ ವಾಷರ್ಿಕೋತ್ಸವವನ್ನು ಪೇಟೆ ಶ್ರೀ ವೆಂಕಟರಮಣ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಹವ್ಯಾಸಿ ಯಕ್ಷಗಾನ ಕ್ಷೇತ್ರವನ್ನು ಪ್ರೋತ್ಸಾಹಿಸುವುದರ ಜೊತೆಗೆ ಎಳೆಯ ಮಕ್ಕಳನ್ನು ಈ ಕ್ಷೇತ್ರಕ್ಕೆ ಸೆಳೆಯುವ ಯತ್ನ ಸಾರ್ಥಕವಾದುದು ಎಂದರು. ಯಕ್ಷಗಾನವು ಬದುಕಿನಲ್ಲಿ ಎಲ್ಲವನ್ನೂ ಕೊಡಬಲ್ಲ ಅನನ್ಯ, ಅನುಪಮ ಕಲಾಮಾಧ್ಯಮ. 60 ವರ್ಷಗಳ ಹಿಂದಿನ ಕಲಾವಿದನ ಜೀವನಕ್ಕೆ ಹೋಲಿಸಿದರೆ ಇಂದಿನ ಕಲಾವಿದರು ಭಾಗ್ಯವಂತರು ಎಂದ ಅವರು, ಈಗಿನ ಕಲಾವಿದನಿಗೆ ಗೌರವ ಮನ್ನಣೆ ದೊರೆಯುತ್ತಿದೆ, ಸಮಾಜ ಗುರುತಿಸುತ್ತಿದೆ ಎಂದು ತಿಳಿಸಿದರು.
ಪ್ರತಿ ಊರಿನಲ್ಲೂ ಯಕ್ಷಗಾನ ಕಲಾವಿದ ಹುಟ್ಟಿ ಬರಬೇಕು. ತಮ್ಮ ಮಕ್ಕಳನ್ನು ಈ ಕಲೆಯತ್ತ ಅಭಿರುಚಿ ಮೂಡುವಂತೆ ಹೆತ್ತವರು ಗಮನಹರಿಸಬೇಕು. ಆಗ ನಮ್ಮ `ಾಮರ್ಿಕ, ಐತಿಹಾಸಿಕ ಮೌಲ್ಯಗಳ ಅನಾವರಣವಾಗುತ್ತದೆ. ಈ ಮೂಲಕ ರಾಷ್ಟ್ರದ ಉದಾತ್ತ ತತ್ವ ಹಾಗೂ ತಳಹದಿಯ ಬಗ್ಗೆಯೂ ಅನುಭವ ಪಾಂಡಿತ್ಯ ಜಾಗೃತಿಗೊಳಿಸಬಹುದು ಎಂದು ತಂತ್ರಿವರ್ಯರು ಉಲ್ಲೇಖಿಸಿದರು.
ಖ್ಯಾತ ಜ್ಯೋತಿಷಿ ಸಿ.ವಿ.ಪೊದುವಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಕಾಸರಗೋಡಿನ ಹೋಟೆಲ್ ಉದ್ಯಮಿ ರಾಮಪ್ರಸಾದ್, ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅನುವಂಶಿಕ ಮೊಕ್ತೇಸಕ ಕೆ.ಜಿ.ಶ್ಯಾನುಭೋಗ್, ಕಾಸರಗೋಡು ನಗರಸಭಾ ಸದಸ್ಯೆ ಶ್ರೀಲತಾ ಟೀಚರ್ ಮೊದಲಾದವರು
ಮಾತನಾಡಿದರು.
ಭಾಗವತ ಶ್ರೀನಿವಾಸ ಬಳ್ಳಮಂಜ ಪ್ರಾರ್ಥನೆ ಗೀತೆ ಹಾಡಿದರು. ಕೆ.ಎನ್.ವೆಂಕಟರಮಣ ಹೊಳ್ಳ ನೇತೃತ್ವ ವಹಿಸಿದ್ದರು. ಕೆ.ಎನ್.ರಾಮಕೃಷ್ಣ ಹೊಳ್ಳ ಸ್ವಾಗತಿಸಿ, ವೇದಮೂತರ್ಿ ಉದಯಕುಮಾರ್ ಕಲ್ಲೂರಾಯ ಮಧೂರು ವಂದಿಸಿದರು. ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.




