ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 26, 2017
ಪುಕ್ಕಲ ಟಿಪ್ಪು ಸಾವನ್ನಪ್ಪಿದ್ದು ಯುದ್ಧಭೂಮಿಯಲ್ಲಿ ಅಲ್ಲ: ಪ್ರತಾಪ್ ಸಿಂಹ ಟ್ವೀಟ್
ಮೈಸೂರು: ಪುಕ್ಕಲ ಟಿಪ್ಪು ಸುಲ್ತಾನ್ ಸತ್ತಿದ್ದು ಹೀರೋ ಆಗಿ ಅಲ್ಲ, ವೀರರು ಮಾತ್ರ ಹೋರಾಡುತ್ತಲೇ ಯುದ್ಧ ಭೂಮಿಯಲ್ಲಿ ಸಾವನ್ನಪ್ಪುತ್ತಾರೆ. ಆದರೆ ಟಿಪ್ಪು ಸುಲ್ತಾನ್ ಯುದ್ಧಭೂಮಿಯಲ್ಲಿ ಹೋರಾಡುತ್ತ ಸಾವು ಕಂಡಿಲ್ಲ, ಆತ ಕೋಟೆಯೊಳಗೆ ಸಾವನ್ನಪ್ಪಿದ್ದ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ರಾಷ್ಟ್ರಪತಿ ಭಾಷಣಕ್ಕೆ ತಿರುಗೇಟು ಎಂಬಂತೆ ಟ್ವೀಟ್ ಮಾಡಿದ್ದಾರೆ.
ಟಿಪ್ಪು ಸುಲ್ತಾನ್ ಜಯಂತಿ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ನಡೆಯುತ್ತಿದ್ದ ವಾಕ್ಸಮರದ ನಡುವೆಯೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ವಿಧಾನಸೌಧ 60ನೇ ವಷರ್ಾಚರಣೆ ಕಾರ್ಯಕ್ರಮದಲ್ಲಿ ಟಿಪ್ಪು ಗುಣಗಾನ ಮಾಡಿರುವುದು ತೀವ್ರ ಟೀಕೆಗೆ ಕಾರಣವಾಗಿದೆ.


