ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 25, 2017
ಕುಂಬಳೆ ಉಪಜಿಲ್ಲಾ ವಿಜ್ಞಾನೋತ್ಸವ ಆದೂರು ಶಾಲೆಯಲ್ಲಿ ಆರಂಭ
ಮುಳ್ಳೇರಿಯ: ವಿಜ್ಞಾನ ಸಹಿತ ಆ ಸಂಬಂಧಿ ವಿಷಯಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಾಗಿದೆ. ವಿದ್ಯಾಥರ್ಿಗಳ ಸುಪ್ತ ಮನದೊಳಗಿನ ಚಿಂತನಶೀಲತೆಗೆ ಬಲನೀಡಿ ಹೊಸ ಸಂಶೋಧನೆಗೆ ಪ್ರೋತ್ಸಾಹ ನೀಡಬೇಕು ಎಮದು ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಅಭಿಪ್ರಾಯ ವ್ಯಕ್ತಪಡಿಸಿದರು.
2017-18ನೇ ಸಾಲಿನ ಕುಂಬಳೆ ಉಪಜಿಲ್ಲಾ ವಿಜ್ಞಾನೋತ್ಸವ, ಗಣಿತ ಶಾಸ್ತ್ರ, ಸಮಾಜ ವಿಜ್ಞಾನ, ಗಣಿತ ಶಾಸ್ತ್ರ, ಐಟಿ ಮತ್ತು ವೃತ್ತಿ ಪರಿಚಯ ಮೇಳವನ್ನು ಬುಧವಾರ ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಹಜವಾದ ಕುತೂಹಲ ವಿದ್ಯಾಥರ್ಿಗಳಲ್ಲಿ ಅಡಕವಾಗಿರುತ್ತದೆ. ಅವರ ಅಂತರಂಗದ ಆಸಕ್ತಿಯನ್ನು ಗಮನಿಸಿ ಅವುಗಳನ್ನು ಪೋಶಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಮಕ್ಕಳ ಹೆತ್ತವರಿಗಿದ್ದು, ಪಠ್ಯೇತರ ವಿಷಯಗಳ ಜ್ಞಾನವನ್ನೂ ಪರಿಗಣಿಸಿ ಅವನ್ನು ಮುನ್ನೆಲೆಗೆ ತರಬೇಕು ಎಮದು ತಿಳಿಸಿದ ಶಾಸಕರು. ವಿಜ್ಞಾನ ಮೇಳದಂತಹ ಪ್ರೋತ್ಸಾಹದಾಯಕ ಪ್ರಕ್ರಿಯೆಗಳಿಗೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ. ಜೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಪಿ.ಉಷಾ, ಜಿಲ್ಲಾ ಪಂಚಾಯಿತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ಪಿ.ಉಷಾ, ಸದಸ್ಯೆ ಸದಸ್ಯೆ ರತ್ನಾವತಿ ರೈ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾದೇವಿ, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎ.ವಿಜಯಕುಮಾರ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ.ಎಂ, ಸದಸ್ಯರಾದ ತಸ್ನಿ ಹಮೀದ್, ಅನಸೂಯ ರೈ, ಸೌದಾಬಿ.ಕೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ.ಎಂ.ಎ, ಪ್ರಾಂಶುಪಾಲ ಶ್ರೀಕೃಷ್ಣ ಭಟ್.ಸಿ.ಎಚ್, ಆದೂರು ಪೊಲೀಸ್ ಠಾಣೆಯ ಎಸ್ಐ ಪ್ರಶೋಬ್.ಕೆ.ಕೆ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮುಳ್ಳೇರಿಯ ಘಟಕದ ಅಧ್ಯಕ್ಷ ಬಾಲಕೃಷ್ಣ ರೈ, ಬ್ಲಾಕ್ ಯೋಜನಾಧಿಕಾರಿ ಕುಂಞಿಕೃಷ್ಣನ್, ಮುಖ್ಯೋಪಾಧ್ಯಾಯರುಗಳ ಫೋರಂ ಸಂಚಾಲಕ ವಿಷ್ಣುಪಾಲ, ಹಳೆ ವಿದ್ಯಾಥರ್ಿ ಸಂಘದ ಅಧ್ಯಕ್ಷ ಮುಹಮ್ಮದ್ ಪಟ್ಟಾಂಗ್, ಎ.ಕೆ.ಅಬ್ದುಲ್ ಖಾದರ್ ಹಾಜಿ, ಹಿರಿಯ ಶಿಕ್ಷಕ ಪ್ರಕಾಶ. ಮಾಯಿಲಂಕೋಟೆ ಉಪಸ್ಥಿತರಿದ್ದರು.
ವಿಜ್ಞಾನ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನ ಸ್ಪಧರ್ೆಗಳಲ್ಲಿ ಕುಂಬಳೆ ಉಪಜಿಲ್ಲೆಯ 117 ಶಾಲೆಗಳ 1500 ರಷ್ಟು ವಿದ್ಯಾಥರ್ಿಗಳು ಭಾಗವಹಿಸಿದ್ದರು. ಕೌತುಕ ಭರಿತ ಮಾದರಿಗಳು,ಸಂಶೋಧನೆಗಳು ಗಮನ ಸೆಳೆದುವು.
ಕುಂಬಳೆ ಉಪಜಿಲ್ಲಾ ಸಹ ಶಿಕ್ಷಣಾಕಾರಿ ಕೈಲಾಸಮೂತರ್ಿ ಸ್ವಾಗತಿಸಿ, ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ ವಂದಿಸಿದರು. ಶಿಕ್ಷಕ ಶಾಹುಲ್ ಹಮೀದ್ ಮತ್ತು ರಂಗ ಕಲಾವಿದ ರವೀಂದ್ರ ರೈ ಮಲ್ಲಾವರ ಕಾರ್ಯಕ್ರಮ ನಿರೂಪಿಸಿದರು.
ಅ.26ರಂದು ಅಪರಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಉದುಮ ಶಾಸಕ ಕೆ.ಕುಂಞಿರಾಮನ್ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಷೀರ್ ಅಧ್ಯಕ್ಷತೆ ವಹಿಸುವರು. ಕುಂಬಳೆ ಉಪಜಿಲ್ಲಾ ಸಹ ಶಿಕ್ಷಣಾಧಿಕಾರಿ ಕೈಲಾಸಮೂತರ್ಿ ಬಹುಮಾನ ವಿತರಿಸುವರು. ಬ್ಲಾಕ್ ಪಂಚಾಯಿತಿ ಸದಸ್ಯರಾದ ಶ್ರೀಧರನ್, ಸುಂದರ, ಪಂಚಾಯಿತಿ ಸದಸ್ಯರಾದ ಸ್ಮಿತಾ, ಶ್ರೀವಿದ್ಯಾ, ಬಾಲಕೃಷ್ಣ.ಎ, ಸುಜಲ.ಕೆ.ಪಿ, ತಂಬಾನ್.ಎಂ, ವಿನೋದನ್ ನಂಬ್ಯಾರ್, ಎಸ್ಎಂಸಿ ಅಧ್ಯಕ್ಷ ಬಿ.ಎ.ಅಬೂಬಕರ್, ಮಾತೃಸಂಘದ ಅಧ್ಯಕ್ಷೆ ಬೀಫಾತಿಮ, ಎ.ಕೆ.ಅಬ್ದುಲ್ ರಹಮಾನ್ ಹಾಜಿ, ರವೀಂದ್ರ ರೈ ಮಲ್ಲಾವರ, ನಾಸರ್ ಆದೂರು, ಶಿಕ್ಷಕ ಬಾಬು ಥೋಮಸ್, ನೌಕರ ಸಂಘದ ಕಾರ್ಯದಶರ್ಿ ಯೂಸುಫ್.ಕೆ ಭಾಗವಹಿಸುರು.





