ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 27, 2017
ನ. 8ರಂದು `ಕರಾಳ ದಿನ' ಆಚರಣೆ
ನವದೆಹಲಿ : ನೋಟು ರದ್ದತಿ ಮಾಡಿ ನವೆಂಬರ್ 8ಕ್ಕೆ ಒಂದು ವರ್ಷ ಆಗುವುದರಿಂದ ಆ ದಿನವನ್ನು `ಕರಾಳ ದಿನ' ಎಂದು ಆಚರಿಸುವುದಾಗಿ ಹಾಗೂ ನೋಟು ರದ್ದತಿಯಿಂದ ಆಥರ್ಿಕತೆಯ ಮೇಲೆ ಉಂಟಾದ ದುಷ್ಪರಿಣಾಮಗಳನ್ನು ಎತ್ತಿ ತೋರಿಸುವ ಸಲುವಾಗಿ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಪ್ರತಿ ಪಕ್ಷಗಳು ಹೇಳಿವೆ.
ವಿರೋಧ ಪಕ್ಷಗಳ ಸಮನ್ವಯ ಸಮಿತಿಯು ಪಾಲರ್ಿಮೆಂಟ್ ಹೌಸ್ನಲ್ಲಿ ಸೋಮವಾರ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ನಿಧರ್ಾರವನ್ನು ಪ್ರಕಟಿಸಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರು, `ನೊಟು ರದ್ದತಿಯು ಎನ್ಡಿಎ ಸಕರ್ಾರದ ಅಸಮರ್ಪಕ ಗ್ರಹಿಕೆಯ ಮತ್ತು ಆತುರದ ನಿಧರ್ಾರ. ಇದೊಂದು ಹಗರಣ ಎಂದೇ ಹೇಳಬೇಕು' ಎಂದು ಟೀಕಿಸಿದ್ದಾರೆ.
ಹದಿನೆಂಟು ವಿರೋಧ ಪಕ್ಷಗಳು ಎಲ್ಲಾ ರಾಜ್ಯಗಳಲ್ಲಿ ತಮ್ಮ ಸಾಮಥ್ರ್ಯಕ್ಕನುಗುಣವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು.
ತಮಿಳುನಾಡಿನಲ್ಲಿ `ಕರುಪ್ಪು ದಿನಮ್'
ಚೆನ್ನೈ: ಗುಲಾಂ ನಬಿ ಆಜಾದ್ ಅವರ ಹೇಳಿಕೆಯ ಬೆನ್ನಲ್ಲೇ, `ತಮಿಳುನಾಡಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನ. 8 ಅನ್ನು `ಕರುಪ್ಪು ದಿನಮ್' (ಕರಾಳ ದಿನ) ಎಂದು ಡಿಎಂಕೆ ಆಚರಿಸಲಿದೆ' ಎಂದು ಪಕ್ಷದ ಕಾಯರ್ಾಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
`ನೋಟು ರದ್ದತಿಯಂಥ ಏಕಪಕ್ಷೀಯ ನಿಧರ್ಾರದಿಂದಾಗಿ ಅಸಂಘಟಿತ ವಲಯವು ಹಾನಿ ಅನುಭವಿಸಿದೆ. ದೇಶದ ಆಥರ್ಿಕತೆ ಜಡವಾಗಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಹಾರದಲ್ಲಿ ಆರ್ಜೆಡಿ ರ್ಯಾಲಿ
ಪಟ್ನಾ: ನೋಟು ರದ್ದತಿಯ ವೈಫಲ್ಯವನ್ನು ತೋರಿಸಲು ನ.8ರಂದು ಬಿಹಾರದಾದ್ಯಂತ ರ್ಯಾಲಿ ನಡೆಸುವುದಾಗಿ ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಅವರು ಹೇಳಿದ್ದಾರೆ.
500 ಮತ್ತು = 1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದರಿಂದಾಗಿ ಸಾಮಾನ್ಯ ಜನರು ಪಡೆದಿದ್ದೇನು ಎಂದು ರ್ಯಾಲಿಯಲ್ಲಿ ಬಿಜೆಪಿಯನ್ನು ಪ್ರಶ್ನಿಸುತ್ತೇವೆ' ಎಂದು ಅವರು ಹೇಳಿದ್ದಾರೆ.




