HEALTH TIPS

No title

ಜಿಲ್ಲೆಯ ಏಕೈಕ ಕಂಬಳ 4 ರಂದು ಮಂಜೇಶ್ವರ: ಜಿಲ್ಲೆಯ ವರ್ತಮಾನ ಕಾಲದ ಏಕೈಕ ಕಂಬಳವೆಂಬ ಖ್ಯಾತವಾದ ಇತಿಹಾಸ ಪ್ರಸಿದ್ದ ಅರಿಬೈಲು ಕಂಬಳ ಹಾಗೂ ನಾಗಬ್ರಹ್ಮ ದೇವರ ಜಾತ್ರೋತ್ಸವ ಡಿ. 4 ರಂದು ಸೋಮವಾರ ನಡೆಯಲಿದೆ. ಅಂದು ಅಪರಾಹ್ನ 2 ಗಂಟೆಗೆ ಕಂಬಳ ಗದ್ದೆಗೆ ಓಟದ ಕೋಣಗಳು ಇಳಿದು ಕಂಬಳಕ್ಕೆ ಚಾಲನೆ ನೀಡಲಾಗುವುದು. ಸಂಜೆ 5.30ಕ್ಕೆ ಕಂಬಳಕ್ಕೆ ಪೂಕರೆ ಸ್ಥಾಪನೆ, ರಾತ್ರಿ 9 ಗಂಟೆಗೆ ನಾಗಬ್ರಹ್ಮ ದೇವರ ದೇವಸ್ಥಾನದಲ್ಲಿ ಉತ್ಸವ ಪೂಜೆ ನಡೆಯಲಿದೆ.ಅದೇ ದಿನ ರಾತ್ರಿ ನಾಗಬ್ರಹ್ಮ ಯುವಕ ಸಂಘದ ವಾಷರ್ಿಕೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅರಿಬೈಲು ಕಂಬಳದ ಇತಿಹಾಸ: ಗಡಿನಾಡು ಕಾಸರಗೊಡು ಜಿಲ್ಲೆ ತುಳುನಾಡಿನ ಪ್ರಧಾನ ಕೇಂದ್ರವಾಗಿ ಇತಿಹಾಸದಲ್ಲಿ ಗುರುತಿಸಲ್ಪಟ್ಟ ಪ್ರದೇಶ. ಇಲ್ಲಿಯ ಪ್ರಾಚೀನ ಇತಿಹಾಸ, ಜಾನಪದ ಆಚರಣೆ, ಕಲೆ, ಆರಾಧನೆಗಳು ತುಳು ಭಾಷೆ ಜನಾಂಗದೊಂದಿಗೆ ಶ್ರೀಮಂತವಾಗಿ ಬೆಳೆದು ಬಂದಿದೆ. ಹಿಂದೆ ಜಿಲ್ಲೆಯ ಬಹುತೇಕ ಪ್ರಮುಖ ಕೇಂದ್ರಗಳಲ್ಲಿ ತೌಳವ ಸಾಂಸ್ಕೃತಿಕ ಆಚರಣೆಯಾದ ಕಂಬಳ ಸಾಕಷ್ಟು ನಡೆದು ಬಂದ ಬಗ್ಗೆ ಈಗಲೂ ದಾಖಲೆಗಳು ಲಭ್ಯವಾಗುತ್ತದೆ. ಚಿಪ್ಪಾರು, ಕೋಳಾರು, ಪುತ್ತಿಗೆ, ಎಣ್ಮಕಜೆ, ಕಾರಡ್ಕ, ಅಡೂರು, ದೇಲಂಪಾಡಿ, ಮಾಯಿಪ್ಪಾಡಿ, ಕಳತ್ತೂರು-ಬಂಬ್ರಾಣ, ಮಾನ್ಯ, ಮುಂಡೋಳು, ಅಗಲ್ಪಾಡಿ, ತುಳುವನ, ಕೋಡೋತ್ ಮೊದಲಾದ ಹಲವು ಹತ್ತೆಡೆಗಳಲ್ಲಿ ಕಂಬಳ ಉತ್ಸವವಾಗಿ ಕಳೆಯೇರುತ್ತಿತ್ತು. ಆದರೆ ಇಂದು ಇವೆಲ್ಲ ಮಾಯವಾಗಿದ್ದು, ಮಂಜೇಶ್ವರ ಸಮೀಪದ ಅರಿಬೈಲು ಕಂಬಳ ಮಾತ್ರ ಉಳಿದುಕೊಂಡು ಸಹಸ್ರಾರು ವರ್ಷಗಳಿಂದ ವರ್ಷಂಪ್ರತಿ ನಡೆದುಬರುತ್ತಿದೆ. ಅರಿಬೈಲು ಹೊಸಂಗಡಿ ಸಮೀಪದ ಪುಟ್ಟ ಗ್ರಾಮವಾಗಿದ್ದು, ನಾಗಬ್ರಹ್ಮ ದೇವರು ಈ ಪರಿಸರದ ಪ್ರಧಾನ ಆರಾಧ್ಯ ದೇವರು. ಈ ದೇವಾಲಯದ ಅಧೀನದ ಆರು ಮುಡಿ ಗದ್ದೆಯಲ್ಲಿ ಪ್ರತಿವರ್ಷ ಕಂಬಳ ನಡೆಸಲಾಗುತ್ತದೆ. ಡಿ. 4ಂದು ಹಾಲಿ ವರ್ಷದ ಕಂಬಳ ನಡೆಯಲಿದ್ದು, ಅದೇ ದಿನ ಕ್ಷೇತ್ರದ ಜಾತ್ರೊತ್ಸವ ಆರಂಭಗೊಂಡು 14 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಸಾಂಪ್ರದಾಯಿಕ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ಹರಕೆ ವಿಶೇಷ: ನರ ಸಂಬಂಧಿ ಮತ್ತು ಕಣ್ಣುಗಳಿಗೆ ಸಮಬಂಧಿಸಿದ ಅನಾರೋಗ್ಯಕ್ಕೆ ಅರಿಬೈಲು ನಾಗಬ್ರಹ್ಮ ಕ್ಷೇತ್ರಕ್ಕೆ ಹರಿಕೆ ನೀಡಿದರೆ ರೋಗ ನಿವಾರಣೆಯಾಗುತ್ತದೆ ಎಂಬ ವಿಶ್ವಾಸ ಇಲ್ಲಿಯದು. ಪ್ರತಿವರ್ಷ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆಯ ಹೆಚ್ಚಳ ಈ ನಂಬಿಕೆಗೆ ಪುಷ್ಠಿಯೊದಗಿಸುತ್ತದೆ. ಭತ್ತವನ್ನು ನೆನೆಹಾಕಿ ಬಿಳ್ತಿಗೆ ಅಕ್ಕಿಯಾಗಿಸಿ, ಶುದ್ದ ವಸ್ತ್ರದಲ್ಲಿ ಅರಸಿನ ತುಂಡು ಹಾಗೂ ಮಸಿಯ ತುಂಡಿನೊಂದಿಗೆ ಶ್ರೀನಾಗಬ್ರಹ್ಮರಿಗೆ ಸಮಪರ್ಿಸಿದಲ್ಲಿ ರೋಗ ಸಂಕಷ್ಟ ನಿವಾರಣೆಯಾಗಿ ಆರೋಗ್ಯ ವೃದ್ದಿಸುತ್ತದೆ ಎಂಬುದು ಇಲ್ಲಿಯ ವಿಶ್ವಾಸ. ಮಂಜೇಶ್ವರ, ಕೋಳ್ಯೂರು, ಕುಂಬಳೆ ಸೀಮೆ-ಮಾಗಣೆಗಳ ಸಾವಿರಾರು ಆಸ್ತಿಕ ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ವಿಶೇಷ ಹೂಕೆರೆ: ಕಂಬಳ ನಡೆಯುವ ಗದ್ದೆಯ ಸಮೀಪ ವರ್ಷದ ಎಲ್ಲಾ ದಿನಗಳಲ್ಲೂ ನೀರು ತುಂಬಿರುವ ಪ್ರಾಕೃತಿಕ ಬಾವಿಯಂತಹ ರಚನೆಯೊಂದಿದ್ದು, ಅದಕ್ಕೆ ಡಿ.4 ರಂದು ರಾತ್ರೆ ಕ್ಷೇತ್ರದ ಪ್ರಧಾನ ಅರ್ಚಕರು ಹೂ-ಹಿಂಗಾರ ಅಪರ್ಿಸುವ ಪದ್ದತಿ ಚಾಲ್ತಿಯಲ್ಲಿದೆ. ಯಾವುದೇ ಬೆಳಕಿನ ಸಹಾಯವಿಲ್ಲದೆ ಆ ಕೆರೆಯ ಸಮೀಪ ಆಗಮಿಸಿ ಕೆರೆಯ ಮಧ್ಯದಲ್ಲಿ ನೆಡುವಂತೆ ಹೂ-ಹಿಂಗಾರ ಅಪರ್ಿಸಲಾಗುತ್ತದೆ. ಕಂಬಳಕ್ಕೆ ತಂಡಗಳು: ಅರಿಬೈಲು ಕಂಬಳ ಜಿಲ್ಲೆಯ ಏಕೈಕ ಕಂಬಳವೆಂಬ ಕಾರಣದಿಂದಲೋ ಏನೋ, ಅಂದು ಕಂಬಳದಲ್ಲಿ ಭಾಗವಹಿಸಲು ಕಾಸರಗೊಡು, ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧೆಡೆಗಳಿಂದ ಹಲವು ತಂಡಗಳು ಆಗಮಿಸಿ ಪಾಲ್ಗೊಳ್ಳುತ್ತವೆ. ಅರ್ಧ ದಿನ ನಡೆಯುವ ಕಂಬಳವಾದರೂ ಸಂಜೆ ಸುಯಾಸ್ತಮಾನ ಕಳೆದ ಬಳಿಕವೂ ಕೆಲವೊಮ್ಮೆ ಮುಗಿಯದಷ್ಟು ಕೋಣಗಳ ತಂಡಗಳು ಇನ್ನೂ ಸ್ಪಧರ್ೆಗೆ ಕಾಯುತ್ತಿರುತ್ತವೆ ಎಂದರೆ ಅರಿಬೈಲು ಕಂಬಳದ ಮಹತ್ವ ಅರಿವಾಗುತ್ತದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries