ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 01, 2017
ಟ್ವಿಟ್ಟರ್ ನಲ್ಲಿ #ಕನ್ನಡರಾಜ್ಯೋತ್ಸವ ಟ್ರೆಂಡಿಂಗ್
ಬೆಂಗಳೂರು: ನಾಡಿನ ತುಂಬಾ 62ನೇ ರಾಜ್ಯೋತ್ಸವದಲ್ಲಿ ತೊಡಗಿರುವಾಗ, ವೆಬ್ ಲೋಕ ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. #ಏಚಿಟಿಟಿಚಿಜಚಿಖಚಿರಿಥಿಠಣಚಿತಚಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ದಿನವಿಡಿ ಸಕತ್ ಟ್ರೆಂಡಿಂಗ್ ನಲ್ಲಿತ್ತು. ಶುಭ ಹಾರೈಕೆ ಸಂದೇಶಗಳ ಮೂಲಕ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ #ಕನ್ನಡರಾಜ್ಯೋತ್ಸವ ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿರುವಂತೆ ಮಾಡುವಲ್ಲಿ ಕನ್ನಡಿಗರು ಸಫಲರಾಗಿದ್ದಾರೆ. 'ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕು' ಸೇರಿದಂತೆ ಕನ್ನಡದ ಬಹುನೆಚ್ಚಿನ ಗೀತೆಗಳು, ರಾಷ್ಟ್ರಕವಿ ಕುವೆಂಪು, ಬೇಂದ್ರೆ ಸೇರಿದಂತೆ ಹಲವಾರು ಕವಿಗಳ ಸಾಲುಗಳು, ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಭುವನಗಿರಿಯಲ್ಲಿರುವ ಕನ್ನಡ ತಾಯಿ ಭುವನೇಶ್ವರಿಯ ದೇಗುಲ ನೋಡಿದ್ದೀರಾ? ಎಂಬ ಪ್ರಶ್ನೆ ಅಲ್ಲದೆ, ಕನ್ನಡ ಇತಿಹಾಸದ ಬಗ್ಗೆ ವಿವರಣೆ ನೀಡುವ ಟ್ವೀಟ್ ಗಳು ಕಾಣ ಸಿಕ್ಕಿತ್ತು. ರಾಜ್ಯೋತ್ಸವ ದಿನದಂದು ಆಯ್ದ ಟ್ವೀಟ್ ಸಂದೇಶಗಳು ಇಲ್ಲಿವೆ...#ಞಚಿಟಿಟಿಚಿಜಚಿಡಿಚಿರಿಥಿಠಣಚಿತಚಿ #ಕನ್ನಡರಾಜ್ಯೋತ್ಸವ ಹ್ಯಾಶ್ ಟ್ಯಾಗ್ ಬಳಸಿ..ಟ್ವೀಟ್ ಮಾಡಿದ್ದಾರೆ. ಕನ್ನಡ ಲಿಪಿಯಲ್ಲೇ ಟ್ರೆಂಡಿಂಗ್ ಮಾಡಬೇಕು 2500 ವರ್ಷಗಳ ಇತಿಹಾಸವಿರುವ ಭಾಷೆಯೊಂದು ತನ್ನ ಸೊಬಗನ್ನು ಪ್ರದಶರ್ಿಸಲು ಇಂಗ್ಲಿಷ್ ಭಾಷೆಯ ಅಕ್ಷರಗಳನ್ನು ಆಶ್ರಯಿಸಬೇಕಾದದ್ದು ದುರಂತ..! ಯಲಹಂಕದ ಬಿಜೆಪಿ ಮುಖಂಡನ ಸಂದೇಶ ಸಿರಿಗನ್ನಡಂ ಗೆಲ್ಗೆ - ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆ ಎಂದ ಬಿಜೆಪಿ ಮುಖಂಡ ಯಲಹಂಕ ವಿಶ್ವನಾಥ್. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಟ್ವೀಟ್ ಮೂಲಕ ಕನ್ನಡಿಗರಿಗೆ ಶುಭ ಹಾರೈಸಿದ್ದಾರೆ. ಸಿದ್ದರಾಮಯ್ಯರನ್ನು ಹೊಗಳಿದ ಸಾರ್ವಜನಿಕರು ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಕಂಡುಹೊಗಳಿದ ಸಾರ್ವಜನಿಕರು ಕೈ ಮುಗಿದು ಏರು ಇದು ಕನ್ನಡಿಗನ ತೇರು ಕೈ ಮುಗಿದು ಏರು ಇದು ಕನ್ನಡಿಗನ ತೇರು- ಸಾರಥಿ ಎಂದು ದರ್ಶನ್ ತೂಗುದೀಪ ಅವರ ಟ್ವೀಟ್ ಹಾಗೂ ಅವರ ಅಭಿಮಾನಿಗಳಿಂದ ರೀಟ್ವೀಟ್. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು ನವೆಂಬರಿನ ಆಡಂಬರವಾಗದೆ ಇರಲಿ ಕನ್ನಡ ಕೇವಲ ನವೆಂಬರಿನ ಆಡಂಬರವಾಗದೆ ನಿರಂತರ ಸಂಭ್ರಮವಾಗಲಿ

