ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ನಿರ್ಣಯ
ಸರೋಜಿನಿ ಮಹಿಷಿ ಸಮಿತಿಯ ವರದಿ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಕೆ ವರದಿಗಳನ್ನು ಜಾರಿಗೊಳಿಸಲು ಒತ್ತಾಯ
83ನೇ ಅಖಿಲ ಭಾರತ ಸಮ್ಮೇಳನವು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಕರ್ಾರಕ್ಕೆ ಸಲ್ಲಿಸಿದ ವರದಿಗಳನ್ನು ಕೂಡಲೆ ಅನುಷ್ಠಾನಗೊಳಿಸಬೇಕು ಹಾಗೂ ಕನರ್ಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಕೂಡಲೇ ಮಾನ್ಯತೆ ನೀಡಬೇಕು ...
ಸರೋಜಿನಿ ಮಹಿಷಿ ಸಮಿತಿಯ ವರದಿ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಕೆ ವರದಿಗಳನ್ನು ಜಾರಿಗೊಳಿಸಲು ಒತ್ತಾಯ
ಮೈಸೂರು: 83ನೇ ಅಖಿಲ ಭಾರತ ಸಮ್ಮೇಳನವು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಕರ್ಾರಕ್ಕೆ ಸಲ್ಲಿಸಿದ ವರದಿಗಳನ್ನು ಕೂಡಲೆ ಅನುಷ್ಠಾನಗೊಳಿಸಬೇಕು ಹಾಗೂ ಕನರ್ಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿ ಕೂಡಲೇ ಮಾನ್ಯತೆ ನೀಡಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ನಿರ್ಣಯಿಸಲಾಯಿತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಸಕರ್ಾರಿ ಶಾಲೆಗಳ ಸಬಲೀಕರಣ ವರದಿ, ಸರೋಜಿನಿ ಮಹಿಷಿ ಸಮಿತಿಯ ವರದಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಕೆ ವರದಿಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಇದೇ ವೇಳೆ ಸಮ್ಮೇಳನ ಯಶಸ್ವಿಗೆ ಕಾರಣರಾದ ಸ್ವಾಗತ ಸಮಿತಿಗೆ, ಜನತೆಗೆ ಧನ್ಯವಾದ ಅಪರ್ಿಸಲಾಯಿತು.


