HEALTH TIPS

No title

ಡ್ಯಾನಿಷ್ ವ್ಯಕ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ; ಪ್ರಶಸ್ತಿ ತಿರಸ್ಕರಿಸಿದ ಇಬ್ಬರು ಸಾಧಕರು ಹೆಂಡ್ರಿಕ್ ಹಾಡರ್್ಮ್ಯಾನ್, ಡಿಎಸ್ ನಾಗಭೂಷಣ್, ರವೀಂದ್ರನಾಥ್ ಶಾನ್ಬೋಗ್ ಮೈಸೂರು: ಕನ್ನಡದಲ್ಲಿ ನೈಪುಣ್ಯತೆ ಹೊಂದಿರುವ ಡ್ಯಾನಿಷ್ ಮೂಲದ ಹೆಂಡ್ರಿಕ್ ಹಾಡರ್್ಮ್ಯಾನ್ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ದಿ ನ್ಯೂ ಸಂಡೇ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಹೆಂಡ್ರಿಕ್ ಹಾಡರ್್ಮ್ಯಾನ್ ಕುರಿತಂತೆ ಸುದ್ದಿಯೊಂದು ವರದಿಯಾಗಿತ್ತು. ನಮಸ್ಕಾರ ಎಂಬ ಲೇಖನದಲ್ಲಿ ಹೆಂಡ್ರಿಕ್ ಹಾಡರ್್ಮ್ಯಾನ್ ಅವರು ಮೂಲ ಕನ್ನಡಿಗರಂತೆ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾರೆ. ಇದೊಂದು ಅಪ್ರತಿಮ ಪ್ರತಿಭೆ ಎಂದು ಹೇಳಲಾಗಿತ್ತು. ಈ ವರದಿಯನ್ನು ಗಮನಿಸಿದ್ದ ಮೈಸೂರು ಉಪ ಆಯುಕ್ತರು ಡಿ ರಣ್ದೀಪ್ ಅವರು ಹೆಂಡ್ರಿಕ್ ಹಾಡರ್್ಮ್ಯಾನ್ ಅವರದ್ದು ಅಪರೂಪದ ಸಾಧನೆ ಎಂದು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಶಿಫಾರಸು ಮಾಡಿದ್ದರು. ಕನ್ನಡ ಸೇವೆ ವಿಭಾಗದಲ್ಲಿ ಹೆಂಡ್ರಿಕ್ ಹಾಡರ್್ಮ್ಯಾನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀಮರ್ಾನಿಸಲಾಗಿತ್ತು. ಇನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದ 31 ಸಾಧಕರಲ್ಲಿ ಹೆಂಡ್ರಿಕ್ ಸಹ ಒಬ್ಬರಾಗಿದ್ದಾರೆ. ಹೆಂಡ್ರಿಕ್ ಅವರು ಡೆನ್ಮಾಕರ್್ ಮೂಲ ನಿವಾಸಿಯಾದರು ಮೈಸೂರು ಅವರ ಎರಡನೇ ಮನೆಯಾಗಿದೆ. ಕಳೆದ ಐದು ವರ್ಷಗಳಿದಂ ಹೆಂಡ್ರಿಕ್ ಮೈಸೂರಿನಲ್ಲಿ ನೆಲೆಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ ಇಬ್ಬರು ಸಾಧಕರು: ಲೇಖಕ ಡಿಎಸ್ ನಾಗಭೂಷಣ್ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ರವೀಂದ್ರನಾಥ್ ಶಾನ್ ಬೋಗ್ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಸುಪ್ರೀಂ ಕೋಟರ್್ ಆದೇಶದ ನಂತರು ಪ್ರಾಥಮಿಕ ಶಾಲೆ ಮಟ್ಟದಲ್ಲಿ ಕನ್ನಡ ಮಾಧ್ಯಮವನ್ನು ಕಾರ್ಯಗತಗೊಳಿಸಲು ರಾಜ್ಯ ಸಕರ್ಾರ ವಿಫಲವಾಗಿದ್ದು ಈ ಹಿನ್ನೆಲೆಯಲ್ಲಿ ನಾನು ಈ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಲೇಖಕಿ ಡಿ.ಎಸ್.ನಾಗಭೂಷಣ್ ಹೇಳಿದರು. ಇನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತ ಡಾ. ರವೀಂದ್ರನಾಥ್ ಶಾನ್ ಬೋಗ್ ಅವರು ಹಿರಿಯ ನಾಗರೀಕರ ರಕ್ಷಣೆ ಕಾಯ್ದೆಯನ್ನು ಅನುಷ್ಠಾನದಿಂದ ಬೇಸರಗೊಂಡಿರುವ ಅವರು ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಬಾರದೆಂದು ನಿರ್ಧರಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries