HEALTH TIPS

No title

ಭಿಕ್ಷೆ ಎತ್ತುತ್ತಿದ್ದ ಶಿಕ್ಷಕಿಯನ್ನು ವಿದ್ಯಾಥರ್ಿಗಳಿಗೆ ಒಪ್ಪಿಸಿದ ಫೇಸ್ ಬುಕ್! ತಂಪನೂರ್: ಅದು ಕೇರಳದ ತಂಪನೂರ್ ರೈಲ್ವೇ ನಿಲ್ದಾಣ. ಪ್ರತಿದಿನವೂ ಭಿಕ್ಷೆ ಬೇಡುತ್ತ ಕೂತಿರುತ್ತಿದ್ದ ಕೃಶಕಾಯದ ಮಹಿಳೆಯೊಬ್ಬರನ್ನು ಕಂಡು ಅದ್ಯಾಕೋ ಅನುಕಂಪ ಹುಟ್ಟಿ ಬಳಿಗೆ ಹೋದ ವಿದ್ಯಾ ಎಂಬ ಸಕರ್ಾರಿ ನೌಕರಳಿಗೆ ಅಚ್ಚರಿ ಕಾದಿತ್ತು. ಆ ವೃದ್ಧೆಯನ್ನು ಮಾತನಾಡಿಸಿದರೆ ಸುಶಿಕ್ಷಿತೆ ಎಂಬುದು ತಿಳಿಯಿತು. ತಾಯಿಯನ್ನೇ ಭಿಕ್ಷಾಟನೆಗೆ ಬಿಟ್ಟ ಸುಪುತ್ರ ಮತ್ತಷ್ಟು ಪ್ರಶ್ನೆ ಕೇಳಿದಾಗ ಆಕೆ ಗಣಿತದ ನಿವೃತ್ತ ಶಿಕ್ಷಕಿ ಎಂಬುದು ತಿಳಿದು ದಿಗ್ಭ್ರಮೆಯಾಯ್ತು. ವಿದ್ಯಾ ಕೊಟ್ಟ ಇಡ್ಲಿಯನ್ನು ಗಬಗಬನೆ ತಿನ್ನುತ್ತಿದ್ದ ಆಕೆಯನ್ನು ಕಂಡು ಕರುಳು ಕಿವುಚಿದಂತಾಯ್ತು. ಆಕೆಯ ಫೋಟೋ ಕ್ಲಿಕ್ಕಿಸಿ, ಅದನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಾಕಿ, ಆಕೆಯಿಂದ ಪಾಠ ಕಲಿತ ವಿದ್ಯಾಥರ್ಿಗಳ್ಯಾರಿಗಾದರೂ ಆಕೆಯ ಗುರುತುಹತ್ತಿ ಸಹಾಯ ಮಾಡಬಹುದು ಎಂದು ನಿರೀಕ್ಷಿಸುತ್ತ ಕುಳಿತರು. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಜಗದಲ್ಲಿ ಇಂಥವ್ರೂ ಇತರ್ಾರೆ? ನಿರೀಕ್ಷೆ ಸುಳ್ಳಾಗಲಿಲ್ಲ. ಆಕೆಯ ಹಲವು ವಿದ್ಯಾಥರ್ಿಗಳಿಗೆ 'ಇವರು ತಮ್ಮ ವಸ್ಲಾ ಟೀಚರ್' ಎಂಬುದು ತಿಳಿಯಿತು. ತಮ್ಮ ಬದುಕಿಗೊಂದು ಹಾದಿ ತೋರಿದ ಗುರು ಈಗ ಇಂಥ ದಯನೀಯ ಸ್ಥಿತಿಯಲ್ಲಿರುವುದನ್ನು ಕಂಡು ಮರುಗಿದರು. ಅವರಿದ್ದ ಜಾಗಕ್ಕೆ ಬಂದು ತಮ್ಮ ಜೊತೆ ಬರುವಂತೆ ಕೇಳಿಕೊಂಡರು. ಆದರೆ ಶಿಕ್ಷಕಿಗೆ ಯಾರೊಂದಿಗೆ ಬರುವುದಕ್ಕೂ ಇಷ್ಟವಿಲ್ಲ. "ತನ್ನ ಪತಿ-ಮಗ ಅಲ್ಲದೆ ಬೇರೆ ಯಾರೊಂದಿಗೂ ನಾನು ಬರುವುದಿಲ್ಲ" ಎಂಬುದೊಂದೇ ವಸ್ಲಾ ಅವರ ಹಟ. ಖಜಣಡಿಜಜ ಏಜಡಿಚಿಟಚಿ ಒಚಿಣ ಖಿಜಚಿಛಿಜಡಿ ಈಠಣಟಿಜ ಃಜರರಟಿರ ಂಣ ಂ ಖಚಿಟತಿಚಿಥಿ ಖಣಚಿಣಠಟಿ! ಪತಿ ಮತ್ತು ಮಗ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆಂಬ ಅನುಮಾನದ ಮೇರೆಗೆ ಪೊಲೀಸರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ. ವಸ್ಲಾ ಅವರ ತಂಗಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪತಿ ಮತ್ತು ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries