HEALTH TIPS

No title

ದಲಿತರ ಮೀಸಲಾತಿ ವಿರೋಧಿಸಿಲ್ಲ; ತಪ್ಪು ಕಲ್ಪನೆಯಿಂದ ಪ್ರತಿಭಟನೆ ಉಡುಪಿ: ಧರ್ಮ ಸಂಸದ್ನಲ್ಲಿ ನಾನು ಮಂಡಿಸಿ ಸ್ವೀಕರಿಸಿದ ಪ್ರಸ್ತಾವದಲ್ಲಿ ದಲಿತರ ಮೀಸಲಾತಿಯನ್ನು ವಿರೋಧಿಸಿಯೇ ಇಲ್ಲ. ತಪ್ಪು ಕಲ್ಪನೆಗಳಿಂದ ಸಾಹಿತಿಗಳು, ವಿದ್ಯಾಥರ್ಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಪಯರ್ಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಧಾಮರ್ಿಕ ಅಲ್ಪಸಂಖ್ಯಾಕರಿಗೆ ನೀಡುವ ಸವಲತ್ತುಗಳನ್ನು ಧಾಮರ್ಿಕ ಬಹುಸಂಖ್ಯಾಕರಿಗೂ ನೀಡಬೇಕು ಎಂದು ಹೇಳಿದ್ದೆ. ಧಾಮರ್ಿಕ ಅಲ್ಪ?ಸಂಖ್ಯಾಕರಲ್ಲಿ ದಲಿತರು ಸೇರುವುದಿಲ್ಲ. ಮುಸ್ಲಿಮರು ಮತ್ತು ಕ್ರೈಸ್ತರು ಸೇರುತ್ತಾರೆ. ಅವರಿಗೆ ನೀಡುವ ಸವಲತ್ತನ್ನು ನಿಲ್ಲಿಸಲು ನಾನು ಹೇಳಿಲ್ಲ. ಆ ಸವಲತ್ತನ್ನು ಉಳಿದ ಧಾಮರ್ಿಕ ಬಹು?ಸಂಖ್ಯಾಕ ಹಿಂದೂಗಳಿಗೆ ಅನ್ವಯಿಸಬೇಕು ಎಂದು ಮಾತ್ರ ಹೇಳಿದ್ದೇನೆ. ಇದರಿಂದ ಧಾಮರ್ಿಕ ಬಹು?ಸಂಖ್ಯಾಕರಲ್ಲಿ ಸೇರುವ ದಲಿತರಿಗೂ ಹಿಂದುಳಿದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಸವಲತ್ತುಗಳು ದೊರೆಯಲು ಅವಕಾಶವಾಗುತ್ತದೆ. ಅದರಂತೆ ಚಚರ್್, ಮಸೀದಿಗಳಿಗೆ ಇರುವ ಸ್ವಾಯತ್ತತೆ ಮಠ, ಮಂದಿರಗಳಿಗೂ ದೊರೆಯುತ್ತದೆ. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾಗುತ್ತದೆ ಎಂದಿದ್ದೇನೆ. ಸಂವಿಧಾನದಲ್ಲಿ ಅನೇಕ ತಿದ್ದುಪಡಿಗಳು ಈಗಾಗಲೇ ನಡೆದಿವೆ. ನಾನು ಸೂಚಿಸಿದ ತಿದ್ದುಪಡಿ ಸಂವಿಧಾನ ವಿರೋಧಿಯಾಗುತ್ತದೆಯೇ ಎಂದವರು ಪ್ರಶ್ನಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವುದು ಬೇಡ. ಎಲ್ಲರನ್ನು ಸಮಾನವಾಗಿ ನೋಡಿ ಎನ್ನುವುದೇ ಇದರ ಸಂದೇಶವಾಗಿದೆ ಎಂದರು. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಂ. ಮುನ್ಷಿ, ಬೆನಗಲ್ ರಾಮ ರಾವ್ ಮೊದಲಾದವರು ಸದಸ್ಯರಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಡಾ| ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿ ಸಂವಿಧಾನದ ಕರಡು ಪ್ರತಿಯನ್ನು ಸಿದ್ಧಪಡಿಸಿತ್ತು. ರಾಜೇಂದ್ರ ಬಾಬು ಅಧ್ಯಕ್ಷತೆಯ ರಾಷ್ಟ್ರದ 500ಕ್ಕಿಂತ ಹೆಚ್ಚು ಪ್ರತಿನಿಧಿಗಳುಳ್ಳ ಸಂಘಟನಾ ಸಮಿತಿಯು ಸಂವಿಧಾನವನ್ನು ಅಂಗೀಕರಿಸಿತ್ತು ಎಂದು ಪೇಜಾವರ ಹಿರಿಯ ಶ್ರೀಗಳು ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries