ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2017
ಧರ್ಮ ಸಂಸತ್=ಬಹುಸಂಖ್ಯಾತರಿಗೂ ಅಲ್ಪಸಂಖ್ಯಾತರ ಸೌಲಭ್ಯ: ಸಂವಿಧಾನ ತಿದ್ದುಪಡಿಗೆ ಆಗ್ರಹ
ಧಾಮರ್ಿಕ ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳನ್ನು ಬಹುಸಂಖ್ಯಾತರಿಗೆ ಒದಗಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸಕರ್ಾರವನ್ನು ಧರ್ಮ ಸಂಸತ್ ಆಗ್ರಹಿಸಿದೆ.
ಬಹುಸಂಖ್ಯಾತರಿಗೂ ಅಲ್ಪಸಂಖ್ಯಾತರ ಸೌಲಭ್ಯ: ಸಂವಿಧಾನ ತಿದ್ದುಪಡಿಗೆ ಆಗ್ರಹ
ಉಡುಪಿ: ಧಾಮರ್ಿಕ ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳನ್ನು ಬಹುಸಂಖ್ಯಾತರಿಗೆ ಒದಗಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರ ಸಕರ್ಾರವನ್ನು ಧರ್ಮ ಸಂಸತ್ ಆಗ್ರಹಿಸಿದೆ.
ಭಾನುವಾರ ಧರ್ಮ ಸಂಸತ್ನ ಮೂರನೇ ಗೋಷ್ಠಿಯಲ್ಲಿ ಪಯರ್ಾಯ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಮಂಡಿಸಿದ ನಿರ್ಣಯವನ್ನು ಅಯೋಧ್ಯೆಯ ಮಹಂತ ಕಮಲನಯನದಾಸ ಮಹಾರಾಜರು ಅನುಮೋದಿಸಿದರು.
ಸೌಲಭ್ಯಗಳಿಗಾಗಿ ಬಹುಸಂಖ್ಯಾತ ಸಮುದಾಯಗಳು, ಅಲ್ಪಸಂಖ್ಯಾತ ಸಮುದಾಯದ ಮಾನ್ಯತೆ ಬಯಸುತ್ತಿವೆ. ಇದಕ್ಕಾಗಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವಂತೆ ಕೇಂದ್ರವನ್ನು ಆಗ್ರಹಿಸಲಾಯಿತು.
ಈ ನಿರ್ಣಯಕ್ಕೆ ಸಾಧು ಸಂತರು ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದರು.

