HEALTH TIPS

No title

ವಕರ್ಾಡಿ ಕಾವಿಃ ಕ್ಷೇತ್ರದಲ್ಲಿ ಷಷ್ಠೀ ಮಹೋತ್ಸವ ಮಂಜೇಶ್ವರ: ವಕರ್ಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠೀ ಮಹೋತ್ಸವವು ಬ್ರಹ್ಮಶ್ರೀ ದಿನೇಶಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ, ಧಾಮರ್ಿಕ ವಿಧಿ ವಿಧಾನಗಳೊಂದಿಗೆ ಜರಗಿತು. ಸ್ಕಂದ ಪಂಚಮಿಯ ಅಂಗವಾಗಿ ಪವಮಾನ ಹಾಗೂ ಪಂಚಾಮೃತ ಅಭಿಷೇಕ, ದೈವಗಳಿಗೆ ತಂಬಿಲ, ನಾಗತಂಬಿಲ, ಕೂಟ ಮಹಾಜಗತ್ತು ಸಾಲಿಗ್ರಾಮ ಮಂಗಲ್ಪಾಡಿ ಅಂಗಸಂಸ್ಥೆಯ ಯಕ್ಷಕೂಟ ಮಹಿಳೆಯರಿಂದ `ಶಬರಾಜರ್ುನ - ಊರ್ವಶೀ ಶಾಪ' ಕಥಾಭಾಗದ ಯಕ್ಷಗಾನ ತಾಳಮದ್ದಳೆ, ಮಹಾಪೂಜೆ, ಅನ್ನ ಸಂತರ್ಪಣೆ, ಕಾಣಿಕೆಕಾಯಿ ಇಟ್ಟು ಪಂಚಮಿ ಉತ್ಸವ, ಶಾರದಾ ಆಟ್ಸರ್್ ಕಲಾವಿದೆರ್ ಮಂಜೇಶ್ವರ ಅಭಿನಯಿಸಿದ `ಅಣ್ಣೆ ಬಪರ್ೆಗೆ' ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಚಂಪಾ ಷಷ್ಠೀ ಪ್ರಯುಕ್ತ ಪವಮಾನ ಅಭಿಷೇಕ, ರುದ್ರಾಭಿಷೇಕ, ನವಕ ಕಲಶಾಭಿಷೇಕ, ವಿವಿಧ ಭಕ್ತಾದಿಗಳಿಂದ ತುಲಾಭಾರ ಸೇವೆ, ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇವರಿಂದ `ಶಿವಭಕ್ತ ವೀರಮಣಿ' ಯಕ್ಷಗಾನ ತಾಳಮದ್ದಳೆ, ಮಹಾಪೂಜೆ, ಶ್ರೀ ದೇವರ ಬಲಿ, ಅನ್ನ ಸಂತರ್ಪಣೆ, ಕೂಟತ್ತಜೆ ಶ್ರೀ ಅರಸು ದೈವಗಳಿಗೆ ಬಜಕಟ್ಟೆಯಲ್ಲಿ ಸ್ವಾಗತ, ರಾತ್ರಿ ವಕರ್ಾಡಿ ಕಪಣಮೊಗರಿನ ಶ್ರೀ ಉಳ್ಳಾಲ್ತಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಬಯ್ಯನ ಬಲಿ ಹೊರಡುವುದು, ವಸಂತ ಕಟ್ಟೆ ಪೂಜೆ, ಸುಡುಮದ್ದು ಸೇವೆ, ಬಟ್ಟಲು ಕಾಣಿಕೆ, ವಕರ್ಾಡಿ ಶ್ರೀ ಕಾವೀ: ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ (ಮಕ್ಕಳ ಮೇಳ) ಇವರಿಂದ ಯಕ್ಷಗಾನ, ರಂಗಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಸಪ್ತಮಿ ಅಂಗವಾಗಿ ಬಲಿ ಹೊರಡುವುದು, ಬಲಿ ಉತ್ಸವದಲ್ಲಿ ಕೂಟತ್ತಜೆ ಶ್ರೀ ಅರಸು ದೈವಂಗಳ ದೇವರ ಭೇಟಿ, ಬಟ್ಟಲು ಕಾಣಿಕೆ, ನವಕ ಕಲಶಾಭಿಷೇಕ, ಮಹಾಪೂಜೆ, ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ, ಅನ್ನ ಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧನ್ಯರಾದರು. ಶ್ರೀ ಕ್ಷೇತ್ರದ ಪದಾಧಿಕಾರಿಗಳ ಮುಂದಾಳುತ್ವದಲ್ಲಿ ಸ್ವಯಂಸೇವಕರು ಕಾರ್ಯಕ್ರಮದ ಅಚ್ಚುಕಟ್ಟು ಹಾಗೂ ಯಶಸ್ವಿಗೆ ಕಾರಣರಾದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries