ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 17, 2017
ಕಾಟುಕುಕ್ಕೆಯ ಮಕ್ಕಳು ಆಕಾಶವಾಣಿಯ ಗುಬ್ಬಿದಗೂಡಿನಲ್ಲಿ
ಕಾಸರಗೋಡು: ಆಕಾಶವಾಣಿ ಮಂಗಳೂರಿನ ತುಳು ವಿಭಾಗದಿಂದ ಪ್ರಸಾರಗೊಳ್ಳುವ ಮಕ್ಕಳ ತುಳು ಕಾರ್ಯಕ್ರಮ `ಗುಬ್ಬಿದಗೂಡು'ನಲ್ಲಿ ಗ್ರಾಮೀಣ ಪ್ರದೇಶವಾದ ಕಾಟುಕುಕ್ಕೆಯ ಕಾತರ್ಿಕೇಯ ಕ್ರಿಯೇಶನ್ಸ್ನ ಮಕ್ಕಳಿಂದ, ಸನ್ನಿಧಿ ಟಿ.ರೈ ಪೆರ್ಲ ನೇತೃತ್ವದಲ್ಲಿ ತುಳು ಕಥಾ ವಾಚನ, ಕವಿತಾ ವಾಚನ, ರೂಪಕ ಇತ್ಯಾದಿ ವೈವಿಧ್ಯಮಯ ತುಳು ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ. ಕಾರ್ಯಕ್ರಮ ನ.18 ರಂದು ಶನಿವಾರ ಬೆಳಗ್ಗೆ 10.30 ಕ್ಕೆ ಆಕಾಶವಾಣಿ ಮಂಗಳೂರಿನಿಂದ ಕೇಳುಗರು ಆಲಿಸಬಹುದಾಗಿದೆ.


