ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಕುಳೂರಿನಲ್ಲಿ ಕಬಡ್ಡಿ ಪಂದ್ಯಾಟ
ಮಂಜೇಶ್ವರ: ಯುವಭಾರತಿ ಸೇವಾಸಂಘ ಆದರ್ಶನಗರ ಕುಳೂರು ಇದರ ಆಶ್ರಯದಲ್ಲಿ 60 ಕಿಲೋ ವಿಭಾಗದ ಕಬಡ್ಡಿ ಪಂದ್ಯಾಟವು ಡಿ.3ರಂದು ಬೆಳಿಗ್ಗೆ 9ಗಂಟೆಗೆ ಆಯೋಜಿಸಲಾಗಿದೆ,
ಭಾರತೀಯ ಕಬಡ್ಡಿ ತಂಡದ ಮಾಜಿ ತಾರೆ ಭಾಸ್ಕರ ರೈ ಮಂಜಲ್ತೋಡಿ ಪಂದ್ಯಾಟವನ್ನು ಉದ್ಘಾಟಿಸುವರು. ಮೋಹನ ಶೆಟ್ಟಿ ಮಜ್ಜಾರು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಪ್ರಮುಖರಾದ ನಿತ್ಯಾನಂದ ಶೆಟ್ಟಿ ಕೊಡಿಮಾರು ಕುಳೂರು, ಮೊಹಮ್ಮದ್ ಕಂಚಿಲ, ಆಶಾಲತಾ ಬಿ.ಎಂ., ಸುರೇಶ್ಕುಮಾರ್ ಶೆಟ್ಟಿ ಕುಂಜತ್ತೂರು ಪಾಲ್ಗೊಳ್ಳುವರು. ಸ್ಪಧರ್ಾ ವಿಜೇತರಿಗೆ ಪ್ರಥಮ ಬಹುಮಾನವಾಗಿ 7007ರೂ., ದ್ವಿತೀಯ 5005ರೂ., ತೃತೀಯ 3003ರೂ., ಚತುರ್ಥ 1001ರೂ. ನಗದು ಅಲ್ಲದೆ ಟ್ರೋಫಿ ನೀಡಲಾಗುವುದು. ಜೊತೆಗೆ ವೈಯಕ್ತಿಕ ಬಹುಮಾನಗಳನ್ನು ವಿತರಿಸಲಾಗುವುದು.
ರಾತ್ರಿ 9ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಚಂದ್ರಾವತಿ ವಿ.ಪಿ. ಅಧ್ಯಕ್ಷತೆ ವಹಿಸುವರು. ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಚಂದ್ರಶೇಖರ ಕೋಡಿ, ಸುಬ್ರಾಯ ಆಚಾರ್ಯ ಆದರ್ಶನಗರ ಕುಳೂರು ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭ ಬಸವರಾಜ್ ಕುಳೂರು ಅವರನ್ನು ಸಮ್ಮಾನಿಸಲಾಗುವುದು.





