HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ರಾತ್ರಿ 9ರ ಬಳಿಕ ಎಟಿಎಂಗೆ ಹಣ ತುಂಬುವಂತಿಲ್ಲ?
    ನವದೆಹಲಿ: ಎಟಿಎಂಗಳ ಸುರಕ್ಷತೆ ಹಿನ್ನೆಲೆಯಲ್ಲಿ ಸಕರ್ಾರಕ್ಕೆ ಸಲ್ಲಿಸಿರುವ ಹೊಸ ಪ್ರಸ್ತಾವನೆ ಏನಾದರೂ ಅಂಗೀಕರಿಸಲ್ಪಟ್ಟರೆ, ನಗರಗಳಲ್ಲಿರುವ ಎಟಿಎಂಗಳಿಗೆ ರಾತ್ರಿ ಒಂಭತ್ತು ಗಂಟೆ ನಂತರ ಹಣ ತುಂಬುವಂತಿಲ್ಲ.
   ನಗರಗಳ ಎಟಿಎಂಗಳಿಗೆ ಹಣ ಸಾಗಿಸುವ ವಾಹನಗಳ ಮೇಲೆ ಪದೇಪದೆ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಕರ್ಾರದ ಈ ಪ್ರಸ್ತಾವನೆ ಮಹತ್ವ ಪಡೆದುಕೊಂಡಿದೆ. ಇದರ ಪ್ರಕಾರ, ಎಟಿಎಂಗಳಿಗೆ ಹಣ ಸಾಗಿಸುವ ಖಾಸಗಿ ಏಜೆನ್ಸಿಗಳು ಬ್ಯಾಂಕುಗಳಿಂದ ಮಧ್ಯಾಹ್ನದ ಒಳಗೇ ನಿಗದಿತ ಹಣವನ್ನು ಸಂಗ್ರಹಿಸಬೇಕು. ಹಾಗೆಯೇ, ಈ ವಾಹನಗಳಲ್ಲಿ 5 ಕೋಟಿ ರೂಪಾಯಿಗಿಂತ ಅಧಿಕ ಹಣ ಸಾಗಿಸುವಂತಿಲ್ಲ. ಹಣ ಸಾಗಾಟಕ್ಕೆ ಬಳಸುವುದಕ್ಕೇ ಅಗತ್ಯ ಸುರಕ್ಷಾ ವ್ಯವಸ್ಥೆ ಹೊಂದಿರುವ ವಾಹನಗಳನ್ನೇ 5 ಲಕ್ಷ ರೂಪಾಯಿ ಮೇಲ್ಪಟ್ಟ ನಗದು ಸಾಗಿಸಲು ಬಳಸಬೇಕು. ಹಣ ಸಾಗಿಸುವುದಕ್ಕೆ ಹಾಗೂ ಎಟಿಎಂಗೆ ಹಣ ತುಂಬುವ ಕಾರ್ಯಕ್ಕಾಗಿ ತರಬೇತಿ ಪಡೆದ ನೌಕರನನ್ನು ನೇಮಿಸಬೇಕು. ಮತ್ತು ಆ ನೌಕರನ ಪೂವರ್ಾಪರ ಪರಿಶೀಲನೆ ಆಗಿರಬೇಕು. -ಏಜೆನ್ಸೀಸ್
   ಸುರಕ್ಷತೆ ಎಷ್ಟು?
  ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ನಿಗದಿತ ಮಾನದಂಡ ಅನುಸರಿಸುವ ವಾಹನಗಳಲ್ಲೇ ಹಣ ಸಾಗಿಸಬೇಕು. ಚಾಲಕನ ಹೊರತಾಗಿ ಇಬ್ಬರು ಸಶಸ್ತ್ರ ಪಹರೆ ಸಿಬ್ಬಂದಿ, ಇಬ್ಬರು ಎಟಿಎಂ ಅಧಿಕಾರಿಗಳು ಅಥವಾ ಕಸ್ಟೋಡಿಯನ್?ಗಳು ಇರಬೇಕು. ಹಣ ಸಾಗಾಟದ ವ್ಯಾನ್?ಗಳಲ್ಲಿ ಎರಡು ಪ್ರತ್ಯೇಕ ವಿಭಾಗಗಳಿರಬೇಕು. ಒಂದು ಹಣದ ದಾಸ್ತಾನಿಗೆ ಮತ್ತು ಅದು ಪ್ರಯಾಣಿಕರ ವಿಭಾಗದಿಂದ ಪ್ರತ್ಯೇಕವಾಗಿರಬೇಕು. ನಗದು ಇರುವ ಭಾಗವನ್ನು ಉಕ್ಕಿನಿಂದ ತಯಾರಿಸಿದ್ದಾಗಿರಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries