HEALTH TIPS

No title

                 ಗಮಕ ಕಲಾ ಪರಿಷತ್ತು  ಮಹಾಸಭೆ
     ಕಾಸರಗೋಡು: ಕನರ್ಾಟಕ ಗಮಕ ಕಲಾ ಪರಿಷತ್ತು  ಕೇರಳ ಗಡಿನಾಡ ಘಟಕ ಕಾಸರಗೋಡು ಸಂಸ್ಥೆಯ ವಾಷರ್ಿಕ ಮಹಾಸಭೆಯು ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲ್ಲಿ  ಜರಗಿತು.
   ಮಹಾಸಭೆಯ ಅಧ್ಯಕ್ಷತೆಯನ್ನು  ಗಮಕ ಕಲಾ ಪರಿಷತ್ತಿನ ಗಡಿನಾಡ ಘಟಕದ ಅಧ್ಯಕ್ಷ  ತೆಕ್ಕೇಕೆರೆ ಶಂಕರನಾರಾಯಣ ಭಟ್ ವಹಿಸಿದ್ದರು. ವಾಷರ್ಿಕ ವರದಿಯನ್ನು  ಮಂಡಿಸುವುದರೊಂದಿಗೆ ಇಡೀ ವರ್ಷದ ಕಾರ್ಯಕ್ರಮಗಳ ಅವಲೋಕನವನ್ನು  ವಿ.ಬಿ.ಕುಳಮರ್ವ ನಡೆಸಿದರು.
   ಇದೇ ಸಂದರ್ಭದಲ್ಲಿ ಗಡಿನಾಡ ಘಟಕದ ನೂತನ ಪದಾಧಿಕಾರಿಗಳನ್ನು  ಆರಿಸಲಾಯಿತು. ಅಧ್ಯಕ್ಷರಾಗಿ ತೆಕ್ಕೇಕೆರೆ ಶಂಕರನಾರಾಯಣ ಭಟ್, ಉಪಾಧ್ಯಕ್ಷರಾಗಿ ಡಾ.ಬೇ.ಸಿ.ಗೋಪಾಲಕೃಷ್ಣ, ಕಾರ್ಯದಶರ್ಿಯಾಗಿ ವಿ.ಬಿ.ಕುಳಮರ್ವ, ಜೊತೆ ಕಾರ್ಯದಶರ್ಿಯಾಗಿ ಶಿವರಾಮ ಪಿ.ವಿ., ಕೋಶಾಧಿಕಾರಿಯಾಗಿ ಎಸ್.ಜೆ.ಪ್ರಸಾದ್ ಆಯ್ಕೆಯಾದರು.
   ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಧೂರು, ಗೋಪಾಲಕೃಷ್ಣ ಭಟ್ ಶಿರಂತಡ್ಕ, ಗಣೇಶಪ್ರಸಾದ ಪಾಣೂರು, ವಿಜಯಾ ಸುಬ್ರಹ್ಮಣ್ಯ ಕುಂಬಳೆ, ಲಲಿತಾಲಕ್ಷ್ಮಿ ಕುಳಮರ್ವ, ಗೌರವ ಸಲಹೆಗಾರರಾಗಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರನ್ನು  ಆಯ್ಕೆ ಮಾಡಲಾಯಿತು. ವಿ.ಬಿ.ಕುಳಮರ್ವ ಅವರು ಸತತ ನಾಲ್ಕನೇ ಬಾರಿಗೆ ಕಾರ್ಯದಶರ್ಿಯಾಗಿ ಆಯ್ಕೆಯಾಗಿದ್ದು , ಅವರನ್ನು  ಅಭಿನಂದಿಸಲಾಯಿತು.
   ಸಭೆಯಲ್ಲಿ  ಪ್ರಕೃತ ವರ್ಷದಲ್ಲಿ  ನಡೆಸಲುದ್ದೇಶಿಸಿದ ಗಮಕ ಶ್ರಾವಣ ಹಾಗೂ ಇತರ ಕಾರ್ಯ ಚಟುವಟಿಕೆಗಳ ಮತ್ತು  ಗಮಕ ತರಬೇತಿ ಶಿಬಿರಗಳ ಕುರಿತು ಯೋಜನೆ ತಯಾರಿಸಲಾಯಿತು. ಲಲಿತಾಲಕ್ಷ್ಮಿ  ಕುಳಮರ್ವ ಸ್ವಾಗತಿಸಿ, ವಿಜಯಾ ಸುಬ್ರಹ್ಮಣ್ಯ ಕುಂಬಳೆ ವಂದಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries