ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ತೀವ್ರ ವಾಯುಭಾರ ಕುಸಿತ: ಡಿ.8ರಿಂದ ಒಡಿಶಾದಲ್ಲಿ ಜಡಿ ಮಳೆ
ಭುವನೇಶ್ವರ : ಪಶ್ಚಿಮ ಬಂಗಾಲ ಕೊಲ್ಲಿಯಲ್ಲಿ ವಾಯು ಭಾರ ನಿಮ್ನತೆಯು ತೀವ್ರಗೊಂಡಿದ್ದು ಇದೇ ಡಿ.8ರಿಂದ ಒಡಿಶಾದಲ್ಲಿ ಬಲವಾದ ಗಾಳಿ ಸಹಿತ ಜಡಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಸಾಗರ ಅವಲೋಕನ ಮತ್ತು ಉಪಗ್ರಹ ಆಧಾರಿತ ಚಿತ್ರಗಳ ಪ್ರಕಾರ ಆಗ್ನೇಯ ಪಶ್ಚಿಮ ಬಂಗಾಲ ಕೊಲ್ಲಿಯಲ್ಲಿ ವಾಯು ಭಾರ ಕುಸಿತವು ಕೇಂದ್ರಿಕೃತಗೊಂಡಿದೆ ಮತ್ತು ಅದು ಗೋಪಾಲಪುರದಿಂದ 1,250 ಕಿ.ಮೀ. ಆಗ್ನೇಯದಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ವಾಯುಭಾರ ಕೇಂದ್ರೀಕರಣವು ಆಂಧ್ರ ಪ್ರದೇಶ ಕರಾವಳಿಯನ್ನು ತಲುಪುವಾಗ ಸ್ವಲ್ಪ ಮಟ್ಟಿಗೆ ದುರ್ಬಲವಾಗುವ ಸಂಭವವಿದೆ ಎಂದು ಅದು ತಿಳಿಸಿದೆ.





