HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                      ಕಥಾ ರಚನಾ ಶಿಬಿರ
    ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಶಾಲಾ ಮಕ್ಕಳಿಗಾಗಿ ಕಥಾ ರಚನಾ ಶಿಬಿರವು ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
   ಹಿರಿಯ ಸಾಹಿತಿ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕವನ, ಕಥೆ ರಚನೆಯ ಕುರಿತು ಮಾಹಿತಿ ನೀಡಿದರು. ಕವಿಯಾಗಲು ಅಥವಾ ಕಥೆಗಾರನಾಗಲು ಬಯಕೆ, ಪ್ರೀತಿ, ಆಸಕ್ತಿ, ಶ್ರದ್ಧೆ, ಕುತೂಹಲ, ಏಕಾಗ್ರತೆ, ವಿಷಯ, ಶಬ್ದ ಸಂಗ್ರಹ ಮುಖ್ಯ. ಕವನಗಳಲ್ಲಿ ಪ್ರಾಸ, ಛಂದಸ್ಸು ಅಗತ್ಯ. ಕಥೆಯ ವಿಷಯವನ್ನು ವಿಸ್ತರಿಸಿ ಮಾಹಿತಿಗಳನ್ನು ಸೇರಿಸುತ್ತಾ ಹೋಗಬೇಕು. ಸೂಕ್ತ ಶೀಷರ್ಿಕೆಯನ್ನು ಕೊಡಬೇಕು ಎಂಬುದಾಗಿ ಅವರು ಹೇಳಿದರು.
   ಶಿಬಿರಾಥರ್ಿಗಳು ಕಥೆ, ಕವನ ರಚಿಸಿ ಅವುಗಳ ಮೌಲ್ಯಮಾಪನ ಮಾಡಲಾಯಿತು. ಅನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಶ್ಯಾಮ ಭಟ್ ವಹಿಸಿದರು. ಏತಡ್ಕ ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜಾ ಪಿ. ಮತ್ತು ಮಾತೃ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೌಮ್ಯಾ ನೆಲ್ಲಿಮೂಲೆ ಶುಭಹಾರೈಸಿದರು. ಆಯ್ದ ಶಿಬಿರಾಥರ್ಿಗಳು ತಮ್ಮ ಅನಿಸಿಕೆಗಳನ್ನು ಹೇಳಿದರು. ಡಾ.ಬೇ.ಸೀ. ಯವರು ಶಿಬಿರದ ತಮ್ಮ ಅನುಭವಗಳನ್ನು ಹೇಳಿ ಶಿಬಿರಾಥರ್ಿಗಳಿಗೆ ಶುಭಹಾರೈಸಿದರು. ಸುಬ್ರಹ್ಮಣ್ಯ ಭಟ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಕೃಷ್ಣ ಪಿ.ಎಲ್. ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries