HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಜನವರಿಗೆ ಮುನ್ನ ಪ್ರಕಾಶಕರ ಸಮ್ಮೇಳನ ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದಿಂದ ಇದೇ ಮೊದಲ ಬಾರಿ ಪುಸ್ತಕ ಪ್ರಕಾಶಕರ ಸಮ್ಮೇಳನ ಆಯೋಜಿಸುತ್ತಿರುವುದಾಗಿ ಪ್ರಾಧಿಕಾರ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಹೇಳಿದ್ದಾರೆ. ಗುರುವಾರ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದ್ದ ಅಂತಜರ್ಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ವಿದ್ಯಾಥರ್ಿಗಳಿಗೆ ರಸಪ್ರಶೆ,ಲಿಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರ ಕಳೆದ 24 ವರ್ಷಗಳಿಂದ ಪುಸ್ತಕ ಪ್ರಕಟಣೆಗೆ ಸೀಮಿತವಾಗದೆ, ಅತ್ಯುತ್ತಮ ಪುಸ್ತಕಗಳನ್ನು ಪ್ರಕಾಶಕರಿಂದ ಖರೀದಿಸಿ, ಗಡಿನಾಡು ಮತ್ತು ಒಳನಾಡಿನ ಸಕರ್ಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ವಿತರಿಸುತ್ತಿದೆ. ಈ ನಡುವೆ ಪ್ರಕಾಶಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಕಾಶಕರ ಸಮ್ಮೇಳನ ಆಯೋಜಿಸಲಿದ್ದು, ಸಮಸ್ಯೆಗಳ ಕುರಿತು ಚಚರ್ಿಸಿ, ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು. ಕಾಮಧೇನು ಪ್ರಕಾಶನದ ಡಿ.ಕೆ.ಶ್ಯಾಮಸುಂದರ್ ಮಾತನಾಡಿ, ಪುಸ್ತಕ ಪ್ರಕಾಶಕರಿಗೆ ಮಾನ್ಯತೆಯೇ ಇಲ್ಲ. ಸಕರ್ಾರ, ಸಂಘ ಸಂಸ್ಥೆಗಳು ಕೂಡ ಅವರನ್ನು ನಿರ್ಲಕ್ಷ್ವಿಸಿವೆ. ಪ್ರಕಾಶಕರಿಗೆ ಅನುಕೂಲ ಒದಗಿಸಿಕೊಟ್ಟರೆ, ಅಕ್ಷರ ಕ್ಷೇತ್ರಕ್ಕೆ ಇನ್ನೂ ಹೆಚ್ಚು ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಆದರೆ, ಅವರನ್ನು ಅವಕಾಶ ವಂಚಿತರನ್ನಾಗಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. "ಥಟ್ ಅಂತ ಹೇಳಿ' ಖ್ಯಾತಿಯ ಡಾ.ನಾ.ಸೋಮೇಶ್ವರ ಮಾತನಾಡಿ, ಓದಿದ್ದೆಲ್ಲಾ ಅರ್ಥವಾಗದೇ ಇರಬಹುದು. ಆದರೆ, ಗೊತ್ತಿಲ್ಲದಿರುವ ಅದೇಷ್ಟೋ ಸಂಗತಿಗಳನ್ನು ಓದಿನಿಂದ ತಿಳಿದುಕೊಳ್ಳಬಹುದು. ಆದ್ದರಿಂದ ಯಾವುದೇ ಪುಸ್ತಕ ಸಂಪರ್ಕಕ್ಕೆ ಬಂದರೂ ಅದನ್ನು ಓದಬೇಕು. ಅರಿವು ಎಷ್ಟು ವಿಶಾಲವಾಗಿದೆ ಎಂದರೆ ಅದನ್ನು ತಿಳಿಯಲು ಒಂದು ಜನ್ಮ ಸಾಕಾಗುವುದಿಲ್ಲ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಓದುವ, ತಿಳಿದುಕೊಳ್ಳುವ ತ್ಸಾಹ ಹೊಂದಬೇಕು ಎಂದರು. ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬೆಂಗಳೂರಿನ 16 ಸಕರ್ಾರಿ ಶಾಲೆ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು. ಡಾ.ನಾ.ಸೋಮೇಶ್ವರ ಅವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ವೇಳೆ ಪ್ರಾಧಿಕಾರದ 600 ಶೀಷರ್ಿಕೆಗಳ ಪುಸ್ತಕಗಳನ್ನು ಅಂತಜರ್ಾಲದಲ್ಲಿ ಮಾರಾಟ ಮಾಡುವ ವ್ಯವಸ್ಥೆಗೆ ಚಾಲನೆ ನೀಡಲಾಯಿತು. ಪುಸ್ತಕ ಇರುವುದು ಪೂಜೆಗಲ್ಲ: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಪುಸ್ತಕಗಳಿಗೆ ಸರಸ್ವತಿ ಸ್ಥಾನ ನೀಡಲಾಗಿದೆ. ಹಾಗಂತಾ ಅವುಗಳಿಗೆ ದಿನವೂ ಪೂಜೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಕಲಿಯಲು ವಯಸ್ಸಿನ ಭೇದವಿಲ್ಲ. ಆಯಾ ಕಾಲಘಟ್ಟದಲ್ಲಿ ಆಗುವ ಬದಲಾವಣೆಗೆ ತಕ್ಕಂತೆ ನಾವು ಹೊಂದಿಕೊಂಡು ಹೋಗಬೇಕು. ಈ ನಿಟ್ಟಿನಲ್ಲಿ ಅಂತಜರ್ಾಲದಲ್ಲಿ ಪುಸ್ತಕ ಮಾರಾಟ ವ್ಯವಸ್ಥೆಗೆ ಮುಂದಾಗಿರುವ ಪುಸ್ತಕ ಪ್ರಾಧಿಕಾರದ ಕ್ರಮ ಸ್ವಾಗತಾರ್ಹ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries