ಡಿ.16 : ಪ್ರತಾಪನಗರದಲ್ಲಿ ಆರೋಗ್ಯ ತಪಾಸಣೆ ಶಿಬಿರ
ಉಪ್ಪಳ: ಪ್ರತಾಪನಗರ ಶ್ರೀ ಗೌರೀ ಗಣೇಶ ಮಹಿಳಾ ಸಂಘ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಗಲ್ಪಾಡಿ ಇದರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಿಳುವಳಿಕೆ, ತಪಾಸಣೆ ಶಿಬಿರ ಡಿ.16ರಂದು ಬೆಳಿಗ್ಗೆ 10ಗಂಟೆಗೆ ಪ್ರತಾಪನಗರ ಶಿವಶಕ್ತಿ ಮೈದಾನ ಪರಿಸರದಲ್ಲಿರುವ ಶ್ರೀ ಗೌರೀ ಗಣೇಶ ಮಹಿಳಾ ಸಂಘದ ಕಚೇರಿಯಲ್ಲಿ ನಡೆಯಲಿದೆ. ನುರಿತ ವೈದ್ಯರ ತಂಡ ಶಿಬಿರದಲ್ಲಿ ತಪಾಸಣೆ ನಡೆಸಲಿದ್ದು, ಸಾರ್ವಜನಿಕರು ಪ್ರಯೋಜನಪಡೆಯಬಹುದೆಂದು ಸಂಬಂಧಪಟ್ಟವರು ತಿಳಿಸಿರುವರು.


