ಪರಂಪರೆಯ ತೆಕ್ಕೆಯಲ್ಲಿ ಯಕ್ಷಗಾನ ಬೆಳೆದುಬರಬೇಕು-ಸೀತಾರಾಮ ಬಳ್ಳುಳ್ಳಾಯ
ಪೆರ್ಲ: ಯಕ್ಷಗಾನ ಶಾಸ್ತ್ರೀಯ ನೃತ್ಯ, ರಾಗ, ತಾಳಗಳಿಂದೊಡಗೂಡಿ ಪರಂಪರೆಯ ಮಿತಿಯೊಳಗೆ ಪುರಾಣ,ವೇದೋಪನಿಷತ್ತುಗಳನ್ನು ವರ್ತಮಾನದ ಪ್ರಸ್ತುತತೆಯೊಂದಿಗೆ ಶಿಸ್ತುಬದ್ದವಾಗಿ ಪ್ರದಶರ್ಿಸಲಾಗುವ ಶ್ರೇಷ್ಠ ಕಲೆ. ಆದರೆ ಇಂದು ಆಧುನಿಕತೆಯ ಹೆಸರಲ್ಲಿ ನೈಜ ಶೈಲಿಯನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ ಎಂದು ಶ್ರೀಕ್ಷೇತ್ರ ಮುಳಿಯಾರಿನ ಆನುವಂಶಿಕ ಮೊಕ್ತೇಸರ, ಕಲಾಪೋಷಕ ಸೀತಾತಾಮ ಬಳ್ಳುಳ್ಳಾಯ ಅಭಿಪ್ರಾಯ ವ್ಯಕ್ತಪಡಿಸಿದರು.
ಇಡಿಯಡ್ಕ ಶ್ರೀದುಗರ್ಾಪರಮೇಶ್ವರೀ(ಉಳ್ಳಾಲ್ತಿ) ವಿಷ್ಣುಮೂತರ್ಿ ಕ್ಷೇತ್ರದಲ್ಲಿ ಡಿ. 13 ರಿಂದ 17ರ ವರೆಗೆ ನಡೆಯಲಿರುವ "ಯಕ್ಷಪಂಚಕ" ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಬುಧವಾರ ರಾತ್ರಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಮೂಹ ಸಮಧಾನಕರ ರೀತಿಯಲ್ಲಿ ಯಕ್ಷಗಾನಾಸಕ್ತರಾಗುತ್ತಿರುವುದು ಹೌದಾದರೂ ಸಂಪ್ರದಾಯ, ಪರಂಪರೆಗಳ ಬಗ್ಗೆ ನಿಲುವುಗಳಿಲ್ಲದೆ ಶೈಲಿಗಳಲ್ಲಿ ವ್ಯಾಪಕ ಅಪವಾದಗಳು ಕಂಡುಬರುತ್ತಿರುವುದು ವಿಶಾದನೀಯ ಎಂದು ತಿಳಿಸಿದ ಅವರು, ಈ ನಿಟ್ಟಿನ ಸ್ಪಷ್ಟ ನಿದರ್ೇಶನಗಳನ್ನು ಪಾಲಿಸಬೇಕಾದ ಅಗತ್ಯವಿದ್ದು, ಪರಂಪರೆಯ ತೆಕ್ಕೆಯಲ್ಲಿ ಅದು ಬೆಳೆದು ಅರಳಬೇಕು ಎಂದು ಅಭಿಪ್ರಾಯಪಟ್ಟರು. ಕಲಾಪೋಷಣೆಯ ಹೆಸರಲ್ಲಿ ವ್ಯಕ್ತಿ ವೈರಾಗ್ಯ, ನಂಬಿಕೆಗಳ ಮೇಲಿನ ಸವಾರಿ ಸಲ್ಲದೆಂದು ಈ ಸಂದರ್ಭ ಸೂಚಿಸಿದ ಅವರು ಸಮರ್ಥ ಯಕ್ಷಗುರುಗಳ ನಿದರ್ೇಶಾನುಸಾರ ಯಕ್ಷಗಾನವನ್ನು ಮೂಲಪರಂಪರೆಯೊಂದಿಗೆ ಕೊಂಡೊಯ್ದರೆ ಮಾತ್ರ ಯಕ್ಷಗಾನೀಯವಾಗಿ ಬೆಳೆಯುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಧಾಮರ್ಿಕ ಮುಂದಾಲು ಗೋಪಾಲಕೃಷ್ಣ ವಾಂತಿಚ್ಚಾಲು ಅವರು, ಯಕ್ಷಗಾನ ಬೆಳೆಯುವ ಕಲೆ. ಇದೀಗ ಅದು ವ್ಯಾಪರೀಕರಣವಾಗುತ್ತಿದ್ದು ಹಣ ಗಳಿಸುವ ವೃತ್ತಿಯಾಗದೇ ಸ್ವಾರ್ಥರಹಿತ ಕಲಾಮಾತೆಯ ಸೇವೆಯಾಗಬೇಕು ಎಂದರು. ಯಕ್ಷಪಂಚಕದಂತಹ ಕಾರ್ಯ ಇದು ಲೋಕ ಕಲ್ಯಾಣ ಕಾರ್ಯಕ್ಕೂ ಪ್ರೇರಣೆಯಾಗುವಂತದ್ದು. ಎಲ್ಲಿ ಯಕ್ಷಗಾನದ ಚೆಂಡೆ ಸದ್ದು ಕೇಳುವುದೋ ಅಲ್ಲಿ ಮಾತೆ ದುಗರ್ೆಯು ಒಲಿಯುತ್ತಾಳೆ ಅನ್ನುವ ಉಲ್ಲೇಖವಿದೆ. ಜನ ಸೇರುತ್ತಾರೋ ಬಿಡುತ್ತಾರೋ ಬೇರೆ ವಿಷಯ ಆದರೆ ದೇವರನ್ನು ಒಲಿಸಿಕೊಳ್ಳುವ ಇಂತಹ ಕಲಾ ಸೇವೆಗೆ ದೈವ ಸಹಾಯ ಮತ್ತು ಸಜ್ಜನರ ಕಾಯಕಲ್ಪ ಇದ್ದೇ ಇರುತ್ತೆ ಎಂದು ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಇಡಿಯಡ್ಕದ ಕಾರ್ಯದಶರ್ಿ ಸದಾನಂದ ಶೆಟ್ಟಿ ಕುದ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಕೋಟೆ ಗಣಪತಿ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು. ವೀ.ಜಿ. ಕಾಸರಗೊಡು ಸ್ವಾಗತಿಸಿ, ಮಹೇಶ್ ಮುಳಿಯಾರ್ ವಂದಿಸಿದರು. ಸತೀಶ್ ಪುಣಿಚಿತ್ತಾಯ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀಕ್ಷೇತ್ರ ಕೊಲ್ಲಂಗಾನ ಮೇಳದವರಿಂದ ಪಂಚವಟಿ ಪ್ರಸಂಗದ ಪ್ರದರ್ಶನ ನಡೆಯಿತು. ಗುರುವಾರ ರಾತ್ರಿ ಮಾರಣಾದ್ವರ ಪ್ರಸಂಗದ ಬಯಲಾಟ ಪ್ರದರ್ಶನಗೊಂಡಿತು. ಶುಕ್ರವಾರ ಪೆರ್ಲದ ಪಡ್ರೆಚಂದು ಸ್ಮಾರಕ ಉಚಿತ ಯಕ್ಷಗಾನ ನಟ್ಯ ತರಬೇತಿ ಕೇಂದ್ರ ದ ವಿದ್ಯಾಥರ್ಿಗಳಿಂದ ಗುರು ಸಬ್ಬಣಕೋಡಿ ರಾಮ ಭಟ್ ರವರ ನಿದರ್ೇಶನದಲ್ಲಿ ಪ್ರಮೀಳಾಜರ್ುನ-ಬಬ್ರುವಾಹನ, ಶನಿವಾರ ದಿ.ಪಳ್ಳತ್ತಡ್ಕ ರಘುರಾಮ ಆಳ್ವರ ಸಮಸ್ಮರಣಾರ್ಥ ಕೊಲ್ಲಂಗಾನ ಮೇಳದವರಿಂದ ಸುದರ್ಶನ ವಿಜಯ, ಹಾಗೂ ಭಾನುವಾರ ಯಕ್ಷಪಂಚಕ ಸಮಾರೋಪ, ಪ್ರಶಸ್ತಿ ಪ್ರಧಾನ ನಡೆಯಲಿದ್ದು, ಅಂದು ಸಂಜೆ 4 ರಿಂದ ವಿದುಷಿಃ ಕಾವ್ಯಾ ಭಟ್ ಪೆರ್ಲ ಇವರ ಶಿಷ್ಯವೃಂದದವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ. ಸಂಜೆ 6 ರಿಂದ ಅಭಿನಂದನಾ ಸಮಾರಂಭ ನಡೆಯಲಿದ್ದು, ಟಿ.ಆರ್.ಕೆ. ಭಟ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಆಶೀರ್ವಚನ ನೀಡುವರು.ಸೀತಾರಾಮ ಕುಂಜತ್ತಾಯ, ರಾಜೇಂದ್ರ ಬಿ, ತತ್ವಮಸಿ ವೇಣುಗೋಪಾಲ್ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನರಿಗೆ ಅಭಿನಂದನೆ ಸಲ್ಲಿಸಲಾಗುವುದು. ಬಳಿಕ ಬೇಡರ ಕಣ್ಣಪ್ಪ, ಅಗ್ರಪೂಜೆ ಯಕ್ಷಗಾನ ಬಯಲಾಟದೊಂದಿಗೆ ಯಕ್ಷಪಂಚಕ ಸಮಾರೋಪಗೊಳ್ಳಲಿದೆ.