ರಾಷ್ಟ್ರವನ್ನು ಧರ್ಮದ ಅಫೀಮಿನ ಮೂಲಕ ಒಡೆದು ಆಳುವುದು ಅಸಾಧ್ಯ-ಮುನೀರ್ ಕಾಟಿಪಳ್ಳ
ಬದಿಯಡ್ಕ: ರಾಷ್ಟ್ರದಲ್ಲಿ ಇಂದು ಆಂತರಿಕ ಭದ್ರತೆ, ಸೌಹಾರ್ಧತೆಗಳಿಗೆ ಧಕ್ಕೆತರುವ ಧಾಮರ್ಿಕ ಅಫೀಮು ತುಂಬುತ್ತಿರುವುದು ಆತಂಕಾರಿ. ಸಾಮರಸ್ಯದ ಬಹು ಸಂಸ್ಕೃತಿಯ ಜಗತ್ತಿನ ಏಕೈಕ ರಾಷ್ಟ್ರವಾದ ಭಾರತವನ್ನು ಧಾಮರ್ಿಕ ನೆಲೆಗಟ್ಟಿನ ಅಡಿಯಲ್ಲಿ ಅಧಃಪತನಕ್ಕೆ ತಳ್ಳುವ ಸ್ಥಾಪಿತ ಹಿತಾಸಕ್ತಿಗಳ ಪ್ರಯತ್ನಗಳನ್ನು ಮಟ್ಟಹಾಕಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಿಪಿಐಎಂ ಮುಖಂಡ,ಡಿವೈಎಫ್ಐ ಕನರ್ಾಟಕ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕರೆನೀಡಿದರು.
ಮುಂದಿನ ವರ್ಷ ಏ.19 ರಿಂದ 22ರ ವರೆಗೆ ಹೈದರಾಬಾದಿನಲ್ಲಿ ನಡೆಯಲಿರುವ ಸಿಪಿಐಎಂ ಪಕ್ಷದ 22ನೇ ಪಾಟರ್ಿ ಕಾಂಗ್ರೆಸ್ಸ್ ನ ಪೂರ್ವಭಾವಿಯಾಗಿ ಪಕ್ಷ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ವಿವಿಧ ಸ್ತರಗಳ ಸಮ್ಮೇಳನದ ಅಂಗವಾಗಿ ಬದಿಯಡ್ಕದಲ್ಲಿ ನಡೆಯುತ್ತಿರುವ ಕುಂಬಳೆ ಏರಿಯಾ ಸಮ್ಮೇಳನದ ಅಂಗವಾಗಿ ಬುಧವಾರ ಸಂಜೆ ಬದಿಯಡ್ಕ ಪೇಟೆಯಲ್ಲಿ ನಡೆದ ಸಾಂಸ್ಕೃತಿಕ ಸಮ್ಮೇಳನನದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಅಪ್ರಬುದ್ದ ಚಿಂತನೆಗಳಿಂದ ರಾಷ್ಟ್ರವನ್ನು ಹಿಂದೂ ಧರ್ಮದ ಹೆಸರಲ್ಲಿ ಕೊಳ್ಳೆಹೊಡೆಯಲು ಹೊರಟಿರುವ ಬಿಜೆಪಿ ಜನಸಾಮಾನ್ಯರ ಬದುಕುವ ಹಕ್ಕನ್ನು ಕಸಿಯುವ ನಿರಂತರ ಚಟುವಟಿಕೆಗಳಲ್ಲಿ ಕಾಯರ್ೋನ್ಮುಖವಾಗಿದೆ ಎಂದು ಟೀಕಿಸಿದ ಅವರು, ವೈಯುಕ್ತಿಕ ಕಾರಣಗಳಿಂದ ಉಂಟಾಗುವ ಗೊಂದಲ ದೊಂಬಿ, ಕಲಹ, ಕೊಲೆಗಳನ್ನು ತನ್ನ ರಾಜಕೀಯ ಬೇಳೆ ಬೇಯಿಸಲು ಬಳಸಿಕೊಳ್ಳುವ ಬಿಜೆಪಿ ರಾಷ್ಟ್ರೀಯ ಮೌಲ್ಯಗಳಿಗೆ ಕೊಳ್ಳಿಯಿರಿಸುತ್ತಿದೆ ಎಂದು ಆರೋಪಿಸಿದರು. ಕೇರಳದ ಪ್ರಜ್ಞಾವಂತ ನಾಗರಿಕ ಸಮಾಜದ ಸುಭದ್ರತೆಯ ಕೋಟೆಯೊಳಗೆ ಬಿಜೆಪಿಯ ಕಾರ್ಯತಂತ್ರಗಳು ಫಲಿಸದಿರುವುದು ಕೊಲೆಗೆಡುಕುತನದಂತಹ ಘಾತುಕ ಮನೋಭಾವಕ್ಕೆ ಕಾರಣವಾಗುತ್ತಿದೆ ಎಂದು ಆರೋಪಿಸಿದ ಅವರು, ಸಿಪಿಎಂ ಪಕ್ಷ ಧರ್ಮ ನಿರಪೇಕ್ಷ , ಸಮಭಾವದ ಸ್ವಾರ್ಥರಹಿತ ಪಕ್ಷವಾಗಿ ಬೆಳೆದು ಬಂದ ರೀತಿಯ ಬಗ್ಗೆ ವಿಶದೀಕರಿಸಿದರು.
ಸಮಾರಂಭವನ್ನು ಸಿಪಿಐಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ, ಮಾಜಿ ಶಾಸಕ ಕೆ.ವಿ.ಕುಂಞಿರಾಮನ್ ಉದ್ಘಾಟಿಸಿ ಮಾತನಾಡಿ, ಆಧುನಿಕ ಯುವ ಸಮೂಹವನ್ನು ಮುನ್ನಡೆಸುವಲ್ಲಿ ಈ ಹಿಂದಿನ ಮತೀಯ ಭ್ರಾಂತಿಯ ಚಿಂತನೆಗಳು ಫಲ ನೀಡದು. ಇದು ತೀವ್ರ ಅಸಂತುಷ್ಠಿಗೆ ಕಾರಣವಾಗಲಿದ್ದು, ರಾಷ್ಟ್ರಾದ್ಯಂತ ಇಂತಹ ಯತ್ನಗಳು ನಡೆಯುತ್ತಿರುವ ಬಗ್ಗೆ ಪಕ್ಷ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಹಿರಿಯ ಮುಖಂಡ ವೆಂಕಟರಮಣ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ , ಕೆ.ಜಗನ್ನಾಥ ಶೆಟ್ಟಿ, ರಾಮ ಕುರುಪ್ಪ್, ಪ್ರಕಾಶ್ ಅಮ್ಮಣ್ಣಾಯ, ಕೃಷ್ಣ ಬದಿಯಡ್ಕ, ಬಿ.ಎಸ್ ಇಬ್ರಾಹಿಂ, ಎಂ.ರಾಮ ಮೊದಲದವರು ಉಪಸ್ಥಿತರಿದ್ದು ಮಾತನಾಡಿದರು. ಉಮೇಶ್ ರೈ ಸ್ವಾಗತಿಸಿ, ವಂದಿಸಿದರು.
ಬಳಿಕ ವಿವಿಧ ತಂಡಗಳಿಂದ ಭರತನಾಟ್ಯ, ಯಕ್ಷಗಾನ, ನಾಟಕ ಹಾಗೂ ತೌಳವ ಜಾನಪದ ಕುಣಿತಗಳ ಪ್ರದರ್ಶನ ನಡೆಯಿತು.