ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಛಾಯಾಗ್ರಾಹಕರು ಸಾಂಸ್ಕೃತಿಕ ರಾಯಭಾರಿಗಳು : ಶಾಸಕ ಎನ್.ಎ.ನೆಲ್ಲಿಕುನ್ನು
ಕಾಸರಗೋಡು: ಸಮಾಜದ ಅಂಕುಡೊಂಕುಗಳನ್ನು ಬಯಲಿಗೆಳೆಯುವ ಛಾಯಾಗ್ರಾಹಕರು ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಹೇಳಿದರು.
ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಎಕೆಪಿಎ) 33ನೇ ಕಾಸರಗೋಡು ಜಿಲ್ಲಾ ಸಮ್ಮೇಳನವನ್ನು ಡಿ. 1 ರಂದು ಕಾಸರಗೋಡು ನಗರಸಭಾ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು ಜಿಲ್ಲೆಯಲ್ಲಿ ಸಂಭವಿಸಿದ ಎಂಡೋಸಲ್ಫಾನ್ ದುರಂತವನ್ನು ವಿಶ್ವಕ್ಕೆ ತೋರಿಸುವಲ್ಲಿ ಛಾಯಾಗ್ರಾಹಕರು ಪ್ರಮುಖ ಪಾತ್ರವಹಿಸಿದ್ದಾರೆ ಎಂದ ಅವರು ಯಾವುದೇ ಕಾರ್ಯಕ್ರಮವಾಗಲೀ ಛಾಯಾಗ್ರಾಹಕರು ಅತ್ಯಗತ್ಯ. ಇಲ್ಲದಿದ್ದರೆ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗದು. ಕಾರ್ಯಕ್ರಮ ಎಲ್ಲರಿಗೂ ತಿಳಿಯುವಂತಾಗಬೇಕಾದರೆ ಛಾಯಾಗ್ರಾಹಕರ ಪಾತ್ರ ಮುಖ್ಯವಾದುದು. ಛಾಯಾಗ್ರಾಹಕರು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕ್ಷೇಮ ನಿಧಿ ಮೊದಲಾದ ಸವಲತ್ತು ಲಭಿಸುವಂತಾಗಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ಹರೀಶ್ ಪಾಲಕುನ್ನು ಅಧ್ಯಕ್ಷತೆ ವಹಿಸಿದರು. ಹಿರಿಯ ಪತ್ರಕರ್ತ ವಿ.ವಿ.ಪ್ರಭಾಕರನ್ ಸ್ಮರಣಸಂಚಿಕೆ ಬಿಡುಗಡೆಗೊಳಿಸಿದರು. ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ ಅವರು ಪ್ರತಿಭಾನ್ವಿತ ವಿದ್ಯಾಥರ್ಿಗಳನ್ನು ಹಾಗು ವಿವಿಧ ವಲಯಗಳಲ್ಲಿನ ಸಾಧಕರನ್ನು ಗೌರವಿಸಿದರು. ರಾಜ್ಯ ಕೋಶಾಧಿಕಾರಿ ಜೋಯ್ ಗ್ರೇಸ್, ಪ್ರೆಸ್ ಕ್ಲಬ್ನ ಅಧ್ಯಕ್ಷ ಟಿ.ಎ.ಶಾಫಿ, ಪ್ರಶಾಂತ್ ತೈಕಡಪ್ಪುರಂ, ನಿರ್ಮಲಾಕ್ಷನ್ ಮೊದಲಾದವರು ಮಾತನಾಡಿದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಅಸೋಸಿಯೇಶನ್ನ ಜಿಲ್ಲಾ ಅಧ್ಯಕ್ಷ ಹರೀಶ್ ಪಾಲಕುನ್ನು ಧ್ವಜಾರೋಹಣಗೈದರು. ಕೆ.ಸಿ.ಅಬ್ರಹಾಂ ಅಧ್ಯಕ್ಷತೆಯಲ್ಲಿ ರಾಜ್ಯ ಸಮಿತಿಯ ಕೋಶಾಧಿಕಾರಿ ಜೋಯ್ ಗ್ರೇಸ್ ಟ್ರೇಡ್ ಫೆಯರ್ ಉದ್ಘಾಟಿಸಿದರು. ಶರೀಫ್ ಫ್ರೇಂ ಆಟರ್್ ಮಾತನಾಡಿದರು. ರಮೇಶನ್ ಮಾವುಂಕಾಲ್, ದಿಲೀಶ್ ಪರಿಯಾರಂ, ಪ್ರಶಾಂತ್ ತೈಕಡಪ್ಪುರಂ, ಕಲಾಧರನ್ ಪೆರಿಯ, ಕೆ.ಸಿ.ಅಬ್ರಹಾಂ, ಟಿ.ಎಂ.ಸುದರ್ಶನನ್, ಎನ್.ಎ. ಭರತನ್, ವಿಜಯನ್ ಶೃಂಗಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಂಗವಾಗಿ `ಕಲಾಸಂಧ್ಯಾ' ಪ್ರದರ್ಶನಗೊಂಡಿತು.
ಕಾರ್ಯಕ್ರಮದಂಗವಾಗಿ ನ.30ರಂದು ಡಂಗುರ ಮೆರವಣಿಗೆ, ಹೊಸ ಬಸ್ ನಿಲ್ದಾಣ ಸಮೀಪ ಛಾಯಾಚಿತ್ರ ಪ್ರದರ್ಶನ ನಡೆಯಿತು. ಸಿ.ಕೆ.ಜನಾರ್ಧನನ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಸೈಮನ್ ಉದ್ಘಾಟಿಸಿದರು. ಸುಧೀರ್ ಕೆ., ಸುಕು ಸ್ಮಾಟರ್್ ಮಾತನಾಡಿದರು.






