ಮತ್ತೆ ಕನ್ನಡಿಗರಿಗೆ ಅವಮಾನ-ಕನ್ನಡ ಶಿಕ್ಷಕರ ನೇಮಕದಲ್ಲಿ ಮಲೆಯಾಳಿಗರ ತುರುಕುವ ಯತ್ನ
ಕುಂಬಳೆ: ಗಡಿನಾಡು ಕಾಸರಗೊಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಹೊಸಕಿಹಾಕುವ ರಾಜ್ಯ ಸರಕರದ ನಿರಂತರ ಯತ್ನದ ಮಧ್ಯೆ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಕನ್ನಡಿಗರು ರೊಚ್ಚಿಗೇಳುವಂತೆ ಮಾಡಿದೆ.
ರಾಜ್ಯ ಲೋಕಸೇವಾ ಆಯೋಗದ ಮೂಲಕ ಹೈಸ್ಕೂಲ್ ವಿಭಾಗದ ಗಣಿತ ಅಧ್ಯಾಪಕ ನೇಮಕಾತಿಯ ಅಂತಿಮ ಪಟ್ಟಿ ಹೊರಬಂದಿದ್ದು,(ಕೆಟಗರಿ ನಂಬ್ರ 266/2013) ಡಿ.20 ಮತ್ತು 21 ರಂದು ಸಂದರ್ಶನ ಪ್ರಕ್ರಿಯೆಗಳು ನಡೆಯಲಿವೆ.ಲೋಕಸೇವಾ ಆಯೋಗ ಹೊರಡಿಸಿರುವ ಅಂತಿಮ ನೇಮಕಾತಿಯ ಪಟ್ಟಿಯಲ್ಲಿ ಒಟ್ಟು 10 ಸ್ಥಾನಗಳಿಗೆ ನೇಮಕತಿ ನಡೆಯಲಿದ್ದು, 2016 ಅಕ್ಟೋಬರ್ 7 ರಂದು ಓಎಂಆರ್ ಮದರಿಯಲ್ಲಿ ವಿವಿಧೆಡೆ ಪರೀಕ್ಷೆಗಳು ನಡೆದಿತ್ತು.
ಪ್ರಸ್ತುತ ಕನ್ನಡ ಮಾಧ್ಯಮ ಗಣಿತ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ನಡೆಸಿ ನೇಮಕಾತಿ ನಡೆಸಲಿದ್ದು, ಆದರೆ ಈ ಪಟ್ಟಿಯಲ್ಲಿ ಐವರು ಮಲೆಯಾಳಿಗರ ಹೆಸರುಗಳು ಕಮಡುಬಂದಿದೆ. ಗಡಿನಾಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ವಿಶೆಷ ಆದ್ಯತೆ ನೀಡಿ ಇಲ್ಲಿಯ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾಥರ್ಿಗಳಿಗೆ ಕಲಿಸಬೇಕಾದ ಅಧ್ಯಾಪಕರ ನೂತನ ನೇಮಕಾತಿ ಪಟ್ಟಿಯಲ್ಲಿ ಮಲೆಯಾಳಿಗರು ಸೇರಿಕೊಮಡಿರುವುದು ಕನ್ನಡಿಗರ ಹಕ್ಕನ್ನು ಕಸಿಯಲಿರುವ ಸಂಚೆಂಬುದರಲ್ಲಿ ಎರಡು ಮಾತಿಲ್ಲ.
ಈ ಹಿಂದೆಯೂ ಆಗಿತ್ತು:
ಲೋಕಸೇವಾ ಆಯೋಗ ಈ ಹಿಂದೆಯೂ ಇಂತಹ ಪ್ರಯತ್ನಗಳನ್ನು ನಡೆಸಿದ ಉದಾಹರಣೆಗಳಿದೆ. ಎರಡು ವರ್ಷಗಳ ಹಿಂದೆ ಹೈಸ್ಕೂಲ್ ಶಿಕ್ಷಕರ ನೇಮಕತಿಯಲ್ಲಿ ಇದೇ ರೀತಿ ಕನ್ನಡಿಗರ ಮೀಸಲನ್ನು ಕಸಿದು ಮಲೆಯಾಳ ಅಧ್ಯಾಪಕರನ್ನು ನೇಮಿಸಲಾಗಿತ್ತು. ಬಳಿಕ ಹುಟ್ಟಿಕೊಮಡ ಪ್ರತಿರೋಧದ ಬಳಿಕ ಅಂತಹ ಅಧ್ಯಪಕರನ್ನು ಬೋಧಕೇತರ ವಿಭಾಗ(ಬಿಆರ್ಸಿ)ಗೆ ಸ್ಥಳಾಂತರಗೊಳಿಸಿ ಕೈತೊಳೆದುಕೊಂಡ ಆಯೋಗ ಇದೀಗ ಇಂತದೇ ಮತ್ತೊಂದು ಪ್ರಯೋಗಕ್ಕೆ ಕ್ಯಯಿಕ್ಕಿರುವುದು ಗಡಿನಾಡ ಕನ್ನಡಿಗರ ತಾಳ್ಮೆ ಪರಿಶೀಲಿಸುವಂತಿದೆ.
ಜಿಲ್ಲಾಧಿಕಾರಿಗೆ ದೂರು:
ಕನ್ನಡ ಮಾಧ್ಯಮ ಗಣಿತ ಅಧ್ಯಾಪಕರ ನೇಮಕಾತಿಯಲ್ಲಿ ಮಲೆಯಾಳಿಗರನ್ನು ನುಸುಳಿಸಿರುವುದನ್ನು ಪ್ರತಿಭಟಿಸಿ ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕನ್ನಡಿಗರ ಮೇಲೆ ನಡೆಸುವ ದಬ್ಬಾಳಿಕೆಗೆ ಕೊನೆಹಾಡದಿದ್ದರೆ ಪ್ರಭಲ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಜೊತೆಗೆ ಇತರ ಕ್ರಮಗಳಿಗೂ ಪ್ರಯತ್ನಿಸಲಾಗುವುದು ಎಂದು ಹಷರ್ಾದ್ ವಕರ್ಾಡಿ ಪತ್ರಿಕೆಗೆ ತಿಳಿಸಿದ್ದಾರೆ.