HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಧ್ವೇಷ ವಿನಾಶಕ್ಕೆ ಕಾರಣವಾಗುತ್ತದೆ-ವೆಂಕಟಲಕ್ಷ್ಮಿ ಬಸವಲಿಂಗರಾಜು           
   ಬದಿಯಡ್ಕ: ಜಗತ್ತಿನಲ್ಲಿ ಪ್ರೀತಿಯ ಹೊರತು ಬೇರಾವುದರಿಂದಲೂ ಗೆಲುವು ಸಾಧ್ಯವಿಲ್ಲ. ದ್ವೇಶ ಮನುಷ್ಯತ್ವಕ್ಕೆ ಅಪವಾದವಾಗಿದ್ದು, ಅದು ವಿನಾಶಕ್ಕೆ ಕಾರಣವಾಗುವುದು ಎಂದು ಕನರ್ಾಟಕ ಸರಕಾರದ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
   ಅಖಿಲ ಕೇರಳ ಯಾದವ ಸಭಾದ ತಾಲೂಕು ಮಹಿಳಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಅಪರಾಹ್ನ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಆಯೋಜಿಸಲಾಗಿದ್ದ ಕಾಯರ್ಾಗಾರ ಹಾಗೂ ಅಭಿನಂದನಾ ಸಮಾರಂಭವನ್ನು ದೀಪ ಬೆಳಗಿಸಿ, ತುಳುನಾಡಿನ ಸಾಂಪ್ರದಾಯಿಕ ಚೆಂಡೆಯನ್ನು ನುಡಿಸಿ ಉದ್ಘಾಟಿಸಿ ಮಾತನಾಡಿದರು.
   ಭಗವಂತನ ಸೃಷ್ಟಿಯ ಅಪೂರ್ವಗಳಲ್ಲೊಂದಾಗಿರುವ ಮನುಷ್ಯ ಜನ್ಮ ಸ್ತ್ರೀತ್ವವನ್ನು ತಾಳ್ಮೆ, ಭರವಸೆಗಳೊಂದಿಗೆ ಬೆಳೆದುಬಂದಿರುವ ವಿಶೇಷತೆಯಾಗಿದೆ. ಸಮಗ್ರ ಸಮಾಜವನ್ನು ಬೆಳೆಸುವ, ಸನ್ಮಾರ್ಗದಲ್ಲಿ ನಡೆಸುವ ಹೊಣೆಯಿಂದ ಮಹಿಳೆಯರು ಜಾರಿಕೊಂಡಲ್ಲಿ ಅಪಾಯಗಳು ಇವೆ ಎಂದು ಅವರು ತಿಳಿಸಿದರು. ಕಷ್ಟ-ನಷ್ಟಗಳನ್ನು ಸಹಿಸುವ ಮಹಿಳೆಯರದೇ ಆದ ಧೀಶಕ್ತಿಯನ್ನು ಆರದಂತೆ ಕಾಪಾಡಬೇಕಿದೆ. ಪರಸ್ಪರ ಒಲುಮೆ, ಸ್ನೇಹಗಳಿಂದ ಕೌಟುಂಬಿಕ, ಸಾಮಾಜಿಕ ಹೊಣೆಯನ್ನು ನಿರ್ವಹಿಸುವ ಸ್ತ್ರೀ ಆಧುನಿಕ ವ್ಯವಸ್ಥೆಗಳಿಗೆ ತೆರೆದುಕೊಂಡು ಪರಂಪರೆಯನ್ನು ಗೌರವಿಸುವ, ಬೆಳೆಸುವ ನಿಟ್ಟಿನಲ್ಲಿ ಒಗ್ಗಟ್ಟಾದಾಗ ಸಮೃದ್ದತೆ ನೆಲೆಗೊಳ್ಳುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು.
   ಜೀವನದ ಯಾವ ಗಳಿಕೆಗಳೂ ಶಾಶ್ವತ ಅಲ್ಲ. ಸಾಮಾಜಿಕ ಸ್ಥಾನಮಾನ, ಸಂಪತ್ತು-ಸಮೃದ್ದಿ, ಏರಿದ ಎತ್ತರಗಳು ನಾಳೆಗೆ ಇನ್ನಿಲ್ಲವಾಗುತ್ತದೆ. ಆದರೆ ಮಾಡುವ ದಾನ-ಧರ್ಮ, ಸಾಮಾಜಿಕ ಕೊಡುಗೆಗಳು ಹಾಗೂ ಯಾರಿಗೂ ನೋಯದಂತೆ ಬದುಕಿದ ರೀತಿಗಳು ಶಾಶ್ವತವಾಗಿ ನೆಲೆನಿಂತು ಬದುಕಿನ ಸಾರ್ಥಕತೆಗೆ ಕಾರಣವಾಗುತ್ತದೆ ಎಂದು ತಿಳಿಸಿದ ಅವರು, ಆಧುನಿಕ ಸಮಾಜದ ನಾಗಾಲೋಟ ಗಲಿಬಿಲಿಗಳೊಂದಿಗೆ ಬದುಕಿನ ನೈಜ ಲಕ್ಷ್ಯವನ್ನು ಮರೆಸುವ ತಂತ್ರಗಾರಿಕೆ ಹೊಂದಿದೆ ಎಂದು ಎಚ್ಚರಿಸಿದ ಅವರು, ಯುವ ಸಮೂಹವನ್ನು ಸ್ಪಷ್ಟ ಹಾದಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಮರೆಯಬಾರದು ಎಂದು ಆಶಯ ವ್ಯಕ್ತಪಡಿಸಿದರು.
   ಅಖಿಲ ಕೇರಳ ಯಾದವ ಸಭಾದ ಕಾಸರಗೊಡು ತಾಲೂಕು ಸಮಿತಿ ಅಧ್ಯಕ್ಷೆ, ಖ್ಯಾತ ಪ್ರಸೂತಿ ತಜ್ಞೆ ಡಾ.ಶಾಂಭವಿ ಕುಂಬಳೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಸಾಮಾಜಿಕ ವ್ಯವಸ್ಥೆಯೊಂದಿಗೆ ಕವಲು ಹಾದಿಯಲ್ಲಿರುವ ಮಹಿಳೆಯರು ಪರಂಪರೆ, ಸಂಸ್ಕೃತಿಯಿಂದ ದೂರ ಸರಿದರೆ ಒಟ್ಟು ಸಾಮಾಜಿಕ, ಕೌಟುಂಬಿಕ ವ್ಯವಸ್ಥೆಯ ಅಸಮತೋಲನ ನಿಮರ್ಾಣವಾಗುತ್ತದೆ. ಈ ನಿಟ್ಟಿನಲ್ಲಿ ಸಾಮುದಾಯಿಕ ಪ್ರಜ್ಞೆಯೊಂದಿಗೆ ಮುಂದುವರಿಯುವ ಮನಸ್ಸು ಪುನಃಸ್ಥಾಪನೆಯಾಗಬೇಕು ಎಂದು ತಿಳಿಸಿದರು.
  ಸುಳ್ಯ ತಾಲೂಕು ಐವನರ್ಾಡು ಗ್ರಾಮ ಪಂಚಾಯತು ಅಧ್ಯಕ್ಷೆ ರಾಜೀವಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಹಿರಿಯ ಸಾಧಕರಾದ ವಸಂತಿ ಟೀಚರ್, ಕುಸುಮ ಟೀಚರ್, ಗೋಪಿ ಟೀಚರ್, ಸುಮಿತ್ರಾ ಟೀಚರ್ ಹಾಗೂ ವಿದುಷಿಃ ಯೋಗೀಶ್ವರೀ ಜಯಪ್ರಕಾಶ್, ಕೇರಳ ಸರಕಾರದ ಪ್ರಶಸ್ತಿ ವಿಜೇತೆ ಅಂಗನವಾಡಿ ಶಿಕ್ಷಕಿ ಸರೋಜಿನಿಯವರನ್ನು ಈ ಸಂದರ್ಭ ಗೌರವಾಭಿನಂದನೆಗಳೊಂದಿಗೆ ಸನ್ಮಾನಿಸಲಾಯಿತು.
   ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ವಿದ್ಯಾ ಗಣೇಶ್ ಅಣಂಗೂರು ಹಾಗೂ ಕಾಮರ್ೆಲಿನ್ ಟೀಚರ್ ವಿವಿಧ ವಿಷಯಗಳಲ್ಲಿ ಮಾರ್ಗದಶರ್ಿ ತರಬೇತಿ ನೀಡಿದರು. ಅಖಿಲ ಕೇರಳ ಯಾದವ ಸಭಾದ ತಾಲೂಕು ಪ್ರಧಾನ ಕಾರ್ಯದಶರ್ಿ ಅನಿತಾ ಟೀಚರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೋಶಾಧಿಕಾರಿ ರೋಹಿಣಿ ಚಂದ್ರನ್ ವಂದಿಸಿದರು. ಗಡಿನಾಡ ಕಲಾ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷ ಅಖಿಲೇಶ್ ಯಾದವ್ ನಗುಮುಗಂ ಉಪಸ್ಥಿತರಿದ್ದರು. ಪ್ರೇಮಾ ಟೀಚರ್ ಮಾನ್ಯ ಕಾರ್ಯಕ್ರಮ ನಿರೂಪಿಸಿದರು.
   ಬೋಕ್ಸ್: ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ವೆಂಕಟಲಕ್ಷ್ಮಿ ಬಸವಲಿಂಗರಾಜುರವರನ್ನು ಸಮಾರಂಭಕ್ಕೆ ಆಗಮಿಸುತ್ತಿರುವಂತೆ ಮಾತೆಯರು ಅರಸಿನ-ಕುಂಕುಮ, ಪುಷ್ಪ ದೀಪಗಳೊಂದಿಗೆ ಸಾಂಪ್ರದಾಯಿಕ ಕ್ರಮಗಳೊಂದಿಗೆ ಸ್ವಾಗತಿಸಿದರು. ಜೊತೆಗೆ ತುಳುನಾಡಿನ ವಿಶೇಷ ಪೇಟ ತೊಡಿಸಿ ಸ್ವಾಗತಿಸಲಾಯಿತು.
    ಕಾಸರಗೊಡು ಜಿಲ್ಲೆಗೆ ಮೊತ್ತಮೊದಲ ಬಾರಿ ಆಗಮಿಸುತ್ತಿರುವ ತಾನು ಬಹುಭಾಷೆ ಮಾತನಾಡುವ ಜನರು, ಕ್ರಿಯಾತ್ಮಕವಾಗಿ ವಿವಿಧ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಮಹಿಳೆಯರನ್ನು ಕಂಡು ಆಶ್ಚರ್ಯಗೊಂಡಿರುವುದರ ಜೊತೆಗೆ ಕನರ್ಾಟಕದ ಹಿಂದುಳಿದಿರುವ ಇತರ ಜಿಲ್ಲೆಗಳಲ್ಲಿ ಈ ಮಾದರಿಯನ್ನು ಪ್ರಚುರಪಡಿಸುವುದಾಗಿ ತಿಳಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries