ಅಂತರಾಷ್ಟ್ರೀಯ ವಿಚಾರ ಸಂಕಿರಣ
ಮಂಜೇಶ್ವರ: ಸಾಮಾಜಿಕ, ಸಾಂಸ್ಕೃತಿಕ ಶ್ರೀಮಂತಿಕೆಯ ತುಳು ಭಾಷೆ, ಜನಾಂಗ ಕರಾವಳಿಯಾದ್ಯಂತ ನೆಲೆಯೂರಿ ಜಗತ್ತಿನ ವಿವಿಧೆಡೆಗಳಲ್ಲಿ ಇಂದು ಸಾಧಿಸಿರುವ ಸಾಧನೆಗಳು ಅಪೂರ್ವ. ತುಳು ಭಾಷೆಯ ಪ್ರಭಾವ ಕೇರಳದ ತುತ್ತ ತುದಿಯವರೆಗೂ ವ್ಯಾಪಿಸಿದ್ದರ ಪರಿಣಾಮ ಮಲೆಯಾಳಕ್ಕೆ ಲಿಪಿಯೊಂದನ್ನು ನೀಡಲು ಸಾಧ್ಯವಾಯಿತು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ.ರತ್ನಾವತಿ ಟಿ. ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ "ಆಧುನಿಕ ತುಳು ಸಾಹಿತ್ಯದಲ್ಲಿ ಮಹಿಳಾ ಸಂವೇದನೆಗಳ ನೆಲೆಗಳು" ವಿಷಯದ ಅಂತರಾಷ್ಟ್ರೀಯ ಏಕದಿನ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಂಥಿಕ ಭಾಷೆಯಾಗಿ ಗುರುತಿಸಲ್ಪಡದಿದ್ದರೂ ಶ್ರೀಮಂತವಾದ ವೈವಿದ್ಯಮಯ ಜಾನಪದ, ಆರಾಧನೆ, ನಂಬಿಕೆ, ನಡವಳಿಕೆಗಳ ಸುಧೀರ್ಘ ಇತಿಹಾಸದಿಂದ ವ್ಯಾಪಕ ಪ್ರಮಾಣದ ಸಾಂಸ್ಕೃತಿಕ, ಸಾಮಾಜಿಕ, ಜನಪದೀಯ ಸಮೃದ್ದತೆ ಹೊಂದಿದೆ ಎಂದು ತಿಳಿಸಿದ ಅವರು, ಆಧುನಿಕ ಸಾಹಿತ್ಯ ಸಹಿತ ನವೀನತೆಯತ್ತ ತುಳು ಭಾಷೆ ಬೆಳೆದುಬರಬೇಕಿದೆ ಎಂದು ತಿಳಿಸಿದರು. ಭೂಪ್ರದೇಶದಿಂದ ಭೂಪ್ರದೇಶಕ್ಕೆ ವೈವಿಧ್ಯತೆ ಮೂತರ್ಿವೆತ್ತಿರುವ ತುಳು ಭಾಷೆ, ಸಾಹಿತ್ಯ, ಕಲಾಪ್ರಕಾರಗಳ ಉಳಿಸುವಿಕೆಯಲ್ಲಿ ಪರಂಪರೆಯ ಒಳನೋಟಗಳೊಂದಿಗೆ ಧೀರ್ಘ ಕಾಲೀನ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ಅವರು ತಿಳಿಸಿದರು.
ಕರಾವಳಿಯಾದ್ಯಂತ ತುಳು ಭಾಷೆ, ಸಂಸ್ಕೃತಿಗೆ ಸಂಭವಿಸುವ ಹೊಡೆತಗಳು ಅದು ಇತರ ಭಾಷೆ, ಜನಾಂಗಗಳಿಗೂ ಬಾಧಿಸುವುದು. ಈ ಕಾರಣದಿಂದ ಎಲ್ಲರೊಂದಿಗೆ ಒಂದಾಗುವ ತುಳು ಭಾಷೆಯನ್ನು ಇನ್ನಷ್ಟು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಯುವ ಸಮೂಹ ಕ್ರಿಯಾತ್ಮಕ ಚಟುವಟಿಕೆಗೆ ಮುಂದೆ ಬರಬೇಕೆಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮ್ಯಾಥ್ಯು ಜೋಜರ್್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಆಂತರಿಕ ಮೌಲ್ಯ ಖಾತರಿ ಘಟಕದ ಸಂಯೋಜಕ ಡಾ.ದಿಲೀಪ್ ಡಿ. ಶುಭಹಾರೈಸಿದರು.ಕನ್ನಡ ವಿಭಾಗ ಮುಖ್ಯಸ್ಥೆ ಅಮಿತಾ ಎಸ್. ಸ್ವಾಗತಿಸಿ, ವಿಚಾರ ಸಂಕಿರಣ ಸಂಯೋಜಕಿ ಲಕ್ಷ್ಮೀ ಕೆ. ವಂದಿಸಿದರು.
ಬಳಿಕ ನಡೆದ ವಿಚಾರಗೋಷ್ಠಿಗಳಲ್ಲಿ ಮಂಗಳೂರು ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಧಾಕುಮಾರಿ ಕೆಯವರು ಆಧುನಿಕ ತುಳು ಸಾಹಿತ್ಯದಲ್ಲಿ ಸ್ತ್ರೀ ಆಥರ್ಿಕ ಸ್ವಾತಂತ್ರ್ಯದ ನೆಲೆಗಳು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ರಾಜಶ್ರೀಯವರು ಆಧುನಿಕ ತುಳು ಸಾಹಿತ್ಯದಲ್ಲಿ ಸ್ತ್ರೀ ಸಾಮಾಜಿಕ ಸಮಾನತೆಯ ನೆಲೆಗಳು, ಕಾಸರಗೋಡು ಸರಕಾರಿ ಕೇಲೇಜಿನ ಸಹಾಯಕ ಪ್ರಾದ್ಯಾಪಕಿ ಡಾ.ಆಶಲತಾರವರು ತುಳು ಸಾಹಿತ್ಯದಲ್ಲಿ ಸ್ತ್ರೀ ಸಾಂಸ್ಕೃತಿಕ ಅನನ್ಯತೆಯ ನೆಲೆಗಳು ಎಂಬ ವಿಷಯಗಳಲ್ಲಿ ವಿಷಯ ಮಂಡಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಸಮಾರೋಪ ಭಾಷಣ ಮಾಡಿದರು.