ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 04, 2017
ಸನ್ನಿದಾವತೆ ಇಸ್ಲಾಂ ನಿಂದ ಸೇವಾ ಕಾರ್ಯ
ಉಪ್ಪಳ: ಪ್ರವಾದಿ ಮೊಹಮ್ಮದ್ ರ ಸಂದೇಶ ದೀನದಲಿತರ, ಸಂಕಷ್ಟದಲ್ಲಿರುವವರ ಸೇವೆಗೈಯ್ಯುವುದೇ ಪ್ರಮುಖವಾಗಿದ್ದು, ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಪ್ರವಾದಿಯ ಸಂದೇಶ ನೈಜ ಪಾಲನೆಯಾಗುತ್ತದೆ. ಧಮನಿತರ, ದೀನರ ಬದುಕಲ್ಲಿ ಸಂತಸ ಮೂಡಿಸುವುದು ಪ್ರತಿಯೊಬ್ಬರ ಜೀವನ ಆದರ್ಶ ಆದಾಗ ಸಮೃದ್ದತೆ ನೆಲೆಗೊಳ್ಳುತ್ತದೆ ಎಂದು ಸನ್ನಿದಾವತೆ ಇಸ್ಲಾಂ ಸಂಘ ಉಪ್ಪಳದ ಕಾರ್ಯದಶರ್ಿ ಮೊಹಮ್ಮದ್ ಅಝೀಂ ಮಣಿಮುಂಡ ತಿಳಿಸಿದರು.
ಪ್ರವಾದಿ ಮೊಹಮ್ಮದ್ ನೆಬಿಯವರ ಜನ್ಮ ದಿನಾಚರಣೆಯ ಅಂಗವಾಗಿ ಉಪ್ಪಳದ ಸನ್ನಿದಾವತೆ ಇಸ್ಲಾಂ ಕೇರಳ ಸಂಘಟನೆಯ ನೇತೃತ್ವದಲ್ಲಿ ಪರವನಡ್ಕದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ವಾಸಿಗಳಿಗೆ ಹಣ್ಣು-ಹಂಪಲು ವಿತರಿಸಿ, ಕ್ಷೇಮ ಸಮಾಚಾರ ವಿಚಾರಿಸಿ, ವಿವಿಧ ವಿನೋದಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಅಬ್ದುಲ್ ಹಫೀಸ್, ನಾಸಿರ್, ಅಬ್ದುಲ್ ಹಮೀದ್ ಉಪ್ಪಳ,ಅಮೀರ್ ಖಾನ್, ಸೈಯ್ಯದ್ ಇಬ್ರಾಹಿಂ, ಸೈಯ್ಯದ್ ಇಬ್ರಾಹಿಂ, ಮೊಹಮ್ಮದ್ ಶೆಹಝಾನ್ಖಾನ್ ಮುಫ್ತಿ ಫಾರೂಕ್ ರಸ್ಭಿ, ಮೊಹಮ್ಮದ್ ಫಾಸಿಲ್ ಬೀಟಿಂದಡಿ ಮೊದಲಾದವರು ಉಪಸ್ಥಿತರಿದ್ದು ಮಾತನಡಿದರು.







