HEALTH TIPS

ಯಾವುದೇ ಶೀರ್ಷಿಕೆಯಿಲ್ಲ


    ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ ,ಕಾಟುಕುಕ್ಕೆ ಇದರ ದಶಮಾನೋತ್ಸವ ಪ್ರಯುಕ್ತ ಭಜಕರ ಸಹಕಾರದೊಂದಿಗೆ ಶ್ರೀನಿವಾಸ ಮಹಾಮಂಗಲೋತ್ಸವ,  ರಾಮಕೃಷ್ಣ ಕಾಟುಕುಕ್ಕೆ ಅವರ ದಾಸಸಂಕೀರ್ತನಾ ಯಾನದ 500ನೇ ಸಂಭ್ರಮದ ಲೋಕಾರ್ಪಣೆಯ ಸಂದರ್ಭ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಸಂಕೀರ್ತನಾ ಕಾರ್ಯಕ್ರಮ ನಡೆಯಿತು.
   ಸಮಾರಂಭದಲ್ಲಿ ಭಾಗವತರಾಗಿ ತೆಂಕು ಬಡಗಿನ ಖ್ಯಾತಿಯ  ಸತೀಶ್ ಪುಣಿಚಿತ್ತಾಯ,  ಗಾನಕೋಗಿಲೆ ಗಿರೀಶ್ ರೈ ಕಕ್ಕೆಪದವು , ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರು ಭಾಗವಹಿಸಿದರು. "ಜೋ ಜೋ ಬಾಲೇ" , ತಿರುಪತಿ ವೆಂಕಟರಮಣ ಎನ್ನುವ ಕೀರ್ತನೆ ಬಹಳ ಸುಮಧುರವಾಗಿ ಪ್ರಸ್ತುತಗೊಂಡಿತು. ಮೃದಂಗದಲ್ಲಿ ಗುರುಪ್ರಸಾದ್ ಬೊಳಿಂಜಡ್ಕ ,ತಬಲದಲ್ಲಿ  ಲವಕುಮಾರ್ ಆಚಾರ್ಯ ಐಲ ಸಹಕರಿಸಿದರು. ಹರೀಶ್ ಬಳಂತಿಮೊಗರು ಕಾರ್ಯಕ್ರಮ ನಿರೂಪಿದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries