HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಶಾಸಕರ ವಿರುದ್ಧ ಪ್ರಕರಣ ಹಿಂಪಡೆಯಲು ಮುಂದಾದ ಕೇರಳ ಸಕರ್ಾರ, ವ್ಯಾಪಕ ಪ್ರತಿಭಟನೆ
     ತಿರುವನಂತಪುರಂ: ಕೇರಳದ ಆರು ಮಂದಿ ಸಿಪಿಐಎಂ ಶಾಸಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವ ಕೇರಳ ಸಕರ್ಾರದ ನಿಧರ್ಾರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.
    ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ನಿಧರ್ಾರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2015 ಮಾಚರ್್ 13ರಂದು ಅಂದಿನ ವಿತ್ತ ಸಚಿವ ಕೆಎಂ ಮಣಿ ಅವರು  ಬಜೆಟ್ ಮಂಡನೆ ವೇಳೆ ಶಾಸನಸಭೆಯಲ್ಲೇ ಸಿಪಿಐಎಂನ ಕೆಲ ಶಾಸಕರು ಗದ್ದಲವೇರ್ಪಡಿಸಿದ್ದರು. ಸಚಿವರು ಬಾರ್ ಮಾಲೀಕರಿಂದ ಲಂಚ ಪಡೆದು ಅವರಿಗೆ ಅನುಕೂಲವಾಗುವಂತೆ ಬಜೆಟ್ ಸಿದ್ದಪಡಿಸಿದ್ದಾರೆ ಎಂದು ಆರೋಪಿಸಿ  ಶಾಸನ ಸಭೆಯ ಮೈಕ್ ಗಳನ್ನು ಕಿತ್ತೆಸೆದು ಪೀಠೋಪಕರಣ ಧ್ವಂಸಗೊಳಿಸಿದ್ದರು.
    ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ಸ್ಪೀಕರ್ ಸಕ್ತನ್ ಅವರು ಸಿಪಿಐಎಂನ ಆರು ಮಂದಿ ಶಾಸಕರ ವಿರುದ್ಧ ತನಿಖೆ ನಡೆಸುವಂತೆ ಅಪರಾಧ ವಿಭಾಗದ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ  ಪೊಲೀಸರು ಶಾಸಕರ ವಿರುದ್ಧ ಎಫ್ ಐಆರ್ ಕೂಡ ದಾಖಲಿಸಿದ್ದರು. ಅದರಂತೆ ಹಾಲಿ ಶಾಸಕರಾಗಿರುವ ಕೆ.ಟಿ. ಜಲೀಲ್, ಇ.ಪಿ ಜಯರಾಜನ್ ಸೇರಿದಂತೆ 6 ಮಂದಿ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.  ಇತ್ತೀಚೆಗಷ್ಟೇ ಮಾಜಿ ಶಾಸಕ ವಿ. ಶಿವಂಕುಟ್ಟಿ ಅವರು ತಮ್ಮ ವಿರುದ್ಧದ ವಿಚಾರಣೆಯನ್ನು ಹಿಂತೆಗೆದುಕೊಳ್ಳುವಂತೆ ಸಿಎಂ ಪಿಣರಾಯಿ ವಿಜಯನ್ ಬಳಿ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಒಂದು ಪ್ರಕರಣಕ್ಕೆ ಎರಡೆರಡು ಬಾರಿ ಶಿಕ್ಷೆ  ವಿಧಿಸಲು ಹೇಗೆ ಸಾಧ್ಯ ಎಂದು ಕೇಳಿದ್ದರು.
   ಇದರ ಬೆನ್ನಲ್ಲೇ ಸಿಎಂ ವಿಜಯನ್ ಅವರು ಶಾಸಕರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಮುಂದಾಗಿದ್ದು, ಸಕರ್ಾರದ ಈ ನಿಧರ್ಾರ ಕೇರಳದಲ್ಲಿ ಮತ್ತೆ ರಾಜಕೀಯ ಗದ್ದಲಕ್ಕೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ  ಮಾತನಾಡಿರುವ ವಿಪಕ್ಷ ನಾಯಕ ಹಾಗೂ ಮಾಜಿ ಶಾಸಕ ಕೆಸಿ ಜೋಸೆಫ್ ಅವರು ಸಕರ್ಾರ ತನ್ನ ನಿಧರ್ಾರದಿಂದ ಸರಿಯುವವರೆಗೂ ತಾವು ಪ್ರತಿಭಟನೆ ಹಿಂಪಡೆಯುವುದಿಲ್ಲ..ಸಕರ್ಾರ ಹಠಮಾರಿತನ ಮುಂದುವರೆಸಿದರೆ ನಾವು  ಯಾವುದೇ ಹಂತಕ್ಕೂ ಹೋಗಲು ಸಿದ್ಧ ಎಂದ ಎಚ್ಚರಿಕೆ ನೀಡಿದ್ದಾರೆ.
   ಇಂದಿನಿದ ಕೇರಳ ಶಾಸನಸಭೆ ಆರಂಭವಾಗಲಿದ್ದು, ಸಕರ್ಾರದ ನಿಧರ್ಾರವನ್ನು ವಿಪಕ್ಷಗಳು ಸದನದಲ್ಲಿ ಪ್ರಶ್ನಿಸಿ ಗದ್ದಲವೆಬ್ಬಿಸುವ ಸಾಧ್ಯತೆ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries