ಹದಗೆಟ್ಟ ರಸ್ತೆ : ಮಧೂರು ಪಂಚಾಯತ್ ಆಡಳಿತ ಸಮಿತಿ ನೇತೃತ್ವದಲ್ಲಿ ರಸ್ತೆ ತಡೆ
ಕಾಸರಗೋಡು: ಸಂಪೂರ್ಣ ಕೆಟ್ಟು ಹೋದ ಕಾಸರಗೋಡು-ಮಧೂರು ರಸ್ತೆಯನ್ನು ದುರಸ್ತಿಗೊಳಿಸದ ಅಧಿಕಾರಿಗಳ ಮೌನವನ್ನು ಪ್ರತಿಭಟಿಸಿ ಪಂಚಾಯತು ಆಡಳಿತ ಸಮಿತಿಯ ನೇತೃತ್ವದಲ್ಲಿ ಮಧೂರು ಪಂಚಾಯತು ಕಚೇರಿಯ ಮುಂಭಾಗದಲ್ಲಿ ಶನಿವಾರ ರಸ್ತೆ ತಡೆ ನಡೆಸಲಾಯಿತು.
ಮಧೂರು ರಸ್ತೆಯಲ್ಲಿ ಮನ್ನಿಪ್ಪಾಡಿಯಿಂದ ಮಧೂರು ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ. ಇದನ್ನು ದುರಸ್ತಿಗೊಳಿಸಲು ಹಲವು ಬಾರಿ ಒತ್ತಾಯಿಸಿದರೂ ಯಾವುದೇ ಕ್ರಮ ಉಂಟಾಗದ ಹಿನ್ನೆಲೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು. ಗ್ರಾಮ ಪಂಚಾಯತು ಅಧ್ಯಕ್ಷೆ ಮಾಲತಿ ಸುರೇಶ್ ರಸ್ತೆ ತಡೆ ಉದ್ಘಾಟಿಸಿದರು. ಪಂಚಾಯತು ಉಪಾಧ್ಯಕ್ಷ ದಿವಾಕರ ಆಚಾರ್ಯ, ಮಾಜಿ ಅಧ್ಯಕ್ಷ ಮಾಧವ ಮಾಸ್ಟರ್, ಸುಜ್ಞಾನಿ ಶ್ಯಾನುಭೋಗ್, ಪ್ರಭಾಶಂಕರ ಮಾಸ್ಟರ್, ಮಜೀದ್ ಪಟ್ಲ, ಶ್ರೀಧರ, ಯೋಗೀಶ್ ಮಾತನಾಡಿದರು.