HEALTH TIPS

No title

              ಐಎಡಿಯನ್ನು ಇನ್ನಷ್ಟು ವಿಸ್ತರಿಸಲು ಸರಕಾರ ಚಿಂತನೆ=ಸಚಿವ ಇ.ಚಂದ್ರಶೇಖರನ್

    ಕಾಸರಗೋಡು: ಕಳೆದ ಹಲವಾರು ವರ್ಷಗಳಿಂದ ಫೈಲೇರಿಯಾ ಸಹಿತ ವಿವಿಧ ಚರ್ಮರೋಗಗಳಿಗೆ ಚಿಕಿತ್ಸೆ ನೀಡುತ್ತಿರುವ ಐಎಡಿ ಸಂಸ್ಥೆ ಜಗತ್ತಿನಾದ್ಯಂತ ಈ ಖಾಯಿಲೆಯಿಂದ ನರಳುತ್ತಿರುವವರಿಗೆ ಸಾಂತ್ವನದ ಸ್ಪರ್ಶ ನೀಡುತ್ತಿದೆ. ಆನೆಕಾಲು ರೋಗ ನಿಮರ್ೂಲನದ ಪ್ರಕ್ರಿಯೆಯಲ್ಲಿ ಐಎಡಿಯು ಸ್ತುತ್ಯರ್ಹ ಸಾಧನೆಯನ್ನು ಮಾಡಿದೆ. ಭಾರತದ ವಿವಿಧ ರಾಜ್ಯಗಳಿಂದಲೂ, ಹದಿನೈದಕ್ಕೂ ಹೆಚ್ಚು ರಾಷ್ಟ್ರಗಳಿಂದಲೂ ಫೈಲೇರಿಯಾ ಖಾಯಿಲೆಗೆ ವಿವಿಧ ಚಿಕಿತ್ಸೆಗಳನ್ನು ಮಾಡಿ ಮಂಕು ಕವಿದಿರುವ ಭವಿಷ್ಯದೊಂದಿಗೆ ಕಾಸರಗೋಡಿನ ನೆಲವನ್ನು ತಲಪುವ ರೋಗಿಗಳಿಗೆ ಆಶಾಕಿರಣವನ್ನು ನೀಡುವ ಐಎಡಿ ಕಾಸರಗೋಡಿನ ಹೆಮ್ಮೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟರು.
   ಉಳಿಯತ್ತಡ್ಕದ ಇನ್ಸ್ಟಿಟ್ಯೂಟ್ ಓಫ್ ಅಪ್ಲೈಡ್ ಡರ್ಮಟೋಲಜಿ (ಐಎಡಿ) ಸಂಸ್ಥೆಯಲ್ಲಿ ಕೇರಳ ಸರಕಾರ ಪ್ರಾಯೋಜಿತ ಸಿಂಫ್ (ಸೆಂಟರ್ ಫೋರ್ ಇಂಟೆಗ್ರೇಟೆಡ್ ಮೆಡಿಸಿನ್ ಏಂಡ್ ಪಬ್ಲಿಕ್ ಹೆಲ್ತ್) ಗೆ ಸಂಬಂಧಿತ ನೂತನ ಅನುಬಂಧ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
  ಕೇರಳದ ಇತರ ಕಡೆಗಳಲ್ಲೂ ಐಎಡಿಯ ಸೇವೆ ದೊರೆಯುವಂತಾಗಲು ಅಗತ್ಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಕೇರಳ ಸರಕಾರ ಚಿಂತಿಸಲಿದೆ. ಸಂಕೀರ್ಣವಾದ ಚರ್ಮ ರೋಗಗಳನ್ನು ಸಂಯೋಜಿತ ಚಿಕಿತ್ಸೆಯ ಮೂಲಕ ಗುಣಪಡಿಸುವ ಐಎಡಿಗೆ ಭಾರತ ಸರಕಾರವು ನೀಡುವ ಅನುದಾನಗಳನ್ನು ಇನ್ನಷ್ಟು ಸಮರ್ಪಕವಾಗಿ ರಾಜ್ಯ ಸರಕಾರದ ಮೂಲಕ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದ ಅವರು ಐಎಡಿಯ ಪ್ರಯತ್ನಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೇರಳ ಸರಕಾರವು ಈಗಾಗಲೇ ಆಥರ್ಿಕ ಅನುದಾನವನ್ನು ನೀಡಿದ್ದು ಈ ಸಂಪನ್ಮೂಲವನ್ನು ಉಪಯೋಗಿಸಿ ನಿಮರ್ಿಸಲಾಗಿರುವ ಅನುಬಂಧ ಕಟ್ಟಡವು ರೋಗಿಗಳ ಅನುಕೂಲಕ್ಕೆ ದೊರೆತು ನಾಡಿನ ಜನರಿಗೆ ಮತ್ತಷ್ಟು ಉಪಕಾರಿಯಾಗಲಿ ಎಂದರು. ಆಯುಷ್ ಇಲಾಖೆಯ ಸಹಕಾರದೊಂದಿಗೆ ಆಯುವರ್ೇದ, ಯೋಗ ಇತ್ಯಾದಿ ಚಿಕಿತ್ಸಾ ವಿಧಾನಗಳನ್ನು ಸಂಯೋಜಿಸಿದ ಐಎಡಿಯ ಚಿಕಿತ್ಸಾ ವಿಧಾನವನ್ನು ಜನಸಾಮಾನ್ಯರಿಗೂ ತಲಪುವಂತೆ ಮಾಡಲು ಪ್ರಯತ್ನಿಸಲಾಗುವುದು. ಐಎಡಿಯ ಅನುಕೂಲಕ್ಕಾಗಿ ಇನ್ನಷ್ಟು ಅನುದಾನಗಳು ಲಭ್ಯವಾಗುವಂತೆ ಮಾಡಲು ಪ್ರಯತ್ನಿಸುತ್ತೇನೆ  ಎಂದು ಅವರು ತಿಳಿಸಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡುತ್ತಾ ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇರುವುದರಿಂದ ಐಎಡಿಯು ಜನರ ಗಮನಕ್ಕೆ ಬಾರದೆ ಇರುವಂತಹ ಪರಿಸ್ಥಿತಿ ಉಂಟಾಗುತ್ತಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
   ಚಿಕಿತ್ಸಾ ಸೌಕರ್ಯಗಳು ಕಡಿಮೆಯಾಗಿದ್ದ ಕಾಲದಲ್ಲೂ ಮಂಜೇಶ್ವರದ ಗ್ರಾಮೀಣ ಪ್ರದೇಶದಲ್ಲಿ ದೀರ್ಘಕಾಲದಿಂದ ವೈದ್ಯರಾಗಿ ಸೇವೆ ಸಲ್ಲಿಸಿ ಖ್ಯಾತರಾದ ಸಾಹಿತಿ ಡಾ. ರಮಾನಂದ ಬನಾರಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆನೆಕಾಲು ರೋಗ ಮತ್ತು ಅದರ ಚಿಕಿತ್ಸೆಯ ಬಗ್ಗೆ ಸಾಹಿತಿ ಚಂದ್ರನ್ ಮುಟ್ಟತ್ ಬರೆದ ``ಕಾಲುಂ ಚಿರಗುಂ" ಎಂಬ ಮಲಯಾಳ ಪುಸ್ತಕವನ್ನು ಈ ಸಂದರ್ಭದಲ್ಲಿ ಕೇರಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಜಿ.ಗೋಪಕುಮಾರ್ ಬಿಡುಗಡೆಗೊಳಿಸಿ ಸಂಶೋಧನಾ ಕ್ಷೇತ್ರದಲ್ಲಿ ಐಎಡಿಯ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
   ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್, ಇಂಗ್ಲೆಂಡಿನ ಆಕ್ಸ್ಫೋಡರ್್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಟೆರೆನ್ಸ್ ಜೆ ರಯಾನ್ , ಕಲ್ಲಿಕೋಟೆಯಲ್ಲಿ ರೋಗಿಗಳ ಪರಸ್ಪರ ಸಂವಹನಕ್ಕಾಗಿ ರೂಪಿಸಿದ ಗುಂಪಿನ ಪ್ರತಿನಿಧಿ ಎ.ಕೆ.ಬಾಲನ್, ಐಎಡಿಯ ನಿದರ್ೇಶಕಿ ಡಾ. ಕೆ.ಎಸ್.ಪ್ರಸನ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
  ಐಎಡಿಯ ಅಧ್ಯಕ್ಷ, ನಿದರ್ೇಶಕ ಡಾ.ಎಸ್.ಆರ್.ನರಹರಿ ಸ್ವಾಗತಿಸಿ, ಐಎಡಿಯ ಹೋಮಿಯೋಪತಿ ವಿಭಾಗದ ತಜ್ಞ ವೈದ್ಯ ಡಾ.ಕೆ.ಎಸ್.ಬೋಸ್ ವಂದಿಸಿದರು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries