HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಪ್ಲಾಸ್ಟಿಕ್ನಿಂದ ಪರಿಸರ ನಾಶ : ಈಶ್ವರ ಶರ್ಮ ನಲ್ಕ
   ಪೆರ್ಲ: ಪ್ಲಾಸ್ಟಿಕ್ನ ಉಪಯೋಗದಿಂದ ಪರಿಸರನಾಶವಾಗುವುದರೊಂದಿಗೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದು ಶಿಕ್ಷಕ ಈಶ್ವರ ಶರ್ಮ ನಲ್ಕ ಅವರು ಹೇಳಿದರು.
   ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ವಿಶೇಷ ಶಿಬಿರದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಅದರ ದುಷ್ಪರಿಣಾಮಗಳು ಎಂಬ ವಿಷಯದ ಬಗೆಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
   ಪ್ಲಾಸ್ಟಿಕ್ಗೆ ಬದಲಾಗಿ ಪಯರ್ಾಯ ವ್ಯವಸ್ಥೆಗಳನ್ನು ಮಾಡಿ ಪ್ಲಾಸ್ಟಿಕ್ ನಿಷೇಧಿಸಿದರೆ ಮಾತ್ರ ಪರಿಣಾಮಕಾರಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ತಾಪಮಾನದ ಏರುವಿಕೆ ಮತ್ತು ಪ್ರಾಕೃತಿಕ ವೈಪರೀತ್ಯಗಳಿಗೆ ಪ್ಲಾಸ್ಟಿಕ್ನ ಅತಿಯಾದ ಬಳಕೆಯೇ ಕಾರಣ ಎಂದರು.
    ಡಾ.ಶ್ರೀರಾಮ ಭಟ್ ನಲ್ಕ ಅಧ್ಯಕ್ಷತೆಯನ್ನು ವಹಿಸಿ ವೈಜ್ಞಾನಿಕ ಸಂಶೋಧನೆಯ ಪರಿಣಾಮವಾಗಿ ಎಷ್ಟು ಪ್ರಗತಿ ಕಂಡಿದೆಯೋ ಅಷ್ಟೇ ದುಷ್ಪರಿಣಾಮಗಳಾಗಿವೆ ಎಂದರು. ಎನ್.ಎಸ್.ಎಸ್. ಯೋಜನಾಧಿಕಾರಿ ಶಂಕರ ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿಕ ಗಣಪತಿ ಭಟ್ ನಲ್ಕ ಉಪಸ್ಥಿತರಿದ್ದರು. ಉಪನ್ಯಾಸಕ ಕಿಶನ್ ಪಿ,  ಉಪನ್ಯಾಸಕಿ ಶ್ರುತಿ, ಕಾಲೇಜು ಸಿಬ್ಬಂದಿಗಳಾದ ರಾಧಾಕೃಷ್ಣ ವೈ.ಎಸ್, ಜಯಂತಿ, ಎನ್.ಎಸ್.ಎಸ್. ಕಾರ್ಯದಶರ್ಿಗಳಾದ ಪ್ರದೀಪ್, ನಯನ ಸಭೆಯಲ್ಲಿ ಭಾಗವಹಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries