HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ದಸರಾ ಸಿರಿ ಸ್ಪಧರ್ೆಯ ಫಲಿತಾಂಶ
   ಬದಿಯಡ್ಕ: ಇಲ್ಲಿನ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ದಸರಾ ಹಬ್ಬದ ಆಚರಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ದಸರಾ ಸಿರಿ -2017 ಸ್ಪಧರ್ೆಯ ಫಲಿತಾಂಶ ಪ್ರಕಟವಾಗಿದೆ.
   ಸಾರ್ವಜನಿಕ ವಿಭಾಗದ ಸ್ಪಧರ್ೆಯಲ್ಲಿ ಕಾಸರಗೋಡು ಕೋಟೆಕಣಿಯ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯು ಪ್ರಥಮ ಬಹುಮಾನ ಗಳಿಸಿಕೊಂಡಿದೆ. ಶಾಲಾ ವಿಭಾಗದಲ್ಲಿ ಬದಿಯಡ್ಕದ ಸರಕಾರಿ ಪ್ರೌಢಶಾಲೆಯು ಪ್ರಥಮ ಸ್ಥಾನ ಪಡಿದಿದೆ. ಬದಿಯಡ್ಕದ ನವಜೀವನ ಪ್ರೌಢಶಾಲೆ ಹಾಗೂ ಕುಂಬಳೆಯ ಹೋಲಿ ಫ್ಯಾಮಿಲಿ ಶಾಲೆಯು ಪ್ರೋತ್ಸಾಹಕ ಬಹುಮಾನ ಪಡೆದಿದೆ. ಈ ಯೋಜನೆಯ ತೀಪರ್ುಗಾರರಾಗಿ ಕಲಾವಿದ ಉದಯ ಕಂಬಾರು, ಪತ್ರಕರ್ತ ಸಾಹಿತಿ ವಿರಾಜ್ ಅಡೂರು ಹಾಗೂ ಛಾಯಾಚಿತ್ರಗ್ರಾಹಕ ಬಿ.ಬಾಲಸುಬ್ರಹ್ಮಣ್ಯ ಸಹಕರಿಸಿದ್ದರು. ಸ್ಪಧರ್ಾ ವಿಜೇತರಿಗೆ ಬಹುಮಾನಗಳನ್ನು 2018 ಜ.13ರಂದು ಕಿಳಿಂಗಾರು ಸಾಯಿಮಂದಿರದಲ್ಲಿ ನಡೆಯುವ ರಂಗಸಿರಿ ಸಂಭ್ರಮ -2018 ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಸಂಚಾಲಕ ಶ್ರೀಶಕುಮಾರ ಪಂಜಿತ್ತಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
   * ಇಂತಹಾ ಸ್ಪಧರ್ೆ ಅನುಕರಣೀಯ. ಬದಿಯಡ್ಕದ ಸರಕಾರಿ ಶಾಲೆಯ ದಸರಾ ಆಚರಣೆಯಲ್ಲಿ ಭಿನ್ನತೆ ಇತ್ತು. ಕಲಾಪ್ರಕಾರಗಳಲ್ಲಿ ವೈವಿಧ್ಯತೆ ಇತ್ತು. ವಿದ್ವಾಂಸರು ಭಾಗಿಯಾಗಿದ್ದರು. ಹಬ್ಬಾಚರಣೆಯಲ್ಲಿ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಡುವ ಬದಲು ಕಲಾ ಪ್ರಕಾರಕ್ಕೆ ಪ್ರಾಮುಖ್ಯತೆ ಕೊಟ್ಟರೆ ಚೆನ್ನಾಗಿತ್ತು. ಕಲೆಯ ಜತೆಗೆ ಸಾಹಿತ್ಯವೂ ಸ್ಪುರಿಸುತ್ತದೆ. ಮನರಂಜನೆ ನೀಡುತ್ತದೆ.
- ಉದಯ ಕಂಬಾರ್, ಕಲಾವಿದರು-ತೀಪರ್ುಗಾರರಲ್ಲಿ ಓರ್ವರು.

* ದಸರಾ ಹಬ್ಬದ ಮೂಲಕ ಎಲೆಮರೆಯ ಕಲಾವಿದರನ್ನು ಗುರುತಿಸುವುದು ಮುಖ್ಯ. ಮಕ್ಕಳಲ್ಲಿ ಕಲಾ ಪ್ರಕಾರಗಳ ಆಸಕ್ತಿ ಅರಳಿಸುವುದು, ಶಾರದಾಪೂಜೆ, ಅಕ್ಷರಾಭ್ಯಾಸದಂತಹ ಸನಾತನ ಆಚರಣೆಗಳ ಪರಿಚಯ ಮಾಡಿಸುವುದು ಅಗತ್ಯ. ಶಾಲೆಗಳಲ್ಲಿ ಇಂತಹಾ ಹಬ್ಬದ ಆಚರಣೆಯಿಂದ ಈ ಸಂಪ್ರದಾಯ ಮುಂದಿನ ಜನಾಂಗಕ್ಕೆ ದಾಟಿಸಿದಂತೆ ಆಗುತ್ತದೆ. ಹೊರಗಿನ ಕಲಾವಿದರು ಬರುವುದಕ್ಕಿಂತ ಶಾಲೆಯ ಪ್ರತಿಭೆಗಳ ಅನ್ವೇಷಣೆ ನಡೆದರೆ ಉತ್ತಮ.
- ವಿರಾಜ್ ಅಡೂರು, ಸಾಹಿತಿ

* ಗಡಿನಾಡಿನಲ್ಲಿ ಕಲೆಗಳ ಪ್ರಚಾರ ಶ್ಲಾಘನೀಯ. ಶಾಲೆಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಹಬ್ಬಗಳ ಆಚರಣೆಯಿಂದ ಸಾಧ್ಯ. ಶಾಲೆಯಲ್ಲಿ ಕಲಾರಾಧನೆ ಮಾಡುವುದರಿಂದ ಕಲೆಯ ಬಗ್ಗೆ ಮಕ್ಕಳಲ್ಲಿ ದೈವಿಕ ಭಾವನೆ ಮೂಡುತ್ತದೆ.
- ಬಿ ಬಾಲಸುಬ್ರಹ್ಮಣ್ಯ, ಛಾಯಾಗ್ರಾಹಕರು
         

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries