HEALTH TIPS

No title

                ಕಳ್ಳಿಗೆಯವರಂತಹ ತ್ಯಾಗಿಗಳಿಂದಾಗಿ ಕಾಸರಗೋಡಿನಲ್ಲಿ ಕನ್ನಡ ಉಸಿರಾಡುತ್ತಿದೆ : ಎನ್.ಕೆ.ಮೋಹನ್ದಾಸ್
    ಕಾಸರಗೋಡು: ಕಾಸರಗೋಡಿನ ಪ್ರತಿಯೊಬ್ಬ ಕನ್ನಡಿಗನೂ ಇಂದು ಅನುಭವಿಸುತ್ತಿರುವ ಅನೇಕ ಸವಲತ್ತುಗಳು ಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಯು.ಪಿ.ಕುಣಿಕುಳ್ಳಾಯರಂತಹ ಮಹಾತ್ಯಾಗಿಗಳ ವರದಾನ. ಅವರ ನಿಸ್ವಾರ್ಥ ಸೇವೆಯಿಂದಾಗಿ ಇಂದಿಗೂ ಕಾಸರಗೋಡಿನಲ್ಲಿ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಜೀವಂತವಾಗಿದೆ. ಅವರ ಬದುಕಿನ ಜೀವನಾದರ್ಶಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ನ್ಯಾಯವಾದಿ ಎನ್.ಕೆ. ಮೋಹನ್ ದಾಸ್ ಅಭಿಪ್ರಾಯಪಟ್ಟರು.
    ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದ ವತಿಯಿಂದ ನಡೆದ ಡಾ.ಯು.ಶಂಕರನಾರಾಯಣ ಭಟ್ ಪ್ರಾಯೋಜಿತ ಕಳ್ಳಿಗೆ ಮಹಾಬಲ ಭಂಡಾರಿ ದತ್ತಿನಿಧಿ ಕಾರ್ಯಕ್ರಮದಲ್ಲಿ ಅವರು `ಕನ್ನಡಿಗರ ಹಕ್ಕುಗಳು ಮತ್ತು ಕಳ್ಳಿಗೆ ಮಹಾಬಲ ಭಂಡಾರಿ' ಎಂಬ ವಿಷಯದಲ್ಲಿ ಮಾತನಾಡಿದರು.
   ಶಾಸಕರಾಗಿ ಕನ್ನಡಿಗರನ್ನು ಪ್ರತಿನಿಧಿಸಿದ ಕಳ್ಳಿಗೆಯವರು ಕೇರಳದ ವಿಧಾನಸಭೆಯಲ್ಲಿ ಇಲ್ಲಿನ ಪ್ರತಿಯೊಂದು ಸಮಸ್ಯೆಗಳನ್ನು ಎತ್ತಿ ಹಿಡಿದರು. ಕಳ್ಳಿಗೆಯವರು ಕಾಸರಗೋಡಿನ ಬಹುಸಂಖ್ಯಾಕ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿದರು. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಅನೇಕ ಸವಲತ್ತುಗಳನ್ನು ಮೀಸಲಾತಿಗಳನ್ನು ಕಾಸರಗೋಡಿನ ಕನ್ನಡಿಗರಿಗಾಗಿ ದೊರಕಿಸಿಕೊಟ್ಟರು. ಇದಕ್ಕಾಗಿ ತಮ್ಮ ಕೌಟುಂಬಿಕ ಸುಖಸೌಖ್ಯಗಳನ್ನು ಬದಿಗಿರಿಸಿದರು. ಕೇರಳ ರಾಜ್ಯದ ಭಾಷಾ ಅಲ್ಪಸಂಖ್ಯಾತರೆಂದು ಕಾಸರಗೋಡಿನ ಕನ್ನಡಿಗರನ್ನು ಪರಿಗಣಿಸಬೇಕಾದ ಅವಶ್ಯಕತೆಯನ್ನು ಸರಕಾರದ ಗಮನಕ್ಕೆ ತಂದ ಅವರು ಹಲವು ಕನ್ನಡ ಪರ ಆದೇಶಗಳನ್ನು ಸರಕಾರ ಹೊರಡಿಸುವಂತೆ ಮಾಡಿಸಿದರು. ಕನ್ನಡಿಗ ಶ್ರೀಸಾಮಾನ್ಯರ ಸಮಸ್ಯೆ, ಕನ್ನಡ ರೈತರ  ಸಮಸ್ಯೆಗಳು, ಅಧ್ಯಾಪಕರ ವಿದ್ಯಾಥರ್ಿಗಳ  ಸಮಸ್ಯೆಗಳನ್ನು ಸರಕಾರದ ಮುಂದಿಟ್ಟು ಶಾಶ್ವತ ಪರಿಹಾರ ಮಾರ್ಗವನ್ನು ರೂಪಿಸಿದರು. ಆದರೆ ಇಂದು ಕಳ್ಳಿಗೆಯವರಂತಹ ನಿಷ್ಠಾವಂತ ಶಾಸಕರ ಕೊರತೆಯಿಂದ ಕನ್ನಡಿಗರು ತಮ್ಮ ಸಂವಿಧಾನ ಬದ್ಧ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಅನೇಕ ಕನ್ನಡಿಗರು ತಮಗಿರುವ ಸವಲತ್ತುಗಳೇನೆಂದು ತಿಳಿದೂ ತಿಳಿಯದಂತಿರುವುದು ಇಂದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕಳ್ಳಿಗೆಯವರ ತ್ಯಾಗವನ್ನು ಅವರ ಸಾಮಾಜಿಕ ಕಳಕಳಿಯನ್ನು ಅಥರ್ೈಸಿಕೊಳ್ಳಬೇಕು. ಸದಾ ಪೂಜನೀಯರಾದ ಕಳ್ಳಿಗೆಯವರು ನಮ್ಮ ಬದುಕನ್ನು ರೂಪಿಸಿದವರೆಂಬ ವಿಷಯವನ್ನು ಮರೆಯಬಾರದು. ಕಾಸರಗೋಡಿನ ಕನ್ನಡಿಗರಿಗಾಗಿ ತಮ್ಮ ಜೀವಮಾನವನ್ನೆ ಮುಡಿಪಾಗಿಟ್ಟ ಭಂಡಾರಿಯವರನ್ನು ಸ್ಮರಿಸುವ ಮತ್ತು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಮನೋಭಾವ ಇಲ್ಲಿನ ಪ್ರತಿಯೊಬ್ಬ ಕನ್ನಡಿಗನಲ್ಲೂ ಉಂಟಾಗಬೇಕು. ಅವರ ಸ್ಮರಣಾರ್ಥ ವಿಶೇಷ ಯೋಜನೆಯೊಂದನ್ನು ರೂಪಿಸಿ, ಅವರ ಹೆಸರು ಶಾಶ್ವತವಾಗಿ ಉಳಿಯುವ ಪ್ರಯತ್ನ  ಕಾಸರಗೋಡಿನಲ್ಲಿ ನಡೆಯಲೇ ಬೇಕಾಗಿದೆ ಎಂದು ಎನ್.ಕೆ. ಮೋಹನ್ದಾಸ್ ಹೇಳಿದರು.
   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್. ಅವರು ಭಾಷೆ ಸಾಹಿತ್ಯದ ಮೇಲಿನ ಅಭಿಮಾನ ಹೇಗಿರಬೇಕೆಂಬುದನ್ನು ಕಳ್ಳಿಗೆಯವರು ತಮ್ಮ ಜೀವನದ ನಡೆ ನುಡಿಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಅಂತಹ ಧೈರ್ಯಶಾಲಿಗಳ ಕೊರತೆಯಿಂದಾಗಿ ಇಂದು ಕನ್ನಡಿಗರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಕಳ್ಳಿಗೆಯವರನ್ನು ತಿಳಿದುಕೊಳ್ಳುವ ಮನಸ್ಸು ಯುವ ತಲೆಮಾರಿಗೆ ಉಂಟಾಗಬೇಕು ಎಂದರು.
    ಸಮಾರಂಭದಲ್ಲಿ ರಾಷ್ಟ್ರಕವಿ ಜಿ.ಎಸ್.ಎಸ್. ಸ್ಮಾರಕದತ್ತಿ ನಿಧಿ ವಿದ್ಯಾಥರ್ಿವೇತನ, ಭುವನೇಶ್ವರಿ ದತ್ತಿನಿಧಿ ವಿದ್ಯಾಥರ್ಿವೇತನ, ದೇವಮ್ಮ ದತ್ತಿ ನಿಧಿ ವಿದ್ಯಾಥರ್ಿವೇತನ, ಡಾ.ಪ್ರಮೀಳ ಮಾಧವ ದತ್ತಿನಿಧಿ ವಿದ್ಯಾಥರ್ಿ ವೇತನವನ್ನು ವಿತರಿಸಲಾಯಿತು. ಮೇಘಶ್ರೀ ಪಿ.ಎ, ಸ್ವಾತಿ ವಿ.ಎಂ, ರಾಜಾರಾಮ ಪಿ, ಸುಶ್ಮಿತಾ ಶೆಟ್ಟಿ, ಅಭಿಷೇಕ್ ಎ.ಬಿ, ಸುಶ್ಮಿತಾ ಆರ್. ಅವರಿಗೆ ವಿದ್ಯಾಥರ್ಿ ವೇತನವನ್ನು ವಿರಿಸಲಾಯಿತು. ವಿಭಾಗದ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಸ್ವಾಗತಿಸಿ, ಪ್ರಾಧ್ಯಾಪಕ ಡಾ.ರಾಧಾಕೃಷ್ಣ  ಬೆಳ್ಳೂರು ವಂದಿಸಿದರು. ಉಪನ್ಯಾಸಕಿ ಬಬಿತಾ ಎ. ಕಾರ್ಯಕ್ರಮ ನಿರೂಪಿಸಿದರು. ಪವಿತ್ರ ಡಿ.ಆರ್. ಪ್ರಾರ್ಥನೆ ಹಾಡಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries