HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಇದೇ ಮೊದಲ ಬಾರಿಗೆ 'ಸುಪ್ರೀಂ' ನ್ಯಾಯಮೂತರ್ಿಗಳಿಂದ ಸುದ್ದಿಗೋಷ್ಠಿ: ನ್ಯಾಯಾಂಗ ವ್ಯವಸ್ಥೆ ಕುರಿತು ಅಸಮಾಧಾನ
                ಮುಕ್ತ ನ್ಯಾಯಾಂಗ ವ್ಯವಸ್ಥೆ ಇಲ್ಲದೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ: ನ್ಯಾಯಮೂತರ್ಿ ಚಲ್ಮೇಶರ್
      ನವದೆಹಲಿ: ಭಾರತದ ಇತಿಹಾಸದಲ್ಲಿದೇ ಇದೇ ಮೊದಲ ಬಾರಿಗೆ 'ಸುಪ್ರೀಂಕೋಟರ್್' ನ್ಯಾಯಮೂತರ್ಿಗಳು ಸುದ್ದಿಗೋಷ್ಟಿಯನ್ನು ನಡೆಸಿದ್ದು, ನ್ಯಾಯಾಂಗ ವ್ಯವಸ್ಥೆ ಕುರಿತು ಅಸಮಾಧಾನವನ್ನು ಹೊರಹಾಕಿದ್ದಾರೆ.
     ನ್ಯಾಯಮೂತರ್ಿ ಚೆಲ್ಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ್ದಾರೆ.
ಪತ್ರಿಕಾಗೋಷ್ಟಿ ನಡೆಸುವ ನಿಧರ್ಾರವನ್ನು ನ್ಯಾಯಮೂತರ್ಿ ಚೆಲ್ಮೇಶ್ವರ್ ಅವರು ತೆಗೆದುಕೊಂಡಿದ್ದು, ತಮ್ಮ ನಿವಾಸದ ಆವರಣದಲ್ಲಿಯೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನ್ಯಾಯಾಂಗ ವ್ಯವಸ್ಥೆ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗ ವ್ಯವಸ್ಥೆ ಕುರಿತು ಸಿಜೆಐ ದೀಪಕ್ ಮಿಶ್ರಾ ಅವರಿಗೆ ಬರೆಯಲಾಗಿರುವ ಪತ್ರಕ್ಕೆ ನಾಲ್ವರು ನ್ಯಾಯಾಧೀಶರು ಸಹಿ ಮಾಡಿದ್ದು, ಪತ್ರದಲ್ಲಿರುವ ಸಾರಾಂಶವನ್ನು ಇಂದು ನ್ಯಾಯಾಧೀಶರು ಬಹಿರಂಗಪಡಿಸಿದ್ದಾರೆ.
    ನ್ಯಾಯಾಂಗ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳನ್ನು ಹಿಡಿದು ಸಿಜೆಐಗಳ ಮುಂದೆ ಹೋಗಿದ್ದೆವನು. ಆದರೆ, ಅದರಿಂದ ಯಾವುದೇ ಪ್ರಯೋಜನಗಳಾಗಲಿಲ್ಲ. ಸಿಜೆಐಗೆ ಮನವರಿಗೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ನಮಗೆ ಬೇರಾವುದೇ ದಾರಿಯಿಲ್ಲದೆ, ದೇಶದ ಜನತೆಯ ಮುಂದೆ ಬಂದಿದ್ದೇವೆಂದು ನ್ಯಾಯಮೂತರ್ಿ ಚಲ್ಮೇಶ್ವರ್ ಅವರು ಹೇಳಿದ್ದಾರೆ.
ಯಾವುದೇ ಒತ್ತಡಗಳಿಲ್ಲದೆ ನಾವು ಸುದ್ದಿಗೋಷ್ಠಿ ನಡೆಸುವ ನಿಧರ್ಾರವನ್ನು ಕೈಗೊಂಡಿದ್ದೇವೆ. ಸುಪ್ರೀಂಕೋಟರ್್'ನಲ್ಲಿ ಆಡಳಿತ ಸರಿಯಿಲ್ಲ. ಕೆಲವು ಬಾರಿ ಸುಪ್ರೀಂಕೋಟರ್್ ನಲ್ಲಿ ಬಯಸದ ಘಟನೆಗಳು ನಡೆಯುತ್ತವೆ. ಅಂತಹ ಘಟನೆಗಳ ಬಗ್ಗೆ ಸಿಜೆಐ ಅವರಿಗೆ ಪತ್ರ ಬರೆದು ತಿಳಿಸಿದ್ದೇವೆ. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. 20 ವರ್ಷದ ನಂತರ ನಾವು ನಾಲ್ವರು ನ್ಯಾಯಾಧೀಶರು ನಮ್ಮ ಆತ್ಮ ಮಾರಿಕೊಂಡಿದ್ದೇವೆಂದು ಯಾರೂ ಹೇಳಬಾರದು. ಹೀಗಾಗಿ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಅನಿವಾರ್ಯವಾಗಿ ನಾವು ಸುದ್ದಿಗೋಷ್ಠಿ ನಡೆಸುತ್ತಿದ್ದೇವೆಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries