HEALTH TIPS

No title

               2022ರ ವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳಿಸಲು ಸಕರ್ಾರ ಬದ್ಧ: ರಾಷ್ಟ್ರಪತಿ ರಾಮನಾಥ್ ಕೋವಿಂದ್

    ನವದೆಹಲಿ: ಆಥರ್ಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಸ್ಥಿರವಾಗಿರುವುದಿಲ್ಲ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳುತ್ತಿದ್ದರು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ ಕೇಂದ್ರದ ಲಕ್ಷ್ಯವನ್ನು ಸೂಕ್ಷ್ಯವಾಗಿ ಬಿಚ್ಚಿಟ್ಟರು.
   2018ನೇ ಸಾಲಿನ ಮುಂಗಡ ಪತ್ರ ಅಧಿವೇಶನ ಆರಂಭದ ದಿನವಾದ ಸೋಮವಾರ ಸಂಸತ್ತಿನ  ಉಭಯ ಸದನಗಳನ್ನುದ್ದೇಶಿಸಿ ಭಾಷಣ ಆರಂಭಿಸಿದ ಅವರು, 2018ನೇ ವರ್ಷ ನವ ಭಾರತದ ಉದಯಕ್ಕೆ ಕನಸು ಕಾಣುವ ವರ್ಷವಾಗಿದೆ. 2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಸಕರ್ಾರ ಬದ್ಧವಾಗಿದೆ. ಸಮಾಜದ ದುರ್ಬಲ ವರ್ಗದವರ ಏಳಿಗೆಗಾಗಿ ಸಕರ್ಾರ ಹಗಲಿರುಳು ಶ್ರಮಿಸುತ್ತಿದೆ ಎಂದು ಹೇಳಿದರು.
   ಗ್ರಾಮೀಣ ಭಾರತ, ರೈತರು, ದಲಿತರು, ಬುಡಕಟ್ಟು ಜನಾಂಗದವರು ಮತ್ತು ಕಾಮರ್ಿಕರ ಹಿತದೃಷ್ಟಿಗೆ ನಾವು ಯೋಚನೆ ಮಾಡಬೇಕಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
ತ್ರಿವಳಿ ತಲಾಖ್ ಮಸೂದೆ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅನುಮೋದನೆಯಾಗುವ ಆಶಾವಾದ ಹೊಂದಿದ್ದೇನೆ. ಈ ಮಸೂದೆ ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಮುಸಲ್ಮಾನ ಮಹಿಳೆಯರು ಭೀತಿಯಿಲ್ಲದೆ ಗೌರವಯುತವಾಗಿ ಜೀವನ ನಡೆಸಬಹುದು. ಮಹಿಳಾ ನೌಕರರಿಗೆ 26 ವಾರಗಳ ಹೆರಿಗೆ ವೇತನ ಸಹಿತ ರಜೆ ಮಸೂದೆಯನ್ನು ಸಕರ್ಾರ ಅನುಮೋದಿಸಿರುವುದು ಶ್ಲಾಘನೀಯ ಎಂದು ರಾಷ್ಟ್ರಪತಿ ಹೇಳಿದರು.
   ಭವಿಷ್ಯದ ರಾಷ್ಟ್ರ ನಿಮರ್ಾಣದಲ್ಲಿ ಶಿಕ್ಷಣ ಅಡಿಪಾಯವಾಗಿದ್ದು, ಶಾಲೆ ಮತ್ತು ಉನ್ನತ ವ್ಯಾಸಂಗ ವ್ಯವಸ್ಥೆಯನ್ನು ಬಲಪಡಿಸಿ ಆಧುನೀಕರಣಗೊಳಿಸಲು ಸಕರ್ಾರ ಬದ್ಧವಾಗಿದೆ. ಹಳ್ಳಿಗಳಿಗೆ ಅಂತಜರ್ಾಲದ ವ್ಯವಸ್ಥೆ ನೀಡಲು ಸಕರ್ಾರ ಯತ್ನಿಸುತ್ತಿದ್ದು, ಈಗಾಗಲೇ 2.5 ಲಕ್ಷ ಪಂಚಾಯತ್ ಗಳಲ್ಲಿ ಇಂಟನರ್ೆಟ್ ಸೌಲಭ್ಯಗಳಿವೆ ಎಂದು ರಾಷ್ಟ್ರಪತಿ ವಿವರಿಸಿದರು.
ಮಧ್ಯವತರ್ಿಗಳ ಹಾವಳಿಯನ್ನು ತಪ್ಪಿಸಿ ಫಲಾನುಭವಿಗಳಿಗೆ ಸಕರ್ಾರದ ಯೋಜನೆಗಳ ಪ್ರಯೋಜನ ದೊರಕಲು ಆಧಾರ್ ಸಂಖ್ಯೆ ಸಹಾಯವಾಗುತ್ತದೆ.
ಮೊನ್ನೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಆಸಿಯಾನ್ ರಾಷ್ಟ್ರಗಳ 10 ನಾಯಕರು ಅತಿಥಿಗಳಾಗಿ ಭಾಗವಹಿಸಿರುವುದು ಭಾರತದ ವಸುಧೈವ ಕುಟುಂಬಕಂ ತತ್ವವನ್ನು ಜಗತ್ತಿಗೆ ಸಾರುತ್ತದೆ ಎಂದು ರಾಷ್ಟ್ರಪತಿ ಹರ್ಷ ವ್ಯಕ್ತಪಡಿಸಿದರು.
  ಸೋಮವಾರ ಸಕರ್ಾರದ 400ಕ್ಕೂ ಹೆಚ್ಚು ಯೋಜನೆಗಳಲ್ಲಿ ಡಿಜಿಟಲ್ ಪಾವತಿ ವಿಧಾನವನ್ನು ಜಾರಿಗೆ ತರಲಾಗಿದೆ. ಭೀಮ್ ಆಪ್ ಡಿಜಿಟಲ್ ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚೆಗೆ ಆರಂಭಗೊಂಡ ಉಮಂಗ್ ಆಪ್ ಮೂಲಕ ಮೊಬೈಲ್ ಫೋನ್ ಗಳಲ್ಲಿ 100ಕ್ಕೂ ಹೆಚ್ಚು ಸಾರ್ವಜನಿಕ ಸೇವೆಗಳು ದೊರಕುತ್ತವೆ ಎಂದು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
ಕಾಮರ್ಿಕರ ಕನಿಷ್ಟ ವೇತನವನ್ನು ಕೇಂದ್ರ ಸಕರ್ಾರ ಶೇಕಡಾ 40ರಷ್ಟು ಏರಿಕೆ ಮಾಡಿದ್ದು, ಕಾಮರ್ಿಕ ಕಾನೂನನ್ನು ಅನುಷ್ಠಾನಕ್ಕೆ ತರಲಾಗಿದ್ದು ಶ್ರಮ ಸುವಿಧ ಪೋರ್ಟಲ್ ಎಂಬ ಆನ್ ಲೈನ್ ಸೇವೆಯನ್ನು ಸಕರ್ಾರ ಆರಂಭಿಸಿದೆ. ಮಕ್ಕಳಲ್ಲಿ ಸೃಜನಶೀಲತೆ ಮತ್ತು ಸ್ವಂತಿಕೆಯನ್ನು ಬೆಳೆಸಲು ಸಕರ್ಾರ 2,400 ಅಟಲ್ ಟಿಂಕರಿಂಗ್ ಲ್ಯಾಬ್ಸ್ ಎಂಬ ಯೋಜನೆಯನ್ನು ಅಟಲ್ ಇನ್ನೊವೇಶನ್ ಮಿಷನ್ ನಡಿ ತಂದಿದೆ. ದೀನದಯಾಳ್ ಅಮೃತ ಯೋಜನೆಯಡಿ  ಜೀವ ಉಳಿಕೆಯ ಔಷಧಗಳು ಮತ್ತು ಆಪರೇಷನ್ ಸಾಧನಗಳನ್ನು 111 ಕೇಂದ್ರಗಳಲ್ಲಿ ಶೇಕಡಾ 60ರಿಂದ 90ರಷ್ಟು ಕಡಿತ ದರದಲ್ಲಿ ನೀಡಲಾಗುತ್ತಿದೆ. ಇದರಿಂದ ಬಡವರಿಗೆ ಅನುಕೂಲವಾಗುತ್ತಿದೆ ಎಂದರು.
   ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಮೂಲಕ ಬಡವರಿಗೆ ಅಗ್ಗದ ದರದಲ್ಲಿ ಔಷಧಗಳನ್ನು ಒದಗಿಸಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ನೀತಿಯಡಿ ಬಡ ಮತ್ತು ಮಧ್ಯಮ ವರ್ಗದವರಿಗೆ ಉತ್ತಮ ಆರೋಗ್ಯ ಸೇವೆ ಸಿಗಲು ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಸಕರ್ಾರ ಹಮ್ಮಿಕೊಂಡಿದೆ.ಸಾಂಪ್ರದಾಯಿಕ ಕ್ರಮಗಳಾದ ಯೋಗ, ಆಯುವರ್ೇದಗಳ ಮೂಲಕ ಜನರಿಗೆ ಆರೋಗ್ಯ ಸೇವೆ ನೀಡಲು ರಾಷ್ಟ್ರೀಯ ಆಯುಷ್ ಮಿಷನ್ ಜಾರಿಗೆ ತರಲಾಗಿದೆ ಎಂದು ರಾಷ್ಟ್ರಪತಿ ಭಾಷಣದಲ್ಲಿ ಪ್ರಸ್ತಾಪಿಸಿದರು.
ದೇಶದ ಯುವಜನತೆಯ ಉದ್ದಾರಕ್ಕಾಗಿ ಸ್ಟಾಟರ್್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಕೌಶಲಾಭಿವೃದ್ಧಿ ಮತ್ತು ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಸ್ವ ಉದ್ಯೋಗ ಮಾಡುವವರಿಗೆ ತಮ್ಮ ಕನಸುಗಳನ್ನು ಈಡೇರಿಸಲು ಇದೊಂದು ವೇದಿಕೆಯಾಗಿದೆ ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries