ಕುರುಡಪದವು ಶಾಲಾ ವಾಷರ್ಿಕೋತ್ಸವ, ಸಮ್ಮಾನ ಸಮಾರಂಭ
ಉಪ್ಪಳ: ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲಾ ವಾಷರ್ಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದಲ್ಲಿ ಪೈವಳಿಕೆ ಗ್ರಾಮ ಪಂಚಾಯತು ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಮಾತನಾಡಿ, ಗಡಿನಾಡು ಕನ್ನಡ ಸಂಸ್ಕೃತಿ ಇನ್ನೂ ಜೀವಂತವಿರುವ ಪ್ರದೇಶ. ಇಂತಹ ಗ್ರಾಮೀಣ ಶಾಲೆಗಳ ಅಗತ್ಯ ಇಂದು ಅನಿವಾರ್ಯ. ಅನೇಕ ಧರ್ಮದವರಿಗೆ ಆಶ್ರಯ ನೀಡಿದ್ದ ಭಾರತದಲ್ಲಿ ಭಾರತೀಯತೆಯನ್ನು ಅವಗಣಿಸಬಾರದು ಎಂದರು.
ಮತ್ತೋರ್ವ ಅತಿಥಿ ಡಾ.ಎಂ.ರಾಮ ಮಾತನಾಡಿ ಮಾತೃ ಭಾಷಾ ಶಿಕ್ಷಣವು ಸೃಜನಶೀಲತೆಗೆ ಪೂರಕವೆಂದರು. ಸಾಹಿತಿ ಮಲಾರ್ ಜಯರಾಮ ರೈ ಉಪಸ್ಥಿತರಿದ್ದು ಮಾತನಾಡಿ, ಇಂತಹ ಶಾಲೆಗಳು ಊರಿಗೇ ವಿದ್ಯೆಯ ಎ.ಟಿ.ಎಂ. ಇದ್ದಂತೆ ಎಂದು ಅರ್ಥಪೂರ್ಣವಾಗಿ ಹೇಳಿದರು. ಈ ಸಂದರ್ಭದಲ್ಲಿ ನಿವೃತ್ತರಾಗುತ್ತಿರುವ ಮುಖ್ಯೋಪಾಧ್ಯಾಯ ರವಿನಾರಾಯಣ ಸೊಡಂಕೂರು ಅವರನ್ನು ಸಮ್ಮಾನಿಸಲಾಯಿತು. ಅವರು ಮಾತನಾಡುತ್ತಾ ವಿದ್ಯಾಲಯದ ಒಳಿತಿಗಾಗಿ `ಜ್ಞಾನಗಂಗಾ, ಅಕ್ಷಯ' ಯೋಜನೆಗಳನ್ನು ಹುಟ್ಟು ಹಾಕಿದುದನ್ನು ಉಲ್ಲೇಖಿಸಿದರು.
ಅಧ್ಯಾಪಕ ಶ್ಯಾಮ ಭಟ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಭಟ್, ಗ್ರಾಮ ಪಂಚಾಯತು ಸದಸ್ಯರಾದ ತಾರಾ ವಿ.ಶೆಟ್ಟಿ, ಚನಿಯ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್, ಡಾ.ಮುರಳೀಧರ ಶೆಟ್ಟಿ ಶುಭಹಾರೈಸಿದರು.
ಮಾತೃಸಂಘದ ಅಧ್ಯಕ್ಷೆ ರೇವತಿ ಪಾರೆಕೋಡಿ, ಅಂದುಂಞಿ ಹಾಜಿ ಉಪಸ್ಥಿತರಿದ್ದರು. ಬೆಳಗ್ಗೆ ಶಾಲಾ ಪ್ರಬಂಧಕ ವೆಂಕಟರಮಣ ಶಾಸ್ತ್ರಿ ಧ್ವಜಾರೋಹಣಗೈದರು. ಶಿಕ್ಷಣ ಸಂಸ್ಥೆಗೆ ನೆರವಾದವರಿಗೆ ಸ್ಮರಣಿಕೆ ನೀಡಲಾಯಿತು. ಗಾಯತ್ರಿ ಟೀಚರ್ ವರದಿ ವಾಚಿಸಿದರು. ರಾಮಕೃಷ್ಣ ಪ್ರಸಾದ್ ವಂದಿಸಿದರು. ಗೀತಾ ಬಾಲಿ, ಶ್ರೀಪತಿ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಥರ್ಿಗಳಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.