ಎಲ್ಲದಕ್ಕೂ ಪಾಕಿಸ್ತಾನ ಕಡೆ 'ಬೆರಳು-ತೋರಿಸಬೇಡಿ': ಅಮೆರಿಕಾಗೆ ಚೀನಾ ವಿರೋಧ
ಬೀಜಿಂಗ್: ಚೀನಾ ಮತ್ತೆ ತನ್ನ ಸಾರ್ವಕಾಲಿಕ ಸ್ನೇಹಿತ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು, ಎಲ್ಲದಕ್ಕೂ ಪಾಕ್ ಕಡೆ 'ಬೆರಳು-ತೋರಿಸಬೇಡಿ ಮತ್ತು ಭಯೋತ್ಪಾದನೆಯೊಂದಿಗೆ ಲಿಂಕ್ ಮಾಡಬೇಡಿ ಎಂದು ಅಮೆರಿಕಕ್ಕೆ ವಿರೋಧ ವ್ಯಕ್ತಪಡಿಸಿದೆ.
ಕಳೆದ ವಾರ ತನ್ನ ನೆಲದಲ್ಲಿನ ಭಯೋತ್ಪಾದನೆ ಮಟ್ಟಹಾಕುವಂತೆ ಅಮೆರಿಕ ಪಾಕಿಸ್ತಾನಕ್ಕೆ ಕಟ್ಟು ನಿಟ್ಟಿನ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪಾಕ್ ಬೆಂಬಲಕ್ಕೆ ನಿಂತಿರುವ ಚೀನಾ, ಉಗ್ರರನ್ನು ಮಟ್ಟ ಹಾಕುವ ಜವಾಬ್ದಾರಿ ಕೇವಲ ಒಂದು ರಾಷ್ಟ್ರ ಸೀಮಿತಿಗೊಳಿಸುವುದು ಸರಿಯಲ್ಲ ಎಂದಿದೆ.
ಯಾವುದೇ ಒಂದು ದೇಶವನ್ನು ಭಯೋತ್ಪಾದನೆಗೆ ಥಳಕು ಹಾಕುವುದಕ್ಕೆ ಚೀನಾ ಯಾವತ್ತೂ ವಿರೋಧ ವ್ಯಕ್ತಪಡಿಸಿದೆ ಮತ್ತು ಉಗ್ರ ನಿಗ್ರಹ ಜವಾಬ್ದಾರಿಯನ್ನು ಒಂದು ನಿಧರ್ಿಷ್ಟ ದೇಶದ ಮೇಲೆ ಹೇರುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ಅವರು ಹೇಳಿದ್ದಾರೆ.
ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪಾಕ್ ಮನವೊಲಿಸಲು ನೀವು ಯತ್ನಿಸುತ್ತೀರಾ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾಂಗ್, ನಾವು ಹಲವು ಬಾರಿ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ್ದೇವೆ. ಜಾಗತಿಕ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನ ತನ್ನ ಕೊಡುಗೆ ನೀಡಿದೆ ಎಂದರು.
ಒಬ್ಬರು ಮತ್ತೊಬ್ಬರ ಕಡೆ ಬೆರಳು ತೋರಿಸುವ ಬದಲು ಪರಸ್ಪರ ಗೌರವದೊಂದಿಗೆ ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲಾ ದೇಶಗಳು ಸಹಕಾರ ನೀಡಬೇಕು ಎಂದು ಕಾಂಗ್ ಹೇಳಿದ್ದಾರೆ.