HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಆಧಾರ್ ಮಾಹಿತಿ ಸೋರಿಕೆ; ಎಫ್ ಐಆರ್ ನನ್ನ 'ಬಹುದೊಡ್ಡ ಗಳಿಕೆ' ಎಂದ ಪತ್ರಕತರ್ೆ!
     ನವದೆಹಲಿ: ನೂರು ಕೋಟಿಗೂ ಅಧಿಕ ಮಂದಿಯ ಆಧಾರ್ ಮಾಹಿತಿ ಸೋರಿಕೆ ಬಗ್ಗೆ ವರದಿ ಮಾಡಿದ 'ದ ಟ್ರಿಬ್ಯೂನ್' ಪತ್ರಕತರ್ೆ ರಚನಾ ಖೈರಾ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ ವಿಚಾರಕ್ಕೆ  ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಪತ್ರಕತರ್ೆ ಇದು ನನ್ನ ಬಹುದೊಡ್ಡ ಗಳಿಕೆ ಎಂದು ಹೇಳಿದ್ದಾರೆ.
    ಎಫ್ ಐಆರ್ ವಿಚಾರದ ಕುರಿತು ಮಾತನಾಡಿರುವ ಅವರು, ಇದುವರೆಗೆ ಎಫ್ಐಆರ್ ಪ್ರತಿ ನನ್ನ ಕೈಸೇರಿಲ್ಲ. ಆದ್ದರಿಂದ ತಕ್ಷಣಕ್ಕೆ ಇದರ ವಿವರಗಳನ್ನು ನೀಡುವುದು ಕಷ್ಟಸಾಧ್ಯ. ಆದರೆ ಆಧಾರ್ ಮಾಹಿತಿ ಸೋರಿಕೆ  ಸಂಬಂಧಿಸಿದಂತೆ ನಾನು ಮಾಡಿದ್ದ ವರದಿಯನ್ನು ನೋಡಿಯಾದರೂ ಯುಐಎಡಿಎ ಕ್ರಮಕ್ಕೆ ಮುಂದಾಗಿದೆ ಎಂಬುದೇ ಸಂತಸದ ವಿಷಯ.ನನ್ನ ವರದಿಯ ಮೇಲೆ ಯುಐಡಿಎಐ ಕ್ರಮ ಕೈಗೊಂಡ ಬಗ್ಗೆ ನನಗೆ ಸಂತಸವಿದೆ. ಎಫ್  ಐಆರ್ ಜತೆಗೆ ಎಲ್ಲೆಲ್ಲಿ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಸಕರ್ಾರ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಅವರು ಹೇಳಿದ್ದಾರೆ.
ಅಂತೆಯೇ "ನಿಮ್ಮ ವರದಿಯನ್ನು ನೀವು ಸಮಥರ್ಿಸಿಕೊಳ್ಳುತ್ತೀರಾ" ಎಂಬ ಪ್ರಶ್ನೆಗೆ, ಖಂಡಿತಾ ಹೌದು ಎಂದು ಹೇಳಿರುವ ರಚನಾ,  "ಖಂಡಿತವಾಗಿಯೂ ಅದರ ಪ್ರತಿ ಶಬ್ದಗಳನ್ನು ನಾನು ಸಮಥರ್ಿಸಿ ಕೊಳ್ಳುತ್ತೇನೆ. ಪ್ರಸ್ತುತ ನನ್ನ ಕೈಗೆ  ಎಫ್ ಆರ್ ಪ್ರತಿ ಲಭಿಸಿಲ್ಲ. ಅದರಲ್ಲಿ ಯಾವ ಅಂಶಗಳನ್ನು ಉಲ್ಲೇಖಿಸಿದ್ದಾರೆ ಎಂಬ ವಿಚಾರ ತಿಳಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಇನ್ನು ಈ ಪ್ರಕರಣದಲ್ಲಿ ಚಂಡೀಗಢ    ಮಾಧ್ಯಮ ವಲಯ ಮಾತ್ರವಲ್ಲದೇ ರಾಷ್ಟ್ರೀಯ  ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಬೆಂಬಲಕ್ಕೆ ನಿಂತಿವೆ. ಈ ವರದಿಯನ್ನು ಮಾಧ್ಯಮ ಕ್ಷೇತ್ರದ ದಿಗ್ಗಜರು ಹೊಗಳಿದ್ದಾರೆ. ಅಂತೆಯೇ ನನ್ನ ಪತ್ರಿಕಾ ಸಂಸ್ಥೆ ಕೂಡ ನನಗೆ ಅಗತ್ಯವಾದ ಎಲ್ಲ ಕಾನೂನು ನೆರವು ನೀಡುವ  ಭರವಸೆ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
   ಜೊತೆಗೆ ಸಕರ್ಾರ ಈ ಎಲ್ಲ ಬೆಳವಣಿಗೆಗಳನ್ನು ನೋಡುತ್ತಿದ್ದು, ಪ್ರಕರಣದ ವಿಚಾರದಲ್ಲಿ ಶೀಘ್ರವೇ ಸಕರ್ಾರದ ಪ್ರತಿಕ್ರಿಯೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries