HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಬಂಟರ ಸಂಘದ ಸಭೆ
  ಬದಿಯಡ್ಕ: ಬಂಟರ ಯಾನೆ ನಾಡವರ ಮಾತೃಸಂಘದ ಮಹಿಳಾ ವಿಭಾಗದ ನೇತೃತ್ವದಲ್ಲಿ ಜ.26 ರಂದು ಮಂಗಳೂರು ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ನಡೆಯಲಿರುವ ಬಂಟ ಮಹಿಳಾ ಸಂಗಮದ ಯಶಸ್ವಿಗೆ ವಿಶೇಷ ಪೂರ್ವಭಾವೀ ಸಭೆ ಬುಧವಾರ ಕುಂಬಳೆ ಫಿಕರ್ಾ ಬಂಟರ ಸಂಘದ ಆಶ್ರಯದಲ್ಲಿ ಬದಿಯಡ್ಕದಲ್ಲಿರುವ ಕಾಯರ್ಾಲಯದಲ್ಲಿ ನಡೆಯಿತು.
  ಕುಂಬಳೆ ಫಿಕರ್ಾ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ ವಹಿಸಿದ್ದರು. ಬಂಟರ ಯಾನೆ ನಾಡವರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಈ ಸಂದರ್ಭ ಮಾತನಾಡಿ, ಅನಾದಿ ಕಾಲದಿಂದಲೂ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಬೆಳೆದುಬಂದಿರುವ ಬಂಟ ಸಮಾಜವು ಮಹಿಳೆಯವರಿಗೆ ಗೌರವಯುತ ವಿಶೇಷ ಸ್ಥಾನಮಾನ ನೀಡಿದೆ. ಇಂದು ಹೆಣ್ಣು ಸಮಾಜದ ಮುಖ್ಯವಾಹಿನಿಯಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸುತ್ತಿದ್ದು, ಮಹಿಳಾ ಬೃಹತ್ ಶಕ್ತಿಯನ್ನು ಸಂಘಟನಾತ್ಮಕವಾಗಿ ಬೆಳೆಸಿ ಒಟ್ಟು ಸಮಾಜದ ಅಭಿವೃದ್ದಿಗೆ ಧಾರೆಯೆರೆಯುವಲ್ಲಿ ಇನ್ನಷ್ಟು ಚಟುವಟಿಕೆಗಳ ಅಗತ್ಯವಿದೆ ಎಂದು ಅವರು ತಿಳಿಸಿದರು. ಅಯೋಜಿಸಲಾಗುವ ಮಹಿಳಾ ಸಂಗಮವನ್ನು ಯಶಸ್ವಿಗೊಳಿಸಿ ಇತರರಿಗೆ ಸ್ಪೂತರ್ಿನೀಡವಲ್ಲಿ ಕಾಯರ್ೋನ್ಮುಖರಾಗಬೇಕು ಎಂದು ಅವರು ಕರೆನೀಡಿದರು.
   ಬಂಟರ ಸಂಘದ ಜಿಲ್ಲಾ ಪದಾಧಿಕಾರಿ ಚಂದ್ರಹಾಸ ರೈ ಪೆರಡಾಲಗುತ್ತು, ಡಾ.ವಿದ್ಯಾಮೋಹನ್ದಾಸ್ ರೈ, ಮಂಗಳೂರು ಮಾತೃಸಂಘದ ಕಾಸರಗೋಡು ತಾಲೂಕು ಸಹಸಂಚಾಲಕ ಮುಕ್ತಾನಂದ ರೈ, ಸದಸ್ಯೆ ಲತಾ ಬಿ.ರೈ ನಾರಂಪಾಡಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
  ನಿರಂಜನ ರೈ ಪೆರಡಾಲ, ರವೀಂದ್ರನಾಥ ಶೆಟ್ಟಿ ವಳಮಲೆ, ಮೋನಪ್ಪ ಆಳ್ವ, ಕೃಷ್ಣಪ್ರಸಾದ್ ರೈ, ಕುಂಬಳೆ ಫಿಕರ್ಾ ಬಂಟರ ಸಂಘದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು. ಅಶೋಕ್ ರೈ ಕೊರೆಕ್ಕಾನ ಸ್ವಾಗತಿಸಿ, ಬಿ.ಎಸ್ ಗಾಂಭೀರ್ ವಂದಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries