HEALTH TIPS

No title

              ದೇವರ ಸ್ವಂತ ನಾಡಿಗೆ ಮೂಗುಮುಚ್ಚಿ ಆಗಮಿಸಬೇಕಾದ ದುವರ್ಿಧಿ-ಕಡತದಲ್ಲೇ ಉಳಿದ ಶುಚಿತ್ವ ಕೇರಳ-ಸುಂದರ ಕೇರಳ
         
    ಉಪ್ಪಳ: ದೇವರ ಸ್ವಂತ ನಾಡಾದ ಕೇರಳದ ತುತ್ತ ತುದಿಯ ತಾಲೂಕು ಮಂಜೇಶ್ವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ರಮುಖ ಪೇಟೆಗಳಾದ ಮಂಜೇಶ್ವರ, ಹೊಸಂಗಡಿ,ಉಪ್ಪಳ,ಕೈಕಂಬ, ನಾಯಬಝರ್ ಮತ್ತು ಕುಂಬಳೆಯಲ್ಲಿ ಬಿದ್ದಿರುವ ತ್ಯಾಜ್ಯದ ರಾಶಿಗಳು ತಲೆತಗ್ಗಿಸುವಂತೆ ಮಾಡಿದೆ...ಭಕ್ತಿಯಿಂದಲ್ಲ...ಮೂಗುಮುಚ್ಚುವ ವಾಸನೆಯಿಂದ!
   ಸಾರ್ವಜನಿಕ ಪ್ರದೇಶದಲ್ಲಿ ಮಾಲಿನ್ಯ ನಿಕ್ಷೇಪಿಸುವವರ ವಿರುದ್ಧ ರೂ 10,000 ವರೆಗಿನ ದಂಡ ವಿಧಿಸುವ ಮತ್ತು ಜೈಲು ವಾಸದಂತಹ ಅನೇಕ ಕಠಿಣ ಕ್ರಮದ ಅದೆಷ್ಟೋ ಕಾನೂನುಗಳಿದ್ದರೂ, ಇಂತಹ ಕಾನೂನುಗಳನ್ನು ಜಾರಿಗೆ ತರಬೇಕಾದ ಅನೇಕ ಅಧಿಕಾರಿಗಳು (ಅರೋಗ್ಯ ಇಲಾಖೆ, ಪಂಚಾಯತು ಆಡಳಿತ ಸಮಿತಿ, ಪೊಲೀಸ್ ಇಲಾಖೆ...ಇತ್ಯಾದಿ ) ಮಂಜೇಶ್ವರ ಮಂಡಲದ ಪ್ರತಿ ಪಂಚಾಯತಿನ  ವ್ಯಾಪ್ತಿಯಲ್ಲಿ ಇದ್ದರು, ಸಾರ್ವಜನಿಕ ಪ್ರದೇಶಗಳಲ್ಲಿ ಮಾಲಿನ್ಯ ನಿಕ್ಷೆಪಿಸುವ ಸಮಾಜ ಘಾತುಕರ ವಿರುದ್ಧ ಧ್ವನಿಯೆತ್ತಲು ಸಾಧ್ಯವಾಗದಿರುವುದು ವಿಪಯರ್ಾಸವೇ ಸರಿ.
    ಉಪ್ಪಳ ನಯಾಬಝಾರ್ ಪೇಟೆಯ ಪರಿಸರದಲ್ಲಿ ಅರೋಗ್ಯ ಇಲಾಖೆಯ  ಸರಕಾರಿ ಆಸ್ಪತ್ರೆಯ ಮತ್ತು ಅನೇಕ ಸರಕಾರಿ ಕಚೇರಿಗಳ  ಮುಂಭಾಗದಲ್ಲಿಯೇ ತ್ಯಾಜ್ಯಗಳ ಬೆಟ್ಟವೇ ನಿಮರ್ಾಣಗೊಂಡಿರುವುದು ಈ ಇಲಾಖೆಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
   ತ್ಯಾಜಗಳಿರುವ ಈ ಎಲ್ಲಾ ಪ್ರದೇಶಗಳು  ಸಂಪೂರ್ಣ ದುರ್ಗಂಧ ಬಿರುತ್ತಿದ್ದು  ಪರಿಸರದಲ್ಲಿರುವ ಸಾರ್ವಜನಿಕರು ಮತ್ತು ಯಾತ್ರಿಕರು ಮೂಗು ಮುಚ್ಚಿ ಹೋಗಬೇಕಾದ ಸ್ಥಿತಿ ನಿಮರ್ಾಣವಾಗಿದ್ದು, ಇದರಿಂದ ಪ್ರಸ್ತುತ ಹಾಗು ಮುಂದಿನ ಪೀಳೆಗೆಯ ಮಾನವ- ಪ್ರಾಣಿ  ಸಂಕುಲಕ್ಕೆ  ಆಗುವ ಅನಾಹುತದ ಬಗ್ಗೆ ಸಂಪೂರ್ಣ ಸಾಕ್ಷರತಾ ಕೇರಳದ ಜನತೆಗೆ  ಕನಿಷ್ಠ ಅರಿವು ಇಲ್ಲದಿರುವುದು ತಲೆತಗ್ಗಿಸುವಂತೆ ಮಾಡುತ್ತಿದೆ. 
  ಮಾಲಿನ್ಯಗಳ ರಾಶಿಯ ಮಧ್ಯದಲ್ಲಿ  "ಇಲ್ಲಿ ಮಾಲಿನ್ಯ ನಿಕ್ಷೇಪಿಸುವುದು ಕಾನೂನು ಪ್ರಕಾರ ಅಪರಾಧ" ಎಂದು  ಗ್ರಾಮ ಪಂಚಾಯತು ಕಾರ್ಯದಶರ್ಿಯವರ ಸೂಚನಾ ಫಲಕವಿರುವುದು ಕಾರ್ಯದಶರ್ಿ ಹುದ್ದೆಗೆ  ಸಮಾಜ ಘಾತುಕರು ನೀಡಿದ ಗೌರವವೆಂದು ಪರಿಗಣಿಸಬೇಕಾಗುತ್ತದೆ. ಇಂತವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸಾಧ್ಯವಾಗದಿದ್ದರೆ, ಗೌರವಾನ್ವಿತ  ಕಾರ್ಯದಶರ್ಿಯವರ ಫಲಕವನ್ನಾದರೂ ತೆರವುಗೊಳಿಸಬೇಕೆಂದು ಅಧಿಕೃತರಲ್ಲಿ ಸಾರ್ವಜನಿಕರು  ಕಳಕಳಿಯಿಂದ ಮನವಿಮಾಡುತ್ತಿರುವುದು ಕಂಡುಬಂದಿದೆ.
    ಸಾಂಕ್ರಾಮಿಕ ರೋಗಭೀತಿ:
   ಹೆದ್ದಾರಿಯ ಬದಿಗಳಲ್ಲಿ ಕೊಳೆದು ದುನರ್ಾತ ಬಿರುತ್ತಿರುವ ಕಸದ ರಾಶಿಯಿಂದ ರೋಗಕಾರಕಗಳ ಸಂತಾನೋತ್ಪತ್ತಿಗೆ ದಾರಿ ಮಾಡಿ ರೋಗರುಜಿನಗಳು ಕಂಡುಬರತೊಡಗಿದೆ. ಈಗಾಗಲೇ ಉಪ್ಪಳ, ಹೊಸಂಗಡಿ, ಪೆರಿಂಗಡಿ, ಐಲ ಮೊದಲಾದೆಡೆ ಚರ್ಮ ವ್ಯಾದಿಗಳು ಉಲ್ಬಣಗೊಳ್ಳುವ ಸೂಚನೆಗಳು ಕಂಡುಬರತೊಡಗಿದೆ. ಜೊತೆಗೆ ಕುಡಿಯುವ ನೀರೂ ಮಲಿನಗೊಳ್ಳುತ್ತಿರುವ ಬಗ್ಗೆ ಚಸಾರ್ವಜನಿಕರು ತೀವ್ರ ಆತಂಕ ವ್ಯಕ್ಪಡಿಸಿದ್ದಾರೆ. ರಾ.ಹೆದ್ದಾರಿಯ ಪಕ್ಕದಲ್ಲೇ ಇರುವ ಮಂಗಲ್ಪಾಡಿ, ಉಪ್ಪಳ ಸರಕಾರಿ ಹೈಸ್ಕೂಲುಗಳು, ಐಲ ಬೋವಿ ಶಾಲೆ ಮೊದಲಾದ ವಿದ್ಯಾಸಂಸ್ಥೆಗಳ ವಿದ್ಯಾಥರ್ಿಗಳಿಗೆ, ಶಿಕ್ಷಕರಿಗೆ ಹಲವು ಅಸೌಖ್ಯಗಳು ಕಾಣಿಸಿಕೊಂಡಿರುವುದು ಹೆಚ್ಚು ಆತಂಕ ಮೂಡಿಸಿದೆ.
    ಅಧಿಕೃತರು ಎಚ್ಚೆತ್ತುಕೊಳ್ಳದಿದ್ದಲ್ಲಿ ಜೀವಹಾನಿಯ ದಿನಗಳು ದೂರವಿಲ್ಲ.
   ಎನಂತಾರೆ:
  ಮಾಲಿನ್ಯ ನಿಯಂತ್ರಣದ ಬಗ್ಗೆ ಸ್ಥಳೀಯರು, ಜನರು ಸ್ವತಃ ನಿಧರ್ಾರ ಕೈಗೊಳ್ಳಬೇಕು. ಗ್ರಾ.ಪಂ. ವತಿಯಿಂದ ಈಗಾಗಲೇ ಬೇಕೂರು ಸಮೀಪದ ಕುಬಣೂರಲ್ಲಿ ಮಾಲಿನ್ಯ ನಿಕ್ಷೇಪ ಮತ್ತು ಅದರಿಂದ ಎರೆಹುಳ ಗೊಬ್ಬರ ತಯಾರಿಯ ಪ್ಲಾಂಟ್ ನಿಮರ್ಿಸಲಾಗಿದ್ದು, ಬೆಳಿಗ್ಗೆ ದಿನನಿತ್ಯ ಮಾಲಿನ್ಯಗಳನ್ನು ಸಂಗ್ರಹಿಸಿ ಇಲ್ಲಿ ನಿಕ್ಷೇಪಿಸಲಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯಗಳನ್ನು ಪ್ರತ್ಯೇಕವಾಗಿ ಇರಿಸಿ ಅದನ್ನು ಇಲ್ಲವಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಿತ್ಯ ಬೆಳಿಗ್ಗೆ ಹೆದ್ದಾರಿಯಿಂದ ಮಾಲಿನ್ಯಗಳನ್ನು ಪ್ಲಾಂಟ್ ಗೆ ವಿಲೇವಾರಿಗೊಳಿಸಿದರೂ ಸಂಜೆ ವೇಳೆ ಮತ್ತೆ ಎಲ್ಲಡೆ ಮಾಲಿನ್ಯ ತುಂಬಿತುಳುಕುತ್ತಿದ್ದು, ಈ ಬಗ್ಗೆ ತೊಂದರೆ ನೀಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಗ್ರಾ.ಪಂ. ಶೀಘ್ರ ಕಾನೂನು ಜಾರಿಗೊಳಿಸುವುದು.
          ಶಾಹುಲ್ ಹಮೀದ್ ಬಂದ್ಯೋಡು
       ಅಧ್ಯಕ್ಷರು ಮಂಗಲ್ಪಾಡಿ ಗ್ರಾಮ ಪಂಚಾಯತು.
 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries