HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಉಬ್ರಂಗಳ ಬಡಗು ಶಬರಿಮಲೆ ಕ್ಷೇತ್ರ ಜೀಣರ್ೋದ್ಧಾರಕ್ಕೆ ಸಹಾಯಧನ ಹಸ್ತಾಂತರ
    ಬದಿಯಡ್ಕ: ಬಡಗು ಶಬರಿಮಲೆ ಎಂದೇ ಖ್ಯಾತಿ ಪಡೆದಿರುವ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಜೀಣರ್ೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ. ಶಿವರಾತ್ರಿ ಮಹೋತ್ಸವದಂದು ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಸಂತಿ ಟೀಚರ್ ಅಧ್ಯಕ್ಷತೆಯಲ್ಲಿ ಖ್ಯಾತ ಪ್ರಸೂತಿ ತಜ್ಞೆ ಡಾ.ಕೃಷ್ಣ ಕುಮಾರಿ ಕಾಂಞಂಗಾಡು `ಅದೃಷ್ಟ ಚೀಟಿ'ಯನ್ನು ಎತ್ತಿ ವಿಜೇತರನ್ನು ಆಯ್ಕೆಮಾಡಿದರು. ಅವರು ಮಾತನಾಡುತ್ತಾ ಮಹಿಳೆಯರ ಸಂಘಟಿತ ಶಕ್ತಿಯಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ಎಲ್ಲರ ಒಗ್ಗಟ್ಟಿನ ಪರಿಶ್ರಮದಿಂದ ಜೀಣರ್ೋದ್ಧಾರ ಕಾರ್ಯಗಳು ತ್ವರಿತಗತಿಯಲ್ಲಿ ಸಾಗಲಿ ಎಂದು ಶುಭಹಾರೈಸಿದರು.
    ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ ಯು.ಬಿ.ಕುಣಿಕುಳ್ಳಾಯ, ಪ್ರಧಾನ ಕಾರ್ಯದಶರ್ಿ ಬಾಬು ಮಾಸ್ತರ್ ಅಗಲ್ಪಾಡಿ, ಕೋಶಾಧಿಕಾರಿ ಈಶ್ವರ ರಾವ್ ಮೈಲ್ತೊಟ್ಟಿ, ಚಂದ್ರಶೇಖರ ಕುರುಪ್ಪ್ ಉಪಸ್ಥಿತರಿದ್ದರು. ಮಾತೃ ಸಮಿತಿಯ ಅಧ್ಯಕ್ಷೆ ಪ್ರತಿಭಾ ಜಯರಾಜ್ ಉಬ್ರಂಗಳ ಸ್ವಾಗತಿಸಿ, ಕಾರ್ಯದಶರ್ಿ ಬೇಬಿ ಉಬ್ರಂಗಳ ವಂದಿಸಿದರು.
   ಈ ಸಂದರ್ಭದಲ್ಲಿ ಕ್ಷೇತ್ರದ ಜೀಣರ್ೋದ್ಧಾರಕ್ಕೆ ಉಬ್ರಂಗಳ ದಿ.ಕುಟ್ಯ ಬೆಳ್ಚಪ್ಪಾಡರ ಸ್ಮರಣಾರ್ಥ ಅವರ ಪುತ್ರ  ದಾಮೋದರ ಯು. ಹಾಗೂ ಕುಟುಂಬದವರು ಸಹಾಯಧನವಾಗಿ 50,000 ರೂಪಾಯಿಯನ್ನು ಕ್ಷೇತ್ರ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries