HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಲಾಂಛನ ಬಿಡುಗಡೆ
   ಬದಿಯಡ್ಕ: ಸೀಮಿತ ಅವಧಿಯಲ್ಲೇ ಗಡಿನಾಡ ಸಾಂಸ್ಕೃತಿಕ ಪಯಣಗಳ ಮೂಲಕ ಗಮನ ಸೆಳೆದಿರುವ ಕಾಸರಗೋಡಿನ "ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ"ಯ ಲಾಂಛನವನ್ನು ಕನರ್ಾಟಕ ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅವರು ಶನಿವಾರ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಕೇರಳದ ಭಾಗವಾಗಿದ್ದು ಬಹುಭಾಷೆಗಳೆಡೆಯಲ್ಲಿ ಕನ್ನಡ ಪರಂಪರೆಯನ್ನು ಉಳಿಸಿ ಬೆಳವಣಿಗೆಗೆ ಕಾರ್ಯಪ್ರವೃತ್ತವಾಗಿರುವುದು ಪ್ರಶಂಸನೀಯ. ಕನ್ನಡದ ಏಳಿಗಾಗಿ ಯುವಜನರು ಒಂದಾಗಿ ಮುನ್ನಡೆಯುತ್ತಿರುವುದು ಗಮನೀಯ ಅಂಶ. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಕನ್ನಡದ ಚೆಲುವನ್ನು ಸಾರುವ ಅಕ್ಷರಮಾಲೆಯನ್ನು ಅಳವಡಿಸಿ ತಯಾರಿಸಿದ ಲಾಂಛನ ಭಾಷಾಪ್ರೇಮವನ್ನು ಸಾರುತ್ತಿದೆ. ಗಡಿಭಾಗದ ಜನರು ಭಾಷೆ ಹಾಗೂ ಇತರ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಕಾಸರಗೋಡಿನ ಕನ್ನಡಿಗರು ಈ ಸಮಸ್ಯೆಗಳನ್ನು ಬದಿಗಿಟ್ಟು ತಮ್ಮ ಹಾದಿಯಲ್ಲಿ ಕನ್ನಡದ ಕಂಪನ್ನು ಪಸರಿಸಿ ಅದನ್ನು ಮುಂದಿನ ಜನಾಂಗಕ್ಕೂ ಹಂಚುವ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
   ದ.ಕ.ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿ, ಸಾಹಿತಿ ಶಾಂತಪ್ಪ ಬಾಬು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಪ್ರಭಾಕರ ಕಲ್ಲೂರಾಯ ಬೆಳ್ಳೂರು, ಅಕಾಡೆಮಿಯ ಉಪಾಧ್ಯಕ್ಷ ಪ್ರೊ.ಎ. ಶ್ರೀನಾಥ್, ಝೆಡ್.ಎ.ಕಯ್ಯಾರು, ಕನರ್ಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಶ್ರೀಕಾಂತ್ ನೆಟ್ಟಣಿಗೆ, ವಸಂತ ಬಾರಡ್ಕ, ಅಕಾಡೆಮಿಯ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಮೊದಲಾದವರು ಉಪಸ್ಥಿತರಿದ್ದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries